ಆರೋಗ್ಯ ಸಚಿವರ ರಾಜೀನಾಮೆಗೆ ಸಿದ್ದರಾಮಯ್ಯ (Siddaramaiah) , ಕುಮಾರಸ್ವಾಮಿ (Kumarswamy) ಆಗ್ರಹ ವಿಚಾರಕ್ಕೆ ಸಚಿವ ಡಾ.ಸುಧಾಕರ್ (Sudhakar) ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರದಲ್ಲೂ ರಾಜಕಾರಣ ಮಾಡೋದು ಬೇಡ .ಯಾರೇ ಆಗಲಿ ಅವರ ಕಾಲದಲ್ಲಿ ಈ ರೀತಿಯ ಎಷ್ಟು ಘಟನೆಗಳು ಆಗಿವೆ ಗೊತ್ತಿದ್ಯಾ ಎಂದು ಕೇಳಿದ್ದಾರೆ.
ಇದರ ಬಗ್ಗೆ ಸಂಪೂರ್ಣ ದಾಖಲೆಗಳನ್ನು, ಅವರ ಮುಂದೆ ಇಡುತ್ತೇನೆ. ಅವರು ರಾಜೀನಾಮೆ ಕೊಡ್ತಾರಾ ಕೇಳಿ. ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ಎಂದು ಪ್ರಶ್ನಿಸಿದ್ರು. ಕುಮಾರಸ್ವಾಮಿ ಆಗಲಿ, ಯಾರೇ ಆಗಲಿ ಅವರ ಕಾಲದ ದುರ್ಘಟನೆ ಮುಂದಿಡ್ತೀನಿ. ಅದಕ್ಕೆ ಉತ್ತರ ಕೊಡಲಿ ಎಂದು ತಿಳಿಸಿದರು.
ಇದೇ ವೇಳೆ ತುಮಕೂರಿನಲ್ಲಿ ಮಾನವೀಯ ಮರೆತ ದುರ್ಘಟನೆ ನಡೆದಿದೆ. ಮನುಷ್ಯನ ಜೀವ ಬಹಳ ಮುಖ್ಯ ಯಾರೇ ಆಗಲಿ, ಮೊದಲು ಚಿಕಿತ್ಸೆ ಕೊಡಬೇಕು ಎಂದು ಹೇಳಿದ್ರು. ಆ ನಂತರ ದಾಖಲೆ ಮತ್ತಿತರ ಬಗ್ಗೆ ನೋಡಬೇಕು. ಕಾನೂನಿನಲ್ಲಿ ಬದಲಾವಣೆ ತಂದು ಈ ರೀತಿಯ ಘಟನೆ ಮರುಕಳಿಸದ ರೀತಿ ಕ್ರಮ ವಹಿಸುತ್ತೇವೆ. ಬರುವ ಅಧಿವೇಶನದಲ್ಲಿ ಈ ಕಾನೂನನ್ನು ಜಾರಿ ತರಲು ಕ್ರಮ ವಹಿಸುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಮೃತ ಮಹಿಳೆಯ 7 ವರ್ಷದ ಮಗಳಿಗೆ 5 ಲಕ್ಷ FD ಮಾಡಲು ತೀರ್ಮಾನ ಮಾಡಿದ್ದೇವೆ. ಇದನ್ನೂ ಓದಿ : – ಪಂಜಾಬ್ ನಲ್ಲಿ ಶಿವಸೇನಾ ನಾಯಕ ಸುಧೀರ್ ಸೂರಿ ಹತ್ಯೆ
ಒಟ್ಟಾರೆ ಇದನ್ನು ಆಡಳಿತ ವೈಫಲ್ಯ ಎಂದು ಪರಿಗಣಿಸಿ, ಜಿಲ್ಲಾ ಆರೋಗ್ಯ ಅಧಿಕಾರಿಗೂ ಶೋಕಾಸ್ ನೋಟೀಸ್ ಕೊಟ್ಟಿದ್ದೇವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಮೈಸೂರು ಭಾಗದಲ್ಲಿ ಎಷ್ಟು ಶಿಶು ಹತ್ಯೆ ಆಗಿದೆ ಎಂದು ಪ್ರಶ್ನಿಸಿದ್ರು. ಇದರ ಬಗ್ಗೆ ನಾನು ದಾಖಲೆ ಬಿಡುಗಡೆ ಮಾಡುತ್ತೇನೆ. ಅವರು ರಾಜೀನಾಮೆ ನೀಡಿದರೆ ನಾನು ನನ್ನ ಸಚಿವ ಸ್ಥಾನ ರಾಜೀನಾಮೆ ನೀಡಲು ಸಿದ್ದ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಚಿವ ಸುಧಾಕರ್ ಬಹಿರಂಗ ಸವಾಲು ಹಾಕಿದ್ದಾರೆ.
ಇದನ್ನೂ ಓದಿ : – ನಕಲಿ ಚಿನ್ನ ಅಡ ಇಟ್ಟು 1.5 ಕೋಟಿ ಸಾಲ – ಸಿಕ್ಕಿಬಿದ್ದ ನಗರಸಭೆ ಅಧ್ಯಕ್ಷೆಯ ಪುತ್ರ