ಬೆಂಗಳೂರು : ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆ ಆಗಮಿಸುತ್ತಿದ್ದಂತೆ ಶಬರಿಮಲೆ ಅಯ್ಯಪ್ಪ ದರ್ಶನದ ಸಮಯವನ್ನು ವಿಸ್ತರಣೆ ಮಾಡುವುದಾಗಿ ಟಿಬಿಡಿ ಘೋಷಣೆ ಮಾಡಿದೆ.
ಶಬರಿಮಲೆ ಅಯ್ಯಪ್ಪ ದರ್ಶನದ ಸಮಯ ವಿಸ್ತರಣೆಯಿಂದಾಗಿ ದರ್ಶನಕ್ಕೆ ಬರುವ ಜನರಿಗೆ ಮತ್ತಷ್ಟು ಅನುಕೂಲವಾಗಲಿದೆ. ಅಲ್ಲದೆ ಹೆಚ್ಚಿನ ಜನರು ಆಗಮಿಸುವುದು ಹೆಚ್ಚಾಗಲಿದೆ ಪ್ರಸ್ತುತ ದಿನದಲ್ಲಿ ಸಂಜೆ 4 ರಿಂದ ರಾತ್ರಿ 11 ರವರೆಗೆ ಭಕ್ತರು ಅಯ್ಯಪ್ಪನ ದರ್ಶನ ಪಡೆಯುತ್ತಿದ್ದರು. ಆದರೆ ಇನ್ನು ಮುಂದೆ ಮಧ್ಯಾಹ್ನ 3 ಗಂಟೆಯಿಂದ ಆರಂಭವಾದ ದರ್ಶನ ರಾತ್ರಿ 11 ರವರೆಗೆ ನಡೆಯಲಿದೆ. ವರ್ಚುವಲ್ ಸರತಿ ಮೂಲಕ 90 ಸಾವಿರ ಬುಕ್ಕಿಂಗ್ ಆಗಿದೆ. ಪ್ರತಿ ದಿನ ಸ್ಥಳದಲ್ಲೇ 30 ಸಾವಿರ ಬುಕ್ಕಿಂಗ್ ಆಗುತ್ತಿದೆ ಎಂದು ಅಯ್ಯಪ್ಪ ದೇಗುಲದ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಐಜಿ ಸ್ಪರ್ಜನ್ ಕುಮಾರ್ ತಿಳಿಸಿದ್ದಾರೆ.
ಮಹಿಳೆಯರು, ವೃದ್ಧರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಶೀಘ್ರ ದರ್ಶನ ಪಡೆಯುವ ಕಾರ್ಯಕ್ಕೆ ಸ್ವಲ್ಪ ಮಟ್ಟಿಗೆ ಅಡ್ಡಿಯಾಗುತ್ತಿದೆ ಎಂದ ಅವರು ತಿಳಿಸಿದ್ದಾರೆ.
ಅಯ್ಯಪ್ಪನ ದರ್ಶನದ ಸಮಯವನ್ನು ಪ್ರತಿದಿನ 17 ಗಂಟೆಗಳಿಗೂ ಮೀರಿ ವಿಸ್ತರಿಸುವಂತಿಲ್ಲ ಎಂದು ಟಿಬಿಡಿ ಹೇಳಿದೆ. ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕಾಯುತ್ತಿರುವ ಭಕ್ತರಿಗೆ ನೀರು, ಬಿಸ್ಕತ್ ವ್ಯವಸ್ಥೆ ಮಾಡಲಾಗುತ್ತಿದೆ.