ಮಾಜಿ ಸಿಎಂ ಯಡಿಯೂರಪ್ಪ (Yediyurappa) ಹಿಂದೆ ಗನ್ ಮ್ಯಾನ್ (Gun man) ಇರ್ತಾರೆ. ಗನ್ ಮ್ಯಾನ್ ಗಳಲ್ಲಿ ಒಬ್ಬರು ED ಅಧಿಕಾರಿ ಇರ್ತಾರೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ (Lakshman) ಗಂಭೀರ ಆರೋಪ ಮಾಡಿದ್ದಾರೆ. ಯಡಿಯೂರಪ್ಪ ಜುಟ್ಟು ಮೋದಿ ಅಮಿತ್ ಶಾ (Amit shah) ಕೈಯಲ್ಲಿದೆ.
ಯಡಿಯೂರಪ್ಪ ಬಿಜೆಪಿ ವಿರುದ್ಧ ಮಾತನಾಡಿದ್ರೆ ಮೂರು ವರ್ಷ ಜೈಲು ಗ್ಯಾರಂಟಿ. ಜೊತೆಗೆ ಅವರ ಮನೆಯವರು 15 ಜನ ಜೈಲು ಪಾಲಾಗ್ತಾರೆ ಎಂದು ಹೇಳಿದ್ದಾರೆ. ಹೀಗಾಗಿ ಯಡಿಯೂರಪ್ಪ ಪಕ್ಷದ ವಿರುದ್ಧ ಏನೂ ಮಾತನಾಡಲ್ಲ. ಯಾಕಂದ್ರೆ ಗನ್ ಮ್ಯಾನ್ ರೂಪದಲ್ಲಿ ಇಡಿ ಇರೋದ್ರಿಂದ ಎಂದು ವಕ್ತಾರ ಲಕ್ಷ್ಮಣ್ ತಿಳಿಸಿದ್ದಾರೆ. ಇದನ್ನು ಓದಿ : – ಸಿಎಂ ಬೊಮ್ಮಾಯಿ ವೀಕ್ ಲೀಡರ್ -ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ಇದೇ ವೇಳೆ, ಚಿಕ್ಕಮಗಳೂರು (Chikkamagaluru) ಶಾಸಕ ಸಿ.ಟಿ.ರವಿ ರಾಜ್ಯದಲ್ಲಿ ದಿನನಿತ್ಯ ಗುಲ್ಲೆಬ್ಬಿಸುವವರು. ಇವತ್ತು ಅವರ ಮೊದಲ ಎಪಿಸೋಡ್ ರಿಲೀಸ್ ಮಾಡ್ತಿದ್ದೇವೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು 1990 ರಿಂದ 96 ರವರೆಗೆ ಏನೂ ಇರಲಿಲ್ಲ. ಈಗ ಒನ್ ಆಫ್ ದಿ ರೌಡಿಶೀಟರ್. ಟೌನ್ ಹಾಗೂ ರೂರಲ್ ಠಾಣೆಯಲ್ಲಿ ರೌಡಿ ಶೀಟರ್ ಕೇಸ್ ಇತ್ತು. ಇತ್ತೀಚೆಗೆ ಅದನ್ನ ತೆಗೆಸುವ ಪ್ರಯತ್ನ ಮಾಡಿದ್ದಾರೆ. ಈಗಲೂ ೪ ಕ್ರಿಮಿನಲ್ ಕೇಸ್ ಅವರ ಮೇಲಿದೆ. ಐಪಿಸಿ ೪೧೯,೪೨೦,೧೨೦,೧೨೦(ಬಿ) ಕೇಸ್ ಅವರ ಮೇಲಿವೆ. ಲೋಕಾಯುಕ್ತದಲ್ಲೂ ಇವರ ಮೇಲೆ ಕೇಸ್ ಇವೆ. ರವಿಗೆ ನಾವು ಕ್ರಿಮಿನಲ್ ಸಿಟಿ ರವಿ ಅಂತ ಕರೆಯಬೇಕು. 4 ಬಾರಿ ಚಿಕ್ಕಮಗಳೂರನ್ನ ಪ್ರತಿನಿಧಿಸಿದ್ದಾರೆ. ಇವತ್ತು ರಿಪಬ್ಲಿಕ್ ಆಫ್ ಚಿಕ್ಕಮಗಳೂರು ಮಾಡಿದ್ದಾರೆ. ಇವರ ಭಾವ ಹೆಚ್.ಪಿ.ಸುದರ್ಶನ್ ಚಿಕ್ಕಮ್ಮನ ಮಗಳನ್ನ ರವಿ ಮದುವೆಯಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಇವರದ್ದೇ ಹವಾ. ಶೇ 95 ರಷ್ಟು ಕಾಮಗಾರಿ ಇವರದ್ದೇ . ಚಿಕ್ಕಮಗಳೂರು ಮೆಡಿಕಲ್ ಕಾಲೇಜು 350 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದೆ. ಸುದರ್ಶನ್ ಬಾಲಾಜಿ ಶೇಖರ್ ಹೆಸರಿನಲ್ಲಿ ಇವರೇ ಕಾಮಗಾರಿ ಮಾಡ್ತಿದ್ದಾರೆ.
ಟೆಂಡರ್ ತೆಗೆದುಕೊಳ್ಳಬೇಕಾದರೆ 50% ಕಾಮಗಾರಿ ಆಗಿರಬೇಕು. ಹಾಗಾಗಿ ಕಾಮಗಾರಿ ಮಾಡಿಲ್ಲ. ಹೀಗಾಗಿ ರಾಮಲಿಂಗಂ ಕನ್ಸಟ್ರಕ್ಷನ್ ನಡಿ ಟೆಂಡರ್ ಮಾಡಿದ್ದಾರೆ ಎಂದು ಸಿ.ಟಿ.ರವಿ (CT.Ravi) ವಿರುದ್ಧ ಗಂಭೀ ಆರೋಪ ಮಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ. ಸಿ.ಟಿ. ರವಿ ವಸೂಲಿ ಗಿರಾಕಿ. ದತ್ತ ಜಯಂತಿಯನ್ನ ವಸೂಲಿಗೆ ಬಳಸಿಕೊಂಡಿದ್ದಾರೆ. ಈಗಲೂ ಸಿ.ಟಿ.ರವಿ ಅಂಗಡಿಗಳಿಂದ ವಸೂಲಿ ಮಾಡ್ತಾರೆ. ಸಿ.ಟಿ.ರವಿ ಪ್ರಮಾಣಿಕರೇ ಆಗಿದ್ದರೆ ತನಿಖೆ ಮಾಡಿಸಿ. ಡಿಕೆ ಬಗ್ಗೆ ನೀವು ಮಾತನಾಡ್ತೀರಲ್ಲ. ನಿಮ್ಮ ಆಸ್ತಿ ಎಲ್ಲಿಂದ ಬಂದಿದೆ. ನನಗೂ ಎರಡು ಲೀಗಲ್ ನೋಟಿಸ್ ಕೊಟ್ರಿ. ಮಾನನಷ್ಟ ಮೊಕದ್ದಮ್ಮೆ ಹಾಕ್ತೇವೆ ಅಂದ್ರಿ. ನಿಮ್ಮವರನ್ನ ಬಿಟ್ಟು ನನ್ನನ್ನ ಹಿಂಬಾಲಿಸ್ತಿದ್ದೀರ. ನಾನು ಇವತ್ತಿಗೂ ರೈಲಿನಲ್ಲೇ ಓಡಾಡ್ತಿದ್ದೇನೆ. ಯಾಕೆ ನೀವು ನೊಟೀಸ್ ಕೊಟ್ಟು ಸುಮ್ಮನಾದ್ರಿ ಎಂದು ಪ್ರಶ್ನಿಸಿದ್ರು. ಯಾಕೆ ನೀವು ಕೋರ್ಟ್ ಗೆ ಹೋಗಲಿಲ್ಲ. ದಾಖಲೆ ಸಮೇತ ನಾನು ಬರ್ತೇನೆ ಎಂದು ಸವಾಲು ಹಾಕಿದ್ರು.
ಇದನ್ನು ಓದಿ : – ನಾಳೆಯಿಂದ ಪಂಚರತ್ನ ರಥಯಾತ್ರೆ ಮರು ಆರಂಭ….!