ಬೆಂಗಳೂರು ( BANGALORE ) ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹೊರವಲಯದ ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್ ನಲ್ಲಿ ಜಿ-20 ಶೃಂಗಸಭೆ ( G-20 SHRUNGA SABHE ) ನಡೆಯಲಿದೆ. 40 ದೇಶಗಳ ಪ್ರಮುಖ ಗಣ್ಯರು ಭಾಗಿಯಾಗುತ್ತಿದ್ದಾರೆ. ಈ ಹಿನ್ನಲೆ ಹೋಟೆಲ್ನ ಬಳಿ ನಂದಿ ಮಂಟಪ ಮಾದರಿಯಲ್ಲಿ ದ್ವಾರ ಬಾಗಿಲುಗಳ ನಿರ್ಮಾಣ ಮಾಡಲಾಗಿದ್ದು, ಗಣ್ಯರ ಭದ್ರತೆಗೆ 3 ಹಂತಗಳಲ್ಲಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಇನ್ನು ಹೋಟೆಲ್ ಸುತ್ತಮುತ್ತ 2 ಕಿಲೋ ಮೀಟರ್ ವರೆಗೆ ಸೂಕ್ಷ್ಮ ನಿಗಾ ಸ್ಥಳದಲ್ಲಿ ಎಸ್ಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಒಟ್ಟು ಎರಡು ಹಂತದಲ್ಲಿ ನಡೆಯಲಿರುವ ಐದು ದಿನಗಳ ಸಭೆ ಇದಾಗಿದ್ದು,ಮೊದಲಿಗೆ 40 ದೇಶಗಳ ಪ್ರಮುಖ ಅಧಿಕಾರಿಗಳಿಂದ 3 ದಿನ ಸಭೆ ನಡೆಯಲಿದೆ. ಭಾರತವು ಜಿ20 ಅಧ್ಯಕ್ಷ ಸ್ಥಾನವನ್ನು ಅಧಿಕೃತವಾಗಿ ಸ್ವೀಕರಿಸಿದ ಬಳಿಕ ಬರುವ ವಿದೇಶಿ ರಾಯಭಾರಿಗಳಿಗೆ ತೊಂದರೆಯಾಗಬಾರದು ಎಂದು ತುಂತುರು ಮಳೆಯಲ್ಲಿಯೇ ನಗರದ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿತ್ತು. ಇದರ ಜೊತೆಗೆ ಪ್ರವಾಸೋಧ್ಯಮಕ್ಕೆ ಒತ್ತು ನೀಡಿ ಐತಿಹಾಸಿಕ ದೇವಸ್ಥಾನಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಇದನ್ನು ಓದಿ : – ಅಪ್ಪ-ಮಕ್ಕಳು, ಅಣ್ತಮ್ಮಂದಿರಿಗೆ ಟಿಕೆಟ್ ಸಿಗಲ್ಲ – ಬಸನಗೌಡ ಪಾಟೀಲ್ ಯತ್ನಾಳ್