ಕಳೆದ ಹಲವು ದಿನಗಳಿಂದ ಶಾಲಾ ಪಠ್ಯ ಪರಿಷ್ಕರಣೆ ವಿಚಾರ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪಠ್ಯ ಪುಸ್ತಕ ರಚನೆಯ ಗಂಧಗಾಳಿ ಗೊತ್ತಿಲ್ಲದ, ಶಿಕ್ಷಣ ತಜ್ಞನಲ್ಲದ ವ್ಯಕ್ತಿ ಮೂಲಕ ಪಠ್ಯ ಪರಿಷ್ಕರಣೆ ಎಷ್ಟು ಸರಿ ಎಂಬ ಪ್ರಶ್ನೆ ಎದುರಾಗಿದೆ.
ಪಠ್ಯ ಪುಸ್ತರ ರಚನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ( rohith chakra theertha ) ನನ್ನ ಕೂಡಲೇ ಹುದ್ದೆಯಿಂದ ಕೈಬಿಟ್ಟು, ಬಿಸಿ ನಾಗೇಶ್ (BC NAGESH) ರಾಜಿನಾಮೆ ನೀಡಬೇಕು ಎಂಬ ಕೂಗು ಕೇಳಿ ಬಂದಿದೆ. ಆದ್ರೆ ಶಿಕ್ಷಣ ಇಲಾಖೆ ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿಯೇ ದ್ವಿತೀಯ (PUC) ಪಿಯು ಇತಿಹಾಸ ಪಠ್ಯಪುಸ್ತಕ ಪರಿಷ್ಕರಣೆಗೆ ಸದ್ದಿಲ್ಲದೇ ತಯಾರಿ ನಡೆಸಿದೆ ಎನ್ನಲಾಗಿದೆ. ಇದನ್ನೂ ಓದಿ :- ಭಾರತ ಸೇರಿ 16 ದೇಶಗಳಿಗೆ ಪ್ರಯಾಣ ಮಾಡಬೇಡಿ- ತನ್ನ ಪ್ರಜೆಗಳಿಗೆ ನಿರ್ಬಂಧ ಹೇರಿದ ಸೌದಿ ಅರೇಬಿಯಾ
ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ನೇತೃತ್ವ ವಹಿಸುವಂತೆ ಸ್ವತಹ ಶಿಕ್ಷಣ ಸಚಿವರೇ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಪತ್ರಬರೆದು ಸೂಚಿಸಿದ್ದಾರೆ. ಪಿಯುಸಿ ಇತಿಹಾಸ ವಿಷಯದ 4.2 ನೇ ಅಧ್ಯಾಯ ಹೊಸ ಧರ್ಮಗಳ ಉದಯ ಪಠ್ಯದಲ್ಲಿ ಅವಹೇಳನ ಮಾಡಲಾಗಿದೆ. ನಿರ್ದಿಷ್ಟ ಸಮುದಾಯಗಳಿಗೆ ಧಕ್ಕೆ ಬರುವಂತ ವಿಷಯವಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಪಠ್ಯ ಪರಿಶೀಲನೆಗಾಗಿ ಶಿಕ್ಷಣ ಇಲಾಖೆಯಿಂದ ಸಮಿತಿ ರಚನೆ ಮಾಡಲಾಗಿದೆ. ಶ್ರೀ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ :- ಇಂದಿನಿಂದ ಕ್ವಾಡ್ ಶೃಂಗಸಭೆ- ಟೋಕಿಯೋದಲ್ಲಿ ಮೋದಿಗೆ ಆತ್ಮೀಯ ಸ್ವಾಗತ