ಸತತ ಮೂರನೇ ಬಾರಿಗೆ ಹುಬ್ಬಳ್ಳಿ – ಧಾರವಾಡ (hubli – dharwad ) ಮಹಾನಗರ ಪಾಲಿಕೆ ಅಧಿಕಾರ ಬಿಜೆಪಿ (bjp ) ಪಾಲಾಗಿದೆ. ನೂತನ ಮೇಯರ್ (mayor ) ಆಗಿ ಈರೇಶ ಅಂಚಟಗೇರಿ (iresha achatageri ) ಹಾಗೂ ಉಪಮೇಯರ್ ಆಗಿ ಉಮಾ ಮುಕುಂದ್(Uma mukund ) ಆಯ್ಕೆಯಾಗಿದ್ದಾರೆ.
ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಮಹಾನಗರ ಪಾಲಿಕೆಯಲ್ಲಿ ಕೈ ಎತ್ತುವ ಮೂಲಕ ಮತದಾನ ಪ್ರಕ್ರಿಯೆ ನಡೆದಿದೆ. ಮತದಾನದಲ್ಲಿ ಪಾಲಿಕೆಯ ಸದಸ್ಯರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಜಗದೀಶ್ ಶೆಟ್ಟರ್ ಸೇರಿದಂತೆ ಪಾಲಿಕೆಯ ವ್ಯಾಪ್ತಿಯ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಇದನ್ನೂ ಓದಿ : – ಪ್ರಸನ್ನನಂದಾಪುರಿ ಸ್ವಾಮೀಜಿ ಆರೋಗ್ಯ ವಿಚಾರಿದ ಸಿಎಂ ಬೊಮ್ಮಾಯಿ