ಪೊಲೀಸ್ ಇಲಾಖೆಗೆ 545 ಸಬ್ ಇನ್ಸ್ಪೆಕ್ಟರ್ ಹುದ್ದೆ ಪರೀಕ್ಷೆ ಆಗಿತ್ತು. ಇದರಲ್ಲಿ ಸಾಕಷ್ಟು ಫ್ರಾಡ್ ಆಗಿದೆ ಅಂತ ಸಿಓಡಿ ತನಿಖೆಗೆ ಹಾಕಿದ್ವಿ. ಕಲಬುರಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಲಬುರ್ಗಿಯ ಜ್ಞಾನಜ್ಯೋತಿ ಶಾಲೆ ಕೇಂದ್ರದಲ್ಲಿ ಅಕ್ರಮ ನಡೆದ ಬಗ್ಗೆ ಸಾಕ್ಷಿ ಸಿಕ್ಕಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ಕೊಡಲಾಗಿದೆ. ಸಿಐಡಿ ಅಧಿಕಾರಿಗಳ ತಂಡವನ್ನ ಕಳುಹಿಸಿದ್ದೇವೆ. ವರ್ಷಗಟ್ಟಲೆ ಓದಿ ಅನ್ಯಾಯಕ್ಕೆ ಒಳಗಾಗ್ಬರ್ದು ಅಂತ ಸಿಐಡಿ ಟೀಮ್ ಕಳುಹಿಸಿದ್ದೇವೆ. ಕಲಬುರಗಿಯಲ್ಲಿ ಒಬ್ಬ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ . ನ್ಯಾಯಯುತವಾಗಿ ಪರೀಕ್ಷೆ ಬರೆದವ್ರು ಇದ್ದಾರೆ. ಕಷ್ಟಪಟ್ಟು ಪರೀಕ್ಷೆ ಬರೆದವ್ರು ಇದ್ದಾರೆ. ಓಎಂಆರ್ ಶೀಟ್ ಗೂ ವರ್ಜಿನಲ್ ಶೀಟ್ ಗೂ ಟ್ಯಾಲಿ ಆಗ್ತಾ ಇಲ್ಲ. ವಿರೇಶ್ ಎಂಬ ಅಭ್ಯರ್ಥಿಯನ್ನ ಈಗಾಗಲೇ ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ. ಅಕ್ರಮದಲ್ಲಿ ಯಾರ್ಯಾರ ಪಾಲಿದೆ ಅಂತ ಬಯಲಿಗೆ ತರುತ್ತೇವೆ. ನಮ್ಮ ಪೊಲೀಸ್ ಇಲಾಖೆಯಲ್ಲಿ ಯಾರು ಶಾಮೀಲಾಗಿದ್ದಾರೆ ಅಂತಲೂ ಬಯಲಿಗೆ ತರ್ತೇವೆ. ವೀರೇಶ್ ಎಂಬ ಅಭ್ಯರ್ಥಿ ಸಿಕ್ಕಿ ಬಿದ್ದಿದ್ದಾನೆ. ಆತ 21 ಅಂಕಗಳಿಗೆ ಮಾತ್ರ ಬರೆದಿದ್ದ. ಆದ್ರೆ ಒಎಂಆರ್ ಶೀಟ್ ನಲ್ಲಿ 100 ಮಾರ್ಕ್ಸ್ ಗೆ ಉತ್ತರ ಬರೆದಿದ್ದ. ಹೀಗಾಗಿ ನಮಗೆ ಅನುಮಾನ ಬಂದು ವೀರೇಶ್ ನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ರು. ಇದನ್ನು ಓದಿ : – ಚಂದ್ರು ಕೊಲೆ ಪ್ರಕರಣ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ – ಅರಗ ಜ್ಞಾನೇಂದ್ರ
ಗೃಹ ಸಚಿವ ಅಸಮರ್ಥ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ
ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೂಳ್ಳುತ್ತೇವೆ. ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡ್ತಿದೀವಿ. ನನಗೆ ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ಬೇಕಾಗಿಲ್ಲ. ಅವರ ಕಾಲದಲ್ಲಿ ಏನಾಗಿದೆ, ಎಷ್ಟು ಸಾವಾಗಿದೆ ಅಂತ ಸದನದಲ್ಲಿ ನಾನು ಹೇಳಿದ್ದೀನಿ. ಅವರು ಪಿಎಫ್ಐ ವಿರುದ್ಧ ಕೇಸ್ ಪಡೆದವರು.
ಅವರಿಂದ ನನಗೆ ಸರ್ಟಿಫಿಕೇಟ್ ಬೇಕಿಲ್ಲ.ಕಾಂಗ್ರೆಸ್ ನವ್ರು ಅಧಿಕಾರದಲ್ಲಿ ಇಲ್ಲ. ಹೀಗಾಗಿ ಜಂಗಲ್ ರಾಜ್ ಆಗಿದೆ ಆರೋಪಿಸ್ತಾರೆ. ಅವರ ಸರ್ಟಿಫಿಕೇಟ್ ನಿಂದ ನಮ್ಮ ಸಾಮರ್ಥ್ಯ ಅಳೆಯಲಾಗಲ್ಲ. ನಾನು ನಮ್ಮ ಪಕ್ಷ, ನಮ್ಮ ಸಿಎಂ ಮೆಚ್ಚುವಂಥ ಕೆಲಸ ಮಾಡಿದ್ದೀನಿ. ಕೆಲವು ಘಟನೆ ಇಟ್ಕೊಂಡು ಅಸಮರ್ಥ ಅಂತ ಕರೆಯೋದು ಸರಿಯಲ್ಲ.ನಾನು ಸಮರ್ಥವಾಗಿ ಕೆಲಸ ಮಾಡ್ತಿದ್ದೇನೆ. ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸ್ತಿದ್ದೇನೆ. ಅವರ ಕಾಲದಲ್ಲಿ ಗೃಹ ಇಲಾಖೆಯನ್ನು ಡಮ್ಮಿ ಮಾಡಿದ್ರು. ಯಾರೋ ಒಬ್ಬ ನಿವೃತ್ತ ಪೊಲೀಸ್ ಅಧಿಕಾರಿ ಕೈಗೆ ಗೃಹ ಇಲಾಖೆ ಒಪ್ಪಿಸಿದ್ರು ಎಂದು ಕಾಂಗ್ರೆಸ್ ವಿರುದ್ಧ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.