ರಾಮ ಭಕ್ತ ಹನುಮಂತನ ( HANUMANTHA ) ಜನ್ಮ ಸ್ಥಳ ಅಂಜನಾದ್ರಿ ಬೆಟ್ಟದ ಕಡೆಗೆ ಡಿ. 5ಕ್ಕೆ ಹನುಮ ಭಕ್ತರ ದಂಡು ಆಗಮಿಸಲಿದೆ. ರಾಜ್ಯದ ಬೇರೇ ಬೇರೆ ಭಾಗದ ಲಕ್ಷಂತರ ಹನುಮ ಮಾಲಾಧಾರಿಗಳು ಮಾಲೆ ವಿಸರ್ಜನೆಗೆ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಲಿದ್ದು, ಜಿಲ್ಲಾಡಳಿತ ತಯಾರಿ ಮಾಡಿಕೊಳ್ಳುತ್ತಿದೆ.
ಡಿ.5 ರಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಅಂಜನಾದ್ರಿ ಪರ್ವತ ( ANJANADHRI PARAVATH ) ಕ್ಕೆ, ಆಗಮಿಸುವ ಹನುಮ ಮಾಲಾಧಾರಿಗಳ ಮಾಲಾ ವಿಸರ್ಜನಾ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಪೂರ್ವ ಸಿದ್ದತೆ ಕೈಗೊಂಡಿದ್ದು, ಗಂಗಾವತಿಯಲ್ಲಿ ಆಯೋಜಿಸಿರುವ ಹನುಮಮಾಲಾಧಾರಿಗಳ ಶೋಭಾಯಾತ್ರೆ ನಡೆಯುವ ರಸ್ತೆಗಳ ಸ್ವಚ್ಛತೆ ಕಾರ್ಯ ಭರದಿಂದ ನಡೆದಿದೆ. ಇದನ್ನೂ ಓದಿ : – ಚಿರತೆಗೆ ಬಲಿಯಾದ ಯುವತಿಯ ಕುಟುಂಬಕ್ಕೆ 7.5 ಲಕ್ಷ ಪರಿಹಾರ ಘೋಷಣೆ
ಮತ್ತೊಂದೆಡೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಕೂಡ ಹನುಮ ಮಾಲೆ ಧರಿಸಿ ವ್ರತ ಆಚರಿಸುವ ಮೂಲಕ ಹಿಂದೂ ಮತ ಭೇಟೆ ಶುರು ಮಾಡಿಕೊಂಡಿದ್ದಾರೆ. ಶಾಸಕ ಪರಣ್ಣ ಮುನವಳ್ಳಿ ಅಂಜನಿಪುತ್ರನ ವ್ರತಾಚರಣೆಗೆ ಅಂಜನಾದ್ರಿ ಪರ್ವತಕ್ಕೆ ಭೇಟಿ ನೀಡಿ ಹನುಮನ ದರ್ಶನ ಪಡೆದು, ಬೆಟ್ಟದ ಕೆಳಗಿನ ಹನುಮನ ಪಾದಗಟ್ಟೆಯಲ್ಲಿ ಪೂಜಾ ವಿಧಿವಿಧಾನಗಳ ಮೂಲಕ ಅರ್ಚಕರಿಂದ ಹನುಮ ಮಾಲಾಧಾರಣೆ ಮಾಡಿದ್ದಾರೆ.
ಇದನ್ನೂ ಓದಿ : – ಹೃದಯಾಘಾತದಿಂದ ಮೃತಪಟ್ಟ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ