ಸಿಎಂ ಆರ್.ಎಸ್.ಎಸ್ (RSS) ಅನ್ನೋ ಸಿದ್ದರಾಮಯ್ಯ (Siddramaiah) ಹೇಳಿಕೆ ವಿಚಾರಕ್ಕೆ ತುಮಕೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj bommai) ಪ್ರತಿಕ್ರಿಯೆ ನೀಡಿದ್ದಾರೆ. ಆರ್.ಎಸ್.ಎಸ್ ಸಿದ್ದಾಂತ, ದೇಶ ಭಕ್ತಿ ಜೊತೆಗೆ ನಾನಿದ್ದೀನಿ ಎಂದು ಹೇಳಿದ್ದಾರೆ.
ಈ ಹಿಂದೆಯೂ ನಾನು ಹೇಳಿದ್ದೇನೆ. ಸಿದ್ದರಾಮಯ್ಯ ಬಗ್ಗೆ ನಾನು ಏನು ಮಾತಾಡಲ್ಲ. ನಾವು ದೊಡ್ಡ ದೇಶ ಭಕ್ತಿಯ ಸಂಸ್ಥೆಯೊಂದಿಗೆ ಕೈ ಜೋಡಿಸಿಕೊಂಡಿದ್ದೇವೆ. ಸಿದ್ದರಾಮಯ್ಯ ಎಂಥಾ ಸಂಸ್ಥೆ ಜೊತೆ ಕೈ ಜೋಡಿಸಿಕೊಂಡಿದ್ದಾರೆ ಅಂತಾ ಗೊತ್ತು ಎಂದು ತಿರುಗೇಟು ನೀಡಿದ್ದಾರೆ.
ಇದೇ ವೇಳೆ 40% ಕಮೀಷನ್ ಆರೋಪ ಮಾಡಿದ್ದ ಕೆಂಪಣ್ಣ (Kempanna) ನ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರ ಯಾವುದೇ ರೀತಿಯ ಹಿಂದೇಟು ಹಾಕುತಿಲ್ಲ. ಮುಂದಿನ ದಿನಗಳಲ್ಲಿ ಕಾದು ನೋಡಿ ಎಂದು ಹೇಳಿದ್ದಾರೆ. ಅರ್ಕಾವತಿ ಫೈಲ್ ರೀ ಓಪನ್ ಆಗೋದಕ್ಕೆ ನಿನ್ನೆ ಸಭೆಯಲ್ಲಿ ಚರ್ಚೆ ಆಗಿಲ್ಲ ಎಂದು ತಿಳಿಸಿದ್ದಾರೆ. ಆದರೇ 40% ಸುಳ್ಳು ಆರೋಪ ಬಗ್ಗೆ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು ಅನ್ನೋ ಬಗ್ಗೆ ಚರ್ಚೆ ನಡೆದಿದೆ. ಅದಕ್ಕೆ ಮುನಿರತ್ನ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನೂ ಓದಿ : – ನಾನು ಸಿಎಂ ಆಗಿದ್ದಾಗ ಕಮಿಷನ್ ವ್ಯವಸ್ಥೆ ಇರಲಿಲ್ಲ – ಹೆಚ್.ಡಿ ಕುಮಾರಸ್ವಾಮಿ