ಯಾರು ಸಾಹಸದಿಂದ ಮುನ್ನುಗುತ್ತಾರೆ ಅವರಿಗೆ ವಿಜಯ ಲಕ್ಷ್ಮೀ ಒಲಿಯುತ್ತಾಳೆ. ಯುವಕರು ಎಲ್ಲಾ ಕ್ಷೇತ್ರಗಳಲ್ಲಿ ಸಾಹಸದಿಂದ ಮುನ್ನುಗ್ಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ ಶಾ (AMITH SHASH) ಯುವಕರಿಗೆ ಕಿವಿ ಮಾತು ಹೇಳಿದ್ದಾರೆ.
ಬಿ.ವಿ ಭೂಮರಡ್ಡಿ ತಾಂತ್ರಿಕ ವಿವಿ ಸುವರ್ಣ ಮಹೋತ್ಸವ, ಹುಬ್ಬಳ್ಳಿ. https://t.co/ZMNLlVQ3l1
— Basavaraj S Bommai (@BSBommai) January 28, 2023
ಹುಬ್ಬಳ್ಳಿ (HUBALLI) ಯ ಬಿವಿಬಿ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, 2014ರಲ್ಲಿ ದೇಶದಲ್ಲಿ ಮಹತ್ವದ ಪರಿವರ್ತನೆ ಆಯ್ತು. ಕೇವಲ 8 ವರ್ಷಗಳಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಆಗುತ್ತಿದೆ. ಇಂದು ದೇಶದಲ್ಲಿ 17,000 ಸ್ಟಾರ್ಟಪ್ ಗಳು ಸ್ಥಾಪನೆಗೊಂಡಿವೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ದೇಶದಲ್ಲೇ ಬಹುತೇಕ ವಸ್ತುಗಳು ಉತ್ಪಾದನೆಯಾಗುತ್ತಿವೆ. 2015ರಲ್ಲಿ ಮೋದಿಯವರು ಮೇಕ್ ಇನ್ ಇಂಡಿಯಾ ಘೋಷಿಸಿದ್ದರು. ಡಿಜಿಟಲ್ ಇಂಡಿಯಾ ಮಿಷನ್ ಯೋಜನೆಯಡಿ ಅಗಾಧ ಬದಲಾವಣೆಯಾಗಿದೆ. ಮೋದಿ ಸರ್ಕಾರ ಬಂದ ಮೇಲೆ 41,000 ಹೊಸ ಕಾಲೇಜುಗಳ ಸ್ಥಾಪನೆಯಾಗಿದೆ. ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲಕ್ಕಾಗಿ FSL ಸ್ಥಾಪನೆ ಮಾಡುತ್ತಿದ್ದೇವೆ. FSL ಕ್ಯಾಂಪಸ್ ಗೆ ಶಂಕುಸ್ಥಾಪನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ರು. ಇದನ್ನು ಓದಿ :- ಸಿದ್ದರಾಮಯ್ಯಗೆ ತಾಕತ್ ಇದ್ರೆ ಸ್ವಂತ ಪಕ್ಷ ಕಟ್ಟಿ ಬರೀ 5 ಸೀಟು ಗೆಲ್ಲಲಿ – ಹೆಚ್.ಡಿ. ಕೆ
ಇಂದು ಕೆ.ಎಲ್.ಇ ಸಂಸ್ಥೆಯ ಬಿ.ವಿ.ಭೂಮರೆಡ್ಡಿ ತಾಂತ್ರಿಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವದಲ್ಲಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ @AmitShah ಅವರೊಂದಿಗೆ ಪಾಲ್ಗೊಂಡೆನು.
1/2 pic.twitter.com/bxQLMTUZqh— Basavaraj S Bommai (@BSBommai) January 28, 2023
ಬ್ರಿಟಿಷರ ವಿರುದ್ಧ ಲಾಲ್, ಬಾಲ್, ಪಾಲ್ ಮೂವರು ಯುವಕರು ಹೋರಾಡಿದ್ದರು. ಇಂದು ಲಾಲ್ ಲಜಪತರಾಯ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಜನ್ಮದಿನ. ನಾವೆಲ್ಲ ಆಜಾದಿ ಕಾ ಅಮೃತ್ ಮಹೋತ್ಸವ ಕಾಲ ಘಟ್ಟದಲ್ಲಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರ ಕನಸು ನಾವೆಲ್ಲ ನನಸು ಮಾಡಬೇಕಿದೆ. ದೇಶಕ್ಕಾಗಿ ಅನೇಕ ಮಹನೀಯರು ಪ್ರಾಣತ್ಯಾಗ ಮಾಡಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವ ಸಂದರ್ಭದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮೊದಲ ಸ್ಥಾನಕ್ಕೆ ತಲುಪುವ ಸಂಕಲ್ಪವಾಗಬೇಕೆಂದು ಎಂದು ಕರೆ ನೀಡಿದ್ರು. ಬಿವಿಬಿ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ. ಇಡೀ ವಿಶ್ವಕ್ಕೆ ಭಾರತದ ಶಕ್ತಿಯನ್ನು ತೋರಿಸಬೇಕಿದೆ. ಆ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮುನ್ನಡೆಯುತ್ತಿದೆ. ಕೆಎಲ್ಇ ಶಿಕ್ಷಣ ಸಂಸ್ಥೆಯನ್ನು ನಿಸ್ವಾರ್ಥತೆಯಿಂದ ಸ್ಥಾಪಿಸಲಾಗಿದೆ. ಕೇವಲ 5 ಶಿಕ್ಷಕರು KLE ಶಿಕ್ಷಣ ಸಂಸ್ಥೆ ಆರಂಭಿಸಿದ್ದಾರೆ. ಶಿಕ್ಷಣ ವ್ಯಾಪಾರೀಕರಣ ಸಂದರ್ಭದಲ್ಲಿ KLE ಸಂಸ್ಥೆ ಸೇವೆ ಮಾಡುತ್ತಿದೆ. KLE ಸಂಸ್ಥೆ ಸಾವಿರಾರು ಯುವಕರಿಗೆ ವಿದ್ಯೆ ನೀಡಿದೆ ಎಂದು ಕೊಂಡಾಡಿದ್ರು.
ಇದನ್ನು ಓದಿ :- ಹಾಸನ ಟಿಕೆಟ್ ದೇವೇಗೌಡರು ಡಿಸೈಡ್ ಮಾಡ್ತಾರೆ- HDKಗೆ ಟಾಂಗ್ ಕೊಟ್ಟ ಸೂರಜ್ ರೇವಣ್ಣ