ತಮ್ಮ ಅಂಗಡಿಯ ಒಳಗೆ ಕ್ರೂರ ಪಾತಕಿಗಳಿಂದ ಬರ್ಬರವಾಗಿ ಹತ್ಯೆಯಾದ ಟೈಲರ್ ಕನ್ಹಯ್ಯ ಲಾಲ್ (Kanhaiyal lal) ಮಕ್ಕಳಿಗೆ ಸರ್ಕಾರಿ ಉದ್ಯೋಗ (Government job) ಗಳನ್ನು ನೀಡಲು ರಾಜಸ್ಥಾನ ಸರ್ಕಾರ (Rajasthan government) ನಿರ್ಧರಿಸಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok gehlot) ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕನ್ಹಯ್ಯ ಲಾಲ್ ತೇಲಿ ಗಂಡುಮಕ್ಕಳಾದ ಯಶ್ ತೇಲಿ ಮತ್ತು ತರುಣ್ ತೇಲಿ ಅವರನ್ನು ಸರ್ಕಾರಿ ಸೇವೆಗೆ ನೇಮಕ ಮಾಡಿಕೊಳ್ಳಲು ಸಂಪುಟ ನಿರ್ಧರಿಸಿದೆ” ಎಂದು ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.
“ಮೃತ ಕನ್ಹಯ್ಯ ಲಾಲ್ ಕುಟುಂಬದ ಜೀವನೋಪಾಯಕ್ಕೆ ಬೇರೆ ಯಾವುದೇ ಮೂಲವಿಲ್ಲ. ಅವರ ಅವಲಂಬಿತರಿಗೆ ಕೆಲಸ ನೀಡಿದರೆ ಅವರ ಜೀವನ ಸುಗಮವಾಗಿ ನಡೆಯಲಿದೆ. ಕುಟುಂಬಕ್ಕೆ ಆರ್ಥಿಕ ಮತ್ತು ಮಾನಸಿಕ ಸಹಾಯ ಸಿಗಲಿದೆ” ಎಂದು ಹೇಳಿದ್ದಾರೆ. ಇದನ್ನು ಓದಿ :- ಹಂತಕರನ್ನು ಗಲ್ಲಿಗೇರಿಸಿ – ಇಂದು ನನ್ನ ಗಂಡ, ನಾಳೆ ಮತ್ತೊಬ್ಬರು – ಕನ್ನಯ್ಯಲಾಲ್ ಪತ್ನಿ ಆಗ್ರಹ
ಜೂನ್ 28ರಂದು ಮಧ್ಯಾಹ್ನ 3 ರಿಂದ 3.30ರ ಅವಧಿಯಲ್ಲಿ ಕನ್ನಯ್ಯ ಲಾಲ್ ಅವರನ್ನು ಭಯಾನಕವಾಗಿ ಇರಿದು ಕೊಲೆ ಮಾಡಲಾಗಿತ್ತು. ಪ್ರವಾದಿ ಮಹಮ್ಮದ್ ಅವರನ್ನು ಅವಮಾನಿಸಿದ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ (Nupur sharma) ಅವರನ್ನು ಕನ್ಹಯ್ಯ ಲಾಲ್ ಬೆಂಬಲಿಸಿದ ಕಾರಣಕ್ಕೆ ಹತ್ಯೆಗೈಯ್ಯಲಾಗಿತ್ತು. ಇದನ್ನು ಓದಿ :- ನೂಪುರ್ ಶರ್ಮಾ ಇಡೀ ದೇಶದ ಕ್ಷಮೆ ಯಾಚಿಸಬೇಕು – ಬಿಜೆಪಿ ನಾಯಕಿಗೆ ಸುಪ್ರೀಂಕೋರ್ಟ್ ಛೀಮಾರಿ