ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಮಹಿಳೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಮಲ್ಲೇಶ್ ಪಾಳ್ಯ ಜಿಮ್ ನಲ್ಲಿ ನಡೆದಿದೆ. ಮಂಗಳೂರು ಮೂಲದವರಾದ ವಿನಯ್ ಕುಮಾರಿ (35) ಸಾವನ್ನಪ್ಪಿದ ಮಹಿಳೆ.
ಬೆಂಗಳೂರಿನಲ್ಲಿ ಒಬ್ಬಂಟಿಯಾಗಿ ಈಕೆ ವಾಸಿಸುತ್ತಿದ್ಲು ಎನ್ನಲಾಗಿದೆ. ವಿನಯ್ ಕುಮಾರಿ ಬೆಳಗ್ಗೆ 8 ಗಂಟೆ ಸುಮಾರಿಗೆ ಜಿಮ್ ನಲ್ಲಿ ದಿನ ನಿತ್ಯದಂತೆ ವರ್ಕೌಟ್ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಹಿಂದಕ್ಕೆ ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಜಿಮ್ ನಲ್ಲಿದ್ದವರೆಲ್ಲಾ ಬಂದು ಅವರಿಗೆ ಆರೈಕೆ ಮಾಡಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಸದ್ಯ ಸಿ.ವಿ.ರಾಮನ್ ನಗರ ಆಸ್ಪತ್ರೆಯಲ್ಲಿ ಮೃತದೇಹವನ್ನು ಇರಿಸಲಾಗಿದೆ.
ಇದನ್ನು ಓದಿ :- ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಕಂದಾಯ ಕ್ರಾಂತಿ – ಸಿಎಂ ಬೊಮ್ಮಾಯಿ