ಡಾ.ಬಿ. ಆರ್ ಅಂಬೇಡ್ಕರ್ ರವರ ೬೬ ನೇ ಪುಣ್ಯ ಸ್ಮರಣೆ ಹಿನ್ನೆಲೆ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಸಿಎಂ ಬೊಮ್ಮಾಯಿ ( BASAVARAJ BOMMAI ) ಮಾಲಾರ್ಪಣೆ ಮಾಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಸಿಎಂ ಸೇರಿದಂತೆ ಸಚಿವರಾದ , ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ್ ಪೂಜಾರಿ , ಮಾಜಿ ಸಚಿವ ಆಂಜನೇಯ ಹಾಗೂ ವಿವಿಧ ಸಂಘಟನೆಯ ಮುಖಂಡರು ಭಾಗಿಯಾಗಿದ್ದರು.
ಇಂದು ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ ಮಹಾಪರಿನಿರ್ವಾಣ ದಿನದ ಅಂಗವಾಗಿ ವಿಧಾನ ಸೌಧದ ಮುಂಭಾಗದಲ್ಲಿರುವ ಅಂಬೇಡ್ಕರ್ ರವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ,ಗೌರವ ಅರ್ಪಿಸಿದೆನು. pic.twitter.com/ICwKiqw9O0
— Basavaraj S Bommai (@BSBommai) December 6, 2022
ಇದೇ ವೇಳೆ ಮಾತನಾಡಿದ ಅವರು, ಸಂವಿಧಾನ ಇಲ್ಲದಿದ್ರೆ ಏನಾಗ್ತಾ ಇತ್ತು ಅಂತ ಊಹೆ ಮಾಡೋದಕ್ಕೂ ಆಗಲ್ಲ. ನಿಜವಾದ ಭಾರತ ರತ್ನ ನಮ್ಮ ಅಂಬೇಡ್ಕರ್. ಸಂವಿಧಾನದ ಆಶಯವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗದವರಿಗೆ ಶಿಕ್ಷಣಕ್ಕೆ ನೀಡುತ್ತೇವೆ. ಮೈಸೂರು ,ಮಂಗಳೂರು, ಬೆಂಗಳೂರು, ಹಿಂದುಳಿದ ಮಹಿಳೆಯರಿಗೆ ಎಲ್ಲಾ ರೀತಿಯ ಅನುಕೂಲ ನಮ್ಮ ಸರ್ಕಾರ ಮಾಡಿ ಕೊಡುತ್ತೆ. ಪರಿವರ್ತನೆ ನಮ್ಮಿಂದನೇ ಪ್ರಾರಂಭ ಆಗಬೇಕು ಎಂದು ಹೇಳಿದ್ರು. ಇದನ್ನೂ ಓದಿ : – ಹಳ್ಳಿಹಕ್ಕಿ ವಿಶ್ವನಾಥ್ ಮರಳಿ ಕೈ ಹಿಡೀತಾರಾ…?
ಮಹಾರಾಷ್ಟ್ರ ಗಡಿ ತಗಾದೆ ವಿಚಾರ
ಮಹಾರಾಷ್ಟ್ರ ( MAHARASTRA ) ನಾಯಕರು ಬಹಳ ವರ್ಷದಿಂದ ವಿವಾದ ಮಾಡಿಕೊಂಡು ಬಂದಿದ್ದಾರೆ. ಜನರ ನಡುವೆ ಸಾಮರಸ್ಯ ಇದೆ. ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಇದ್ದು ಗೆಲ್ಲುವ ವಿಶ್ವಾಸವಿದೆ. ಚುನಾವಣೆ ದೃಷ್ಟಿಯಿಂದ ವಿವಾದ ಎಬ್ಬಿಸಲ್ಲ. ಜನರ ರಕ್ಷಣೆಗೆ ನಾವು ಬದ್ದವಾಗಿದ್ದೇವೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ರಕ್ಷಣೆ ಮಾಡಲು ಸರ್ಕಾರ ಸಿದ್ದವಾಗಿದೆ ಎಂದು ಹೇಳಿದ್ರು.
ಇದನ್ನೂ ಓದಿ : – ಶಿರಾದಲ್ಲಿ ಅಹೋರಾತ್ರಿ ಪಂಚರತ್ನ ರಥಯಾತ್ರೆ …!