ರೈತರಿಂದ ಅಕ್ಕಿ ಖರೀದಿಸುವ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (Telangana Chief Minister K Chandrashekar Rao) ಪ್ರಧಾನಿ ಮೋದಿ (PM Modi)ಗೆ ನೇರ ಸವಾಲು ಹಾಕಿದ್ದಾರೆ.
‘ಮೋದಿ ಅವರಿಗೆ ಧೈರ್ಯವಿದ್ದರೆ ನನ್ನನ್ನು ಬಂಧಿಸಲಿ. ಕೈಮುಗಿದು ಪ್ರಧಾನಿ ಮತ್ತು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರಿಗೆ ನಾನು ಹೇಳುತ್ತೇನೆ.
ದಯವಿಟ್ಟು ನಮ್ಮ ಆಹಾರ ಧಾನ್ಯಗಳನ್ನು ಖರೀದಿಸಿ. ನಾನು ನಿಮಗೆ 24 ಗಂಟೆಗಳ ಕಾಲಾವಕಾಶ ನೀಡುತ್ತೇನೆ. ನಂತರ ನಾವು ನಮ್ಮದೇ ಆದ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಗಡುವು ನೀಡಿ ಎಚ್ಚರಿಸಿದ್ದಾರೆ. ಇದನ್ನು ಓದಿ :- ಬಿಟ್ ಕಾಯಿನ್ ಹಗರಣದ ಬಗ್ಗೆ FBI ತನಿಖೆ – ಇದು ನಾಚಿಕೆಗೇಡಿನ ಸಂಗತಿ ಎಂದ ಸಿದ್ದರಾಮಯ್ಯ
“ತೆಲಂಗಾಣ ತನ್ನ ಹಕ್ಕನ್ನು ಕೇಳುತ್ತದೆ. ಪ್ರಧಾನಿ ಹೊಸ ಕೃಷಿ ನೀತಿಯನ್ನು ರೂಪಿಸಬೇಕು. ಅದಕ್ಕೆ ನಾವು ಸಹ ಕೊಡುಗೆ ನೀಡುತ್ತೇವೆ. ಸರ್ಕಾರವನ್ನು ಉರುಳಿಸುವ ಶಕ್ತಿ ಇರುವ ರೈತರ ಭಾವನೆಗಳೊಂದಿಗೆ ಆಟವಾಡಬೇಡಿ. ರೈತರು ಭಿಕ್ಷುಕರಲ್ಲ ಎಂದು ತಿರುಗೇಟು ನೀಡಿದ್ದಾರೆ. ಕೆಸಿಆರ್ ತೆಲಂಗಾಣದಿಂದ 15 ಲಕ್ಷ ಟನ್‌ಗಳಷ್ಟು ಅಕ್ಕಿಯನ್ನು ಖರೀದಿಸಲು ಒತ್ತಾಯಿಸುತ್ತಿದ್ದಾರೆ.
ಇದನ್ನು ಓದಿ :-ಮೋದಿಯಷ್ಟು ಸುಳ್ಳು ಹೇಳಿರುವ ಪ್ರಧಾನಿ ಯಾರು ಇಲ್ಲ- ಸಿದ್ದರಾಮಯ್ಯ ವಾಗ್ದಾಳಿ