ಕೊಡಗಿ (Kodagu) ನ ಪ್ರತ್ಯೇಕತೆ ವಿಚಾರಕ್ಕೆ ಚಿಕ್ಕಬಳ್ಳಾಪುರ (Chikkaballapura) ದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ (Kumarswamy) ಪ್ರತಿಕ್ರಿಯೆ ನೀಡಿದ್ದಾರೆ. ಅಭಿವೃದ್ಧಿ ತಾರತಮ್ಯ ಇದಕ್ಕೆ ಕಾರಣ. ಅವರಿಗೆ ಏನು ಬೇಕು ಅನ್ನೋದನ್ನ ಕೇಳಬೇಕು. ಅದನ್ನ ಕೊಡುವ ಕೆಲಸ ಸರ್ಕಾರ ಮಾಡಬೇಕು. ಪ್ರತ್ಯೇಕವಾಗಿ ಹೋಗಿ ಎಲ್ಲಿ ಇರ್ತಾರೆ ಅವರು ಎಂದು ಪ್ರಶ್ನಿಸಿದರು.
ಜತ್ತ ಗ್ರಾಮ ಕರ್ನಾಟಕಕ್ಕೆ ಸೇರಲು ಬಯಸಿರೋ ವಿಚಾರ
ಬೆಳಗಾವಿ (Belagavi) ಯ ಒಂದು ಡೆವಲಪ್ಮೆಂಟ್ ಏನಿದೆ. ನಮ್ಮ ರಾಜ್ಯ ಸರ್ಕಾರದಿಂದ ವಾಣಿಜ್ಯ ನಗರವಾಗಿ ಪರಿವರ್ತಿಸಲು ಅಲ್ಲಿನ ರೈತರ ಆರ್ಥಿಕ ಪರಿಸ್ಥಿತಿ ಉತ್ತಮ ಮಾಡಲು ದೇವೇಗೌಡ (Devegowda) ರು ಪ್ರಧಾನಿಯಾಗಿದ್ದಾಗ 27 ಕಾರ್ಖಾನೆ ಕಟ್ಟಲಾಯಿತು. 27 ಸಕ್ಕರೆ ಕಾರ್ಖಾನೆ ಕಟ್ಟಲಾಗಿದೆ. ನೀರಾವರಿ ಮತ್ತು ಸಕ್ಕರೆ ಕಾರ್ಖಾನೆ ಅವರ ಕಣ್ಣು ಕುಕ್ಕುತ್ತಿದೆ. ಆ ಭಾಗದ ಜನರಿಗೆ ಮನವಿ ಮಾಡ್ತೀನಿ.
ಕೆಂಪೇಗೌಡ (Kempegowda) ರು ಕಟ್ಟಿದ ಬೆಂಗಳೂರಿನಲ್ಲಿ ಆದಾಯ ಹೆಚ್ಚಿದೆ. ಇಲ್ಲಿಂದ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಕಳಿಸ್ತಿದ್ದೇವೆ. ಬೆಂಗಳೂರಿನಿಂದ ಇಲ್ಲಿಗೆ 70ಕಿ.ಮೀ ರಸ್ತೆ ಸರಿ ಇಲ್ಲ. ಫ್ಲೋರೈಡ್ ವಾಟರ್ ನಿಂದ ಅನೇಕರು ಅಂಗವಿಕಲರಾಗಿದ್ದಾರೆ. ಉತ್ತರ ಕರ್ನಾಟಕ ಅಭಿವೃದ್ದಿಗೆ ಕೋಟ್ಯಂತರ ಹಣ ನೀಡಿದ್ದೇನೆ. ಭೂಸ್ವಾಧೀನ ಮಾಡಿ ಅಭಿವೃದ್ಧಿ ಮಾಡಬೇಕು. ಬೆಂಗಳೂರು ನಗರದಲ್ಲಿ ಭೂಮಿ ಕಳೆದುಕೊಂಡವರು ದೊಡ್ಡ ಮನೆಯಲ್ಲಿ ಪಾತ್ರೆ ತೊಳೆಯಲು, ಗೇಟ್ ಕಾಯಲು ಹೋಗಿದ್ದಾರೆ. ಅವರ ಪರಿಸ್ಥಿತಿ ಯಾವ ರೀತಿ ಇದೆ ಅಂತ ಚಿಂತನೆ ಮಾಡಬೇಕು ಎಂದು ಹೇಳಿದ್ರು. 12 ವರ್ಷದ ಅನುಭವದಲ್ಲಿ ನೋಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ : – ಪ್ರಭಾಸ್ ನ ಮದುವೆ ಆಗ್ತೀನಿ – ಬಹಿರಂಗವಾಗಿ ಒಪ್ಪಿಕೊಂಡ BOLLYWOOD ನಟಿ ಕೃತಿ ಸನೊನ್