ಬಿಜೆಪಿ ಸೇರ್ಪಡೆಯಾಗುವ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಸಂಸದೆ ಸುಮಲತಾ ಅಂಬರೀಶ್ (SUMALATHA AMBARISH)ಪ್ರತಿಕ್ರಿಯೆ ನೀಡಿದ್ದಾರೆ. ನಾನು ಎಂಪಿ ಆದಾಗಿನಿಂದ ಈ ಚರ್ಚೆ ಆಗ್ತಿದೆ. ನನ್ನ ಜನ ಏನು ಹೇಳ್ತಾರೆ ಅನ್ನೊದನ್ನ ಕೇಳ್ತಿನಿ. ನಾನು ಇನ್ನು ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ನನ್ನ ಕೋರ್ ಸಪೋರ್ಟರ್ ನಿಮ್ಮ ನಿಲುವಿಗೆ ಬದ್ದ ಅಂತಿದ್ದಾರೆ.
ಯಾವುದೇ ಪಕ್ಷ ಸೇರ್ಪಡೆ ಬಗ್ಗೆ ನಾನು ನಿರ್ಧಾರ ಮಾಡಿಲ್ಲ. ಸದ್ಯ ನನಗೆ ಮಂಡ್ಯ ಅಭಿವೃದ್ಧಿ ಮುಖ್ಯ. ಪರಿಸ್ಥಿತಿ, ಸಂದರ್ಭ ನೋಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ನಾನು ಇನ್ನು ಯಾವುದೇ ನಿರ್ಧಾರ ತೆಗೆದುಕೊಳ್ಳದಿರೋದು ಪ್ರೆಷರ್ ಪಾಲಿಟಿಕ್ಸ್ ಅಲ್ಲ. ಹಿಂದೆ ಬಿಜೆಪಿ ಕಾಂಗ್ರೆಸ್ (CONGRESS)ಕಾರ್ಯಕರ್ತರೆಲ್ಲರೂ ಚುನಾವಣೆಯಲ್ಲಿ ಬೆಂಬಲಿಸಿದ್ರು. ಬಿಜೆಪಿ ಕಾಂಗ್ರೆಸ್ ಎರಡು ಬೆಂಬಲಿಸಿದ್ದು ನನಗೆ ಮಾತ್ರ. ತಟಸ್ಥರಾಗಿದ್ರೆ ಅನುಕೂಲ ಅನ್ನೋದು ಸದ್ಯದ ಚಿಂತನೆ. ಹಲವು ಬಿಜೆಪಿ ನಾಯಕರು ಮಾತಾಡಿದ್ದಾರೆ. ಪಕ್ಷಕ್ಕೆ ಬನ್ನಿ ಅಂತ ಹೇಳಿದ್ದಾರೆ. ಆದ್ರೆ ಇನ್ನು ಯಾವುದೇ ನಿರ್ಧಾರ ಮಾಡಿಲ್ಲ ಎಂದು ಹೇಳಿದ್ರು. ಇದನ್ನು ಓದಿ :- ಜಮೀನು ವ್ಯಾಜ್ಯ- ತಾಲೂಕು ಕಚೇರಿಯಲ್ಲೇ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ, 40 ಬಾರಿ ಕೊಚ್ಚಿ ಕೊಲೆ ಯತ್ನ
ಮಂಡ್ಯದಲ್ಲಿ ಅಭಿಷೇಕ್ ಸ್ಪರ್ಧಿಸೋ ವಿಚಾರ
ಅಭಿಷೇಕ್ ಸ್ಪರ್ಧೆ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ಮಾಡಿಲ್ಲ. ಅವನು ಸಿನಿಮಾ ಮಾಡ್ತಾ ಇದ್ದಾನೆ. ಅಭಿಮಾನಿಗಳು ಬೆಂಬಲಿಗರು ಚುನಾವಣೆಗೆ ನಿಲ್ಲಿಸಬೇಕು ಅಂತ ಆಸೆ ವ್ಯಕ್ತಪಡಿಸಿದ್ದಾರೆ. ಆದ್ರೆ ಅಭಿಷೇಕ್ ಯಾವುದೇ ನಿರ್ಧಾರ ಮಾಡಿಲ್ಲ ಎಂದು ತಿಳಿಸಿದ್ರು.
ಇದನ್ನು ಓದಿ :- ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಶಸ್ತ್ರ ಪಡೆಗಳು ಪುರಾವೆ ತೋರಿಸಬೇಕಾಗಿಲ್ಲ- ರಾಹುಲ್ ಗಾಂಧಿ