ಪಕ್ಷ ಸಂಘಟನೆ ದೃಷ್ಠಿಯಿಂದ ಪ್ರವಾಸ ಕೈಗೊಂಡಿದ್ದೇನೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H D Kumaraswamy ) ತಿಳಿಸಿದ್ದಾರೆ.
ಏಪ್ರಿಲ್ 5 ರಿಂದ ಉತ್ತರ ಕರ್ನಾಟಕ ಭಾಗದ ಪಕ್ಷ ಸಂಘಟನೆಗೆ ಸಮಯ ನೀಡ್ತೇನೆ ಎಂದು ಹೇಳಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ನೀರಾವರಿ ಯೋಜನೆ ಪೂರ್ಣಗೊಳಿಸುವಲ್ಲಿ ಯಶಸ್ಸು ಕಂಡಿಲ್ಲ. ಅವರಿಗೆ ಯಾವುದೇ ಬದ್ದತೆ ಇಲ್ಲ. ಅಕ್ಕ ಪಕ್ಕದ ರಾಜ್ಯಗಳು ನೀರನ್ನ ಉಪಯೋಗ ಮಾಡಿಕೊಳ್ಳುತ್ತಿವೆ ಎಂದು ಕಿಡಿಕಾರಿದ್ರು. ಜನತಾ ಜಲಧಾರೆ (Janatha jaladhare) ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜೆಡಿಎಸ್ ಪಕ್ಷದ ಸಂಕಲ್ಪ ಇದೆ ಆಗಿದ್ದು ಅಧಿವೇಶನ ನಂತರ ಈ ಕಾರ್ಯಕ್ರಮ ಆರಂಭ ಮಾಡ್ತೇವೆ ಎಂದು ಹೇಳಿದ್ರು. ರಾಜ್ಯಕ್ಕೆ ಎರಡು ಪಕ್ಷಗಳಿಂದ ಅನ್ಯಾಯವಾಗ್ತಿದೆ ಎಂದು ಗುಡುಗಿದ್ರು.
ಕಾಂಗ್ರೆಸ್ ನವರ ಮಹದಾಯಿಗಾಗಿ ಪಾದಯಾತ್ರೆ ವಿಚಾರ ಕುರಿತಂತೆ ಮಾತನಾಡಿ, ಸಿದ್ದರಾಮಯ್ಯ(siddaramaiah) ಸಿಎಂ ಆಗಿದ್ದಾಗ, ಇಲ್ಲಿನ ಮಹಿಳೆಯರು ಹೋರಾಟಗಾರರ ಮೇಲೆ ಹಲ್ಲೆ ನಡೆಸಲಾಯಿತು. ರೈತರನ್ನ ಹೊಡೆದು ಅಟ್ಟಿದ್ದು ಕಾಂಗ್ರೆಸ್ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ರು. ಯಾವ ನೈತಿಕತೆ ಇಟ್ಕೊಂಡು ಪಾದಯಾತ್ರೆ ಮಾಡ್ತಾರೆ ಎಂದು ಪ್ರಶ್ನಿಸಿದ್ರು. ಹಿಜಾಬ್ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿ ಅವರ ಹೇಳಿಕೆಗೆ ನಾನು ಮಹತ್ವ ನೀಡಲ್ಲ.
ಸರ್ಕಾರಕ್ಕೆ ಬಹಳ ಸಲಹೆ ನೀಡಿದ್ದೇನೆ. ಹಿಜಾಬ್ ವಿಚಾರದಲ್ಲಿ ಸ್ವಾಮೀಜಿಗಳನ್ನ ಎಳೆದು ತರೋ ಅವಶ್ಯಕತೆ ಇರಲಿಲ್ಲ. ಅವರ ಹೇಳಿಕೆಯನ್ನ ರಾಜಕೀಯವಾಗಿ ದುರ್ಬಳಕೆ ಮಾಡೋ ಅವಶ್ಯಕತೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ರು. ಓರ್ವ ಸಭಾಧ್ಯಕ್ಷರು ಮುಂದೋದು ದಿನ ಎಲ್ಲರೂ ಆರ್ ಎಸ್ ಎಸ್ (RSS) ಸೇರಬೇಕಾಗುತ್ತೆ ಅಂತಾರೆ. ಆ ಜಾಗದ ಗೌರವ ಏನು ಅಂತ ತಿಳಿಯದೇ ಮಾತನಾಡಿದ್ರಲ್ಲ ಎಂದು ಕುಟುಕಿದ್ರು. ದೇಶದ ಭಾವೈಕತೆ, ಸಾಮರಸ್ಯ ಹಾಳು ಮಾಡೋ ಕೆಲಸ ಶುರುವಾಗಿದೆ. ಈಗ ಜನ ಎಚ್ಚರಗೊಳ್ಳಬೇಕು ಎಂದು ತಿಳಿಸಿದ್ರು.
ಇದನ್ನು ಓದಿ :- SIDDARAMAYYA – ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧ ಹಾಕುವುದರ ಹಿಂದೆ ಬಿಜೆಪಿಯ ಅಜೆಂಡಾ ಅಡಗಿದೆ – ಸಿದ್ದರಾಮಯ್ಯ