ಕಳೆದ ಕೆಲ ವರ್ಷಗಳಿಂದ ₹2,000 ಮುಖಬೆಲೆಯ ನೋಟುಗಳ ಸಂಖ್ಯೆಯಲ್ಲಿ ನಿರಂತರ ಕುಸಿತ ಕಂಡುಬಂದಿದೆ. ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ, ಒಟ್ಟು ಕರೆನ್ಸಿ (CURRENCY )ನೋಟುಗಳಲ್ಲಿ ₹2000 ಮುಖಬೆಲೆಯ ಪಾಲು ಶೇ.1.6 ಕ್ಕೆ ಇಳಿದಿದೆ.
ಅಂದರೆ 2 ಸಾವಿರ ಮುಖಬೆಲೆಯ 214 ಕೋಟಿ ನೋಟುಗಳು ಚಲಾವಣೆಯಲ್ಲಿವೆ. ಇತ್ತೀಚೆಗೆ ಬಿಡುಗಡೆಯಾದ ಆರ್ ಬಿಐ ವಾರ್ಷಿಕ ವರದಿಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ಆರ್ಬಿಐ (RBI) ವರದಿಯ ಪ್ರಕಾರ, 500 ರೂ. ಮುಖಬೆಲೆಯ ನೋಟುಗಳ ಸಂಖ್ಯೆಯು ಈ ವರ್ಷದ ಮಾರ್ಚ್ ಅಂತ್ಯಕ್ಕೆ 4,554.68 ಕೋಟಿಗೆ ಏರಿಕೆಯಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹500 ಮುಖಬೆಲೆಯ ನೋಟುಗಳ ಸಂಖ್ಯೆ 3,867.90 ಕೋಟಿಯಷ್ಟಿತ್ತು. ಚಲಾವಣೆಯಲ್ಲಿರುವ ಒಟ್ಟು ನೋಟುಗಳ ಪೈಕಿ ₹500ರ ನೋಟುಗಳ ಪಾಲು ಶೇ 34.9ರಷ್ಟಿದೆ. ಇದನ್ನೂ ಓದಿ : – ಬಿಎಂಟಿಸಿ ಮಹಾ ಯಡವಟ್ಟು – ಗುಜುರಿ ಬಸ್ ವಾಯವ್ಯ ಸಾರಿಗೆಗೆ ಮಾರಾಟ ಮಾಡಲು ನಿರ್ಧಾರ ..!
ಅಂದರೆ, ಚಲಾವಣೆಯಲ್ಲಿರುವ ನೋಟುಗಳ ಪೈಕಿ ₹500ರ ನೋಟುಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಇದರ ನಂತರದ ಸ್ಥಾನದಲ್ಲಿ ₹10 ಮುಖಬೆಲೆಯ ನೋಟುಗಳಿವೆ. ಇವು ಒಟ್ಟು ನೋಟುಗಳ ಪೈಕಿ ಶೇ.21.3 ರಷ್ಟಿವೆ. ಒಟ್ಟಾರೆ ಹೇಳುವುದಾದರೆ, ₹2000 ಮುಖಬೆಲೆಯ ನೋಟುಗಳಲ್ಲಿ ಗಣನೀಯ ಕುಸಿತ ಆಗಿದ್ದು, ಸರ್ಕಾರದ ಮುಂದಿನ ನಡೆ ಏನಾಗಿರಬಹುದು ಎಂಬ ಪ್ರಶ್ನೆ ಮೂಡುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI ) ವರದಿಯ ಪ್ರಕಾರ, ಎಲ್ಲಾ ಮುಖಬೆಲೆಯ ಚಲಾವಣೆಯಲ್ಲಿರುವ ಕರೆನ್ಸಿಯ ಒಟ್ಟು ಮೌಲ್ಯವು ಮಾರ್ಚ್ 2021 ರಲ್ಲಿ 28.27 ಲಕ್ಷ ಕೋಟಿ ರೂಪಾಯಿ ಇತ್ತು. ಇದು ಈ ವರ್ಷದ (2022) ಮಾರ್ಚ್ನಲ್ಲಿ 31.05 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಇದನ್ನೂ ಓದಿ : – ಬೆಂಗಳೂರಿನಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ