ಹೈಕಮಾಂಡ್ ಅವಕಾಶ ಕೊಟ್ರೆ ಅಖಂಡ ಕರ್ನಾಟಕದ ಸಿಎಂ ಆಗುತ್ತೇನೆ ಎಂದು ಅರಣ್ಯ ಮತ್ತು ಆಹಾರ ಖಾತೆ ಸಚಿವ ಸಚಿವ ಉಮೇಶ್ ಕತ್ತಿ ( umesh katti ) ಹೇಳಿದ್ದಾರೆ. ಗದಗ( gadaga ) ದಲ್ಲಿ ಮಾತನಾಡಿದ ಅವರು, ನಸೀಬನಾಗ ಇದ್ರೆ ನಾನೂ ಸಿಎಂ ಆಗೇ ಆಗ್ತೀನಿ ಎಂದು ಮತ್ತೆ ಸಿಎಂ ಖುರ್ಚಿ ಆಸೆಯನ್ನು ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಬಿಚ್ಚಿಟ್ಟಿದ್ದಾರೆ.
ಬಸವರಾಜ್ ಬೊಮ್ಮಾಯಿ ( basavara bommai ) ತೆಗೆದು ಆಗಲು ನಾನು ಸಿದ್ಧ ಇಲ್ಲ. ಏಕೆಂದರೆ ಅವರು ಉತ್ತರ ಕರ್ನಾಟಕವರು. ಆದರೆ ಅಖಂಡ ಕರ್ನಾಟಕದ ಸಿಎಂ ಆಗ್ತೀನಿ. ಸಿಎಂ ಸ್ಥಾನಕ್ಕೆ ಬೆನ್ನು ಹತ್ತಲ್ಲ. ಸಿಎಂ ಆಗೋ ಯೋಗ್ಯತೆ ಎಲ್ಲರಿಗೂ ಇದೆ. ನಮ್ಮವರೇ ಸಿಎಂ ಇದ್ದಾಗ ಸಿಎಂ ಆಸೆ ಪಡೋದಿಲ್ಲ. ಆದ್ರೆ ಸಿಎಂ ಆಗುವ ಯೋಗ್ಯತೆ ನನಗೂ ಇದೆ. ಒಂಬತ್ತು ಬಾರಿ ಶಾಸಕನಾಗಿದ್ದೇನೆ. ಎಂಟು ಇಲಾಖೆ ನಿಭಾಯಿಸಿದ್ದೇನೆ. ನಾನು ರಾಜ್ಯದ ಹಿರಿಯ ರಾಜಕಾರಣಿ. ಹುಕ್ಕೇರಿ ಜನ ನನ್ನ ಆಯ್ಕೆ ಮಾಡಿದ್ದಾರೆ. ಸೋಲಿಸಿದ್ರೆ ಮನೆಗೆ ಹೋಗ್ತೀನಿ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆದರೆ ರಾಜೀನಾಮೆಗೂ ಸಿದ್ದ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಇದನ್ನೂ ಓದಿ : – ಬಿಡಿಎಯಿಂದ ಪ್ರಯೋಜನ ಪಡೆದ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು – ಡಿಕೆಶಿ
ಕೆಂಪಣ್ಣ ಯಾರು ಅನ್ನೋದು ಗೊತ್ತಿಲ್ಲ
ಕೆಂಪಣ್ಣ ( kempanna ) ಮಾಡಿದ ಭ್ರಷ್ಟಾಚಾರ ಆರೋಪಕ್ಕೆ ಸಚಿವ ಉಮೇಶ್ ಕತ್ತಿ ತಿರುಗೇಟು ನೀಡಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸಿದ್ದರಾಮಯ್ಯ ( siddaramaiah ) ಶಿಷ್ಯ. ಕೆಂಪಣ್ಣ ಕರೆಸಿಕೊಂಡು ಕಾಂಗ್ರೆಸ್ ಮಾಡ್ತಿರೋ ಕೆಲಸ ಇದು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ರು. ಕೆಂಪಣ್ಣ ಆರೋಪದ ಹಿಂದೆ ಕಾಂಗ್ರೆಸ್ ( congress ) ಕೈವಾಡ ಇದೆ. ಕಮಿಷನ್ ಇದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ. ತನಿಖೆ ಆಗಲಿ, ಕಮಿಷನ್ ಪಡೆದವರು ಹೊರಗೆ ಬರಲಿ. ಯಾರ ವಿರುದ್ಧವೂ ಕ್ರಮಕ್ಕೆ ಸರ್ಕಾರ ಹಿಂಜರಿಯಲ್ಲ. ಬಾಯಿ ಇದೆ ಅಂತ ಏನೇನೋ ಮಾತನಾಡಿದ್ರೆ ಸರಿಯಿರಲ್ಲ. ಸಿದ್ದರಾಮಯ್ಯಗೆ ಮಾಡೋಕೆ ಕೆಲಸವಿಲ್ಲ. ಸಿದ್ದರಾಮಯ್ಯಗೆ ಮೊನ್ನೆ ತತ್ತಿ ಒಗೆದ್ರು ಎಂದು ಕಿಡಿಕಾರಿದ್ರು.
ಇದನ್ನೂ ಓದಿ : – BREAKING – ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಗುಲಾಂ ನಬಿ ಆಜಾದ್