ಮಹದಾಯಿ (Mahadayi) ಯೋಜನೆ ಅನುಷ್ಠಾನ ವಿಚಾರ, ಗೋವಾ (Goa) ಸರ್ಕಾರದ ನಡೆಯ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಹುಬ್ಬಳ್ಳಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಈಗಾಗಲೇ ಕಾನೂನು ಹೋರಾಟವಾಗಿ ಸುಪ್ರೀಂ ಕೋರ್ಟ್ (Supreme court) ಆದೇಶದ ಮೇಲೆ ಟ್ರಿಬ್ಯುನಲ್ ರಚನೆಯಾಗಿದೆ. ಅದರ ಪರಿಶೀಲನೆ ಆಗಿ, ತೀರ್ಪು ನೀಡಿದೆ. ಮಹದಾಯಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದಿಂದ 2016 ರಲ್ಲಿ ಡಿಪಿಆರ್ ನೀಡಲಾಗಿತ್ತು. ಸದ್ಯ ಡಿಪಿಆರ್ ಗೆ ಸಹ ಅನುಮತಿ ನೀಡಿದೆ. ಕಾನೂನು ಹೋರಾಟವಾಗಿಯೇ ಇದೆಲ್ಲ ಆಗಿದೆ ಎಂದು ಹೇಳಿದ್ರು. ಇದನ್ನು ಓದಿ :- ನಾನ್ಯಾರಿಗೂ ಹೆದರಲ್ಲ… ಯಾರಿಗೂ ಬಗ್ಗಲ್ಲ ಗಂಡು ಮೆಟ್ಟಿದ ನಾಡಲ್ಲಿ ಹುಟ್ಟಿದವನು ನಾನು – ಜನಾರ್ದನ ರೆಡ್ಡಿ
ಇದೇ ವೇಳೆ ಹೆಚ್. ವಿಶ್ವನಾಥ್ (H.Vishwanath) ಅವರ ಹೇಳಿಕೆಗೆ ನಾನು ಯಾವತ್ತು ಪ್ರತಿಕ್ರಿಯಿಸಿಲ್ಲ. ಅವರು ಪದೇ ಪದೇ ಈ ರೀತಿ ಹೇಳಿಕೆ ನೀಡುತ್ತಿರುತ್ತಾರೆ. ಅದರ ಬಗ್ಗೆ ಹೆಚ್ಚು ಮಾತನಾಡುವ ಅವಶ್ಯಕತೆ ಇಲ್ಲ. ಫೆಬ್ರವರಿ 6 ರಂದು ಪ್ರಧಾನಿ ಮೋದಿ ರಾಜ್ಯದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನು ಓದಿ :- ಈಶ್ವರಪ್ಪ ಬಾಯಿ ಬಿಟ್ಟರೆ ಸಾಕು ಮನುಷ್ಯನ ನೀಚ ಸಂಸ್ಕಾರ ಆಚೆಗೆ ಬರುತ್ತದೆ – ಕಾಂಗ್ರೆಸ್ ಟ್ವೀಟ್