ಕಾಂಗ್ರೆಸ್ (Congress) ಮುಕ್ತ ಕರ್ನಾಟಕವನ್ನು ಕಾಂಗ್ರೆಸ್ಸೇ ಮಾಡಿಕೊಳ್ಳುತ್ತಿದೆ. ನಾಮಿನೇಷನ್ ಗೆ ಮುಂಚೆ ಎಲ್ಲಾ ಕಾಂಗ್ರೆಸ್ ನಾಯಕರನ್ನ ಭೇಟಿಯಾಗಿದ್ದೆ ಎಂದು ಜೆಡಿಎಸ್ (JDS) ಮುಖಂಡ ಕುಪೇಂದ್ರ ರೆಡ್ಡಿ (Kupendra reddy) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು ಸಿದ್ದರಾಮಯ್ಯನನ್ನು (Siddaramaiah) ಭೇಟಿಯಾಗಬೇಕಿತ್ತು, ಅವ್ರು ಹಾಸನಕ್ಕೆ ಹೋಗಿದರು. ಸೋಮವಾರ ಮಧ್ಯಾಹ್ನ ಸಿದ್ದರಾಮಯ್ಯ ಟೈಮ್ ಕೊಟ್ಟಿದರು. ಆದ್ರೆ ಅಂದು ಬೆಳಿಗ್ಗೆನೇ ಕಾಂಗ್ರೆಸ್ ಕ್ಯಾಂಡಿಡೇಟ್ ಹಾಕಿದ್ರು ಎಂದು ತಿಳಿಸಿದ್ರು. ಇದೇ ವೇಳೆ ಕಾಂಗ್ರೆಸ್ ಗೆ 20,10,5 ಸೀಟ್ ಕಡಿಮೆ ಬಂತು ಅಂದುಕೊಳ್ಳಿ. ನೀವು ಬಿಜೆಪಿ ಬಳಿ ಹೋಗುತ್ತಿರಾ? ಎಂದು ಕಾಂಗ್ರೆಸ್ ಪಕ್ಷದ ನಾಯಕರಿಗೆ ಕುಪೇಂದ್ರ ರೆಡ್ಡಿ ಪ್ರಶ್ನೆ ಮಾಡಿದ್ದಾರೆ. ನಿಮಗೆ ನಾವೇ ಗತಿ ಇದನ್ನು ನೆನಪಿಟ್ಟುಕೊಳ್ಳಿ. ಬಿಜೆಪಿ (BJP) ನಿಮಗೆ ಯಾವೊತ್ತಿಗೂ ಆಗಲ್ಲ ಇದನ್ನ ನೆನಪಿಟ್ಟುಕೊಳ್ಳಿ. ನಾನು ಸೋಲೊದಲ್ಲ ನನ್ನೊಬ್ಬನಿಂದ ಪಾರ್ಲಿಮೆಂಟ್ ನಡೆಯಲ್ಲ. ರಾಜಕೀಯದಿಂದ ದುಡ್ಡು ಮಾಡಬೇಕು ಅಂತಿಲ್ಲ ದುಡ್ಡನ್ನ ದೇವರುಕೊಟ್ಟಿದ್ದಾನೆ. ಆದ್ರೆ ಜನರ ಸೇವೆಗಾಗಿ ನಾನು ರಾಜಕೀಯಕ್ಕೆ ಬಂದಿದ್ದೆನೆ. ದೇವೇಗೌಡರಿಗೆ (Devegowda) ನೋವು ಕೊಡುವ ಕೆಲಸ ಮಾಡಬೇಡಿ. ನಿಮ್ಮ ಅಣ್ಣತಮ್ಮಂದಿರನ್ನ ತುಳಿಯುವ ಕೆಲಸ ಮಾಡಬೇಡಿ ಎಂದು ಭಾವುಕರಾಗಿ ಮಾತನಾಡಿದ್ದಾರೆ. ಇದನ್ನೂ ಓದಿ : – ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ