ಸ್ಯಾಂಟ್ರೋ ರವಿ ಬಗ್ಗೆ ಕುಮಾರಸ್ವಾಮಿ (Kumarswamy ) ಆರೋಪ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ (DK.Shivakumar) ಪ್ರತಿಕ್ರಿಯಿಸಿದ್ದಾರೆ. ಈ ಹೆಸರೆಲ್ಲ ನಾನು ಕೇಳೆ ಇಲ್ಲ. ಈಗ ಕುಮಾರಸ್ವಾಮಿ ಆರೋಪ ಮಾಡ್ತಾ ಇದ್ದಾರೆ. ಅವರಿಗೆ ಮಾಹಿತಿ ಗೊತ್ತಿರಬೇಕು ಎಂದು ತಿಳಿಸಿದ್ದಾರೆ.
ಇದೇ ವೇಳೆ KPTCL ಪರೀಕ್ಷೆಯಲ್ಲಿ ಅಕ್ರಮ ವಿಚಾರ ಕುರಿತಂತೆ ಮಾತನಾಡಿ ರಾಜ್ಯದ ಯುವಕರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪ್ರತಿಯೊಂದು ಉದ್ಯೋಗದಲ್ಲಿ ಭ್ರಷ್ಟಾಚಾರ, ಫ್ರಾಡ್, ಕಾಪಿ, ಈ ಸರ್ಕಾರದಲ್ಲಿ ನಡೆಯುತ್ತಿದೆ. ಹಿಂದೆ ನಮ್ಮ ಸರ್ಕಾರದಲ್ಲಿ ಅದರಲ್ಲೂ ನನ್ನ ಇಲಾಖೆ (Department) ಯಲ್ಲಿ 25-30 ಸಾವಿರ ಉದ್ಯೋಗ ನೀಡಿದ್ದೇನೆ. ನನ್ನ ಇಲಾಖೆಯಲ್ಲಿ ಇಂತಹ ಒಂದು ಘಟನೆ ನಡೆದಿಲ್ಲ. ನನ್ನ ಕ್ಷೇತ್ರದವರಿಗೆ ಒಂದೇ ಒಂದು ಲೈನ್ ಮ್ಯಾನ್ ಕೆಲಸ ಕೂಡ ಕೊಡಿಸೊಕ್ಕೆ ಆಗಿಲ್ಲ ನಂಗೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿ : – ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ ಕಾಮಗಾರಿ ಪರಿಶೀಲಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ