40% ಕಮಿಷನ್ ಆರೋಪವನ್ನು ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ನೀಡಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ( siddaramaiah ) ಆಗ್ರಹಿಸಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಬುಧವಾರ ಮಾತನಾಡಿದ ಅವರು, ಕೆಂಪಣ್ಣ ( kemapnna ) ಮಾಡಿರುವ ಭ್ರಷ್ಟಾಚಾರದ ಆರೋಪದ ಬಗ್ಗೆ ನಾವು ನ್ಯಾಯಾಂಗ ತನಿಖೆ ನೀಡಲು ಒತ್ತಾಯ ಮಾಡ್ತೇವೆ ಎಂದರು. ಸರ್ಕಾರ ನ್ಯಾಯಾಂಗ ತನಿಖೆಗೆ ಮಾಡದಿದ್ದರೆ ಜನರ ಮುಂದೆ ಹೋಗ್ತೇವೆ. ಜನ ಯಾವ ತೀರ್ಪು ಬೇಕು ಕೊಡ್ತಾರೆ ಎಂದು ಹೇಳಿದರು.
ಸರ್ಕಾರ ಹಾಗೂ ಸಚಿವರ ವಿರುದ್ಧ ಗುರುತರವಾದ ಆರೋಪ ಬಂದಿದೆ. ಇದನ್ನು ನ್ಯಾಯಾಂಗ ತನಿಖೆಗೆ ನೀಡಲು ನೀವ್ಯಾಕೆ ಹೆದರುತ್ತೀರಿ? ನಿಮ್ಮ ತಪ್ಪಿದ್ದರೆ ತಾನೇ ಕೊಡದೇ ಇರೋದು. ನಾನು ಪ್ರತಿಪಕ್ಷ ನಾಯಕನಾಗಿ ಕೇಳ್ತೇನೆ. ಸರ್ಕಾರ ನ್ಯಾಯಾಂಗ ತನಿಖೆಗೆ ಕೊಡಲಿ ಎಂದು ಒತ್ತಾಯಿಸಿದರು. ಗುತ್ತಿಗೆದಾರ ಸಂಘದವರು ಒಂದು 25 ಜನ ಸದಸ್ಯರು ಬಂದಿದ್ದರು. ಸಂಘದ ಅಧ್ಯಕ್ಷ ಕೆಂಪಣ್ಣ ( kempanna ) ನವರು ಬಂದಿದ್ದರು. ಅವರು ನನಗೆ ಒಂದು ಮನವಿ ಕೊಟ್ಟಿದ್ದಾರೆ. 30%, 40% ಕಮಿಷನ್ ಟೆಂಡರ್ ಒಪ್ಪಿಗೆಗೂ ಮುನ್ನವೇ ಕೊಡಬೇಕು. ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದು ವರ್ಷವಾಯ್ತು. ಅವರು ಏನೂ ಕ್ರಮ ತೆಗೆದುಕೊಂಡಿಲ್ಲ. ಇಲ್ಲಿನ ಸರ್ಕಾರ ಕೂಡ ಕ್ರಮ ಜರುಗಿಸಿಲ್ಲ ಎಂದರು.ನ್ಯಾಯಾಂಗ ತನಿಖೆ ಮಾಡಿದರೆ ನಾವು ದಾಖಲೆ ಕೊಡ್ತೇವೆ. ಇದನ್ನು ನಾವು ಸಾಬೀತು ಮಾಡುತ್ತೇವೆ. ನ್ಯಾಯಾಂಗ ತನಿಖೆಗೆ ಕೊಡಬೇಕು ಎಂದಿದ್ದಾರೆ ಎಂದರು. ಇದನ್ನೂ ಓದಿ : – ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳ ಮೇಯರ್, ಉಪ ಮೇಯರ್ ಸ್ಥಾನಗಳಿಗೆ ಮೀಸಲಾತಿ ನಿಗದಿ
ಗುತ್ತಿಗೆದಾರರ ಸಂಘದ ಪ್ರಕಾರ ಇಷ್ಟೊಂದು ಕಿರುಕುಳ ಇರಲಿಲ್ಲ. ಮೊದಲು ಭ್ರಷ್ಟಾಚಾರ ಆಮೆ ವೇಗದಲ್ಲಿತ್ತು. ಈಗ ಭ್ರಷ್ಟಾಚಾರ ಶರವೇಗದಲ್ಲಿದೆ ಅಂತ ಹೇಳಿದ್ದಾರೆ. ನಾನು ಇದರ ಬಗ್ಗೆ ಅಸೆಂಬ್ಲಿಯಲ್ಲಿ ಪ್ರಸ್ತಾಪಿಸ್ತೇನೆ. ಇಲ್ಲಿಯವರೆಗೆ 22 ಸಾವಿರ ಕೋಟಿ ಬಿಲ್ ಬಾಕಿ ಇದೆಯಂತೆ. ಇನ್ನೂ ಬಿಲ್ ಕೊಟ್ಟಿಲ್ಲ ಎಂದು ಕೆಂಪಣ್ಣನವರು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ರು.
ಇದನ್ನೂ ಓದಿ : – ಸಿದ್ದರಾಮಯ್ಯ ಸುಳ್ಳು ಎರಡು ನಾಣ್ಯದ ಒಂದೇ ಮುಖಗಳು – ಸಿ.ಟಿ ರವಿ ಗಂಭೀರ ಆರೋಪ