ಗುಬ್ಬಿ (Gubbi) ಯಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆ (Pancharatna yatre) ಯಲ್ಲಿ ಮಾತನಾಡಿ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ (HD.Kumarswamy) ದಲಿತರ ವಿರೋಧಿ ಎಂದು ಗುಬ್ಬಿಯಲ್ಲಿ ಕೆಲವರು ನನ್ನ ವಿರುದ್ದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಆ ದಲಿತ ಮುಖಂಡರಿಗೆ ಯಾರು ಚಿತಾವಣೆ ಮಾಡಿದ್ದಾರೆ ಅಂತ ಗೊತ್ತು. ಇಂತಹ ಚಿತಾವಣೆಗೆ ಹೆದರುವ ಮಗ ಅಲ್ಲ ನಾನು ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ. ನನಗೂ ಮಾತನಾಡಲು ಬರುತ್ತೆ. ಆದ್ರೆ ಕೆಸರಿನ ಮೇಲೆ ಕಲ್ಲು ಎಸೆಯಲ್ಲ. ಕೆಸರಿನ ಮೇಲೆ ಕಲ್ಲೆಸೆದರೆ ನನ್ನ ಮುಖಕ್ಕೆ ಸಿಡಿಯುತ್ತದೆ. ಆ ಕೆಸರನ್ನ ಏನ್ ಮಾಡಬೇಕು ನಿಮಗೆ ಬಿಡ್ತೀನಿ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ (SR.Srinivas) ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ರು.
ಇದನ್ನೂ ಓದಿ : – ಅನಾರೋಗ್ಯದ ಮಧ್ಯೆಯೂ ಮೋದಿ ನೇತೃತ್ವದ ಸಭೆಯಲ್ಲಿ ಭಾಗಿಯಾದ ಹೆಚ್.ಡಿ ದೇವೇಗೌಡ