ಮಾಡೆಲಿಂಗ್ ಜೊತೆ ಮೋಜು- ಪತ್ನಿ ಮೇಲೆ ಕಾರು ಹರಿಸಿದ ನಿರ್ಮಾಪಕ !

ತನ್ನನ್ನು ಬೇರೆ ಮಹಿಳೆಯೊಂದಿಗೆ ಕಂಡ ಪತ್ನಿಯ ಮೇಲೆ ಕಾರು ಹತ್ತಿಸಿದ ಆರೋಪದಲ್ಲಿ ಸಿನಿಮಾ ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ (Kamal kishore mishra) ವಿರುದ್ಧ ಮಹಾರಾಷ್ಟ್ರ (Maharashtra) ದಲ್ಲಿ ಪ್ರಕರಣ ದಾಖಲಾಗಿದೆ. ಅಂಧೇರಿ (ಪಶ್ಚಿಮ) ಉಪನಗರದ ವಸತಿ ಕಟ್ಟಡವೊಂದರ ಪಾರ್ಕಿಂಗ್ ಪ್ರದೇಶದಲ್ಲಿ ಅಕ್ಟೋಬರ್ 19ರಂದು ಈ ಘಟನೆ ನಡೆದಿದೆ. ಕಮಲ್ ಮಿಶ್ರಾ ಅವರ ಪತ್ನಿಗೆ ಗಾಯಗಳಾಗಿವೆ.

ಪತಿಯ ವಿರುದ್ಧ ನಿರ್ಮಾಪಕನ ಪತ್ನಿ ಯಾಸ್ಮಿನ್ ಮಿಶ್ರಾ ಅವರು ಅಂಬೋಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಲವು ಸಮಯದಿಂದ ಕಾಣದ ಪತಿಯನ್ನು ಹುಡುಕಿಕೊಂಡು ಕಮಲ್ ಮಿಶ್ರಾ ಅವರ ಪತ್ನಿ ತೆರಳಿದ್ದರು. ಪಾರ್ಕಿಂಗ್ ಪ್ರದೇಶದಲ್ಲಿನ ಕಮಲ್ ಅವರ ಕಾರಿನಲ್ಲಿ ಮತ್ತೊಬ್ಬ ಮಹಿಳೆ ಜತೆ ಇರುವುದು ಕಂಡುಬಂದಿತ್ತು ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ. ಅವರನ್ನು ಎದುರಿಸಲು ನಿರ್ಮಾಪಕನ ಪತ್ನಿ ಕಾರಿನ ಬಳಿ ತೆರಳಿದಾಗ, ಕಮಲ್ ಮಿಶ್ರಾ ಅವರು ಸ್ಥಳದಿಂದ ಪರಾರಿಯಾಗಲು ಒಮ್ಮೆಲೆ ಕಾರು ಚಲಾಯಿಸಿದ್ದಾರೆ. ಇದನ್ನೂ ಓದಿ :- TRS BREAKING – ತೆಲಂಗಾಣದಲ್ಲಿ TRS ಶಾಸಕರ ಖರೀದಿಗೆ ಯತ್ನ- 15 ಕೋಟಿ ಜೊತೆ ನಾಲ್ವರು ವಶಕ್ಕೆ

ಆಗ ಅದು ಅವರ ಪತ್ನಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕಮಲ್ ಅವರ ಪತ್ನಿಯ ಕಾಲು, ಕೈ ಮತ್ತು ತಲೆಗೆ ಗಾಯಗಳಾಗಿವೆ. ಪತ್ನಿ ಯಾಸ್ಮಿನ್ ಮಿಶ್ರಾ (Yasmil mishra) ಅವರ ಮೇಲೆ ಕಮಲ್ ಕಾರು ಹರಿಸುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಪತ್ನಿ ಕಾರಿನ ಮುಂದೆ ಬಂದಾಗ ಕಮಲ್ ಕಾರು ಚಲಾಯಿಸಿದ್ದಾರೆ.

ಇದನ್ನೂ ಓದಿ :- ದೀಪಾವಳಿ ತಂದ ಅಂಧಕಾರ– ಬೆಂಗಳೂರಿನಲ್ಲಿ ಮಕ್ಕಳ ಕಣ್ಣಿನ ಗುಡ್ಡೆ ಸೀಳಿದ ಪಟಾಕಿಗಳು !

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!