ನಾನು ಮೊಳಕಾಲ್ಮೂರು ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಮೊಳಕಾಲ್ಮೂರಿನಿಂದಲೇ ಸ್ಪರ್ಧಿಸಬೇಕೆಂಬುದೆ ನನ್ನ ಬಯಕೆಯಾಗಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು ಕಳೆದ ಬಾರಿ ಎಸ್ಟಿ ಸಮುದಾಯಕ್ಕೆ ಸೇರಿದ ನನಗೆ ಎರೆಡು ಕಡೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನ ಪಕ್ಷ ಕಲ್ಪಿಸಿತ್ತು. ಬಾದಾಮಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದಾರಾಮಯ್ಯ ವಿರುದ್ದ ಕಡಿಮೆ ಅಂತರದಲ್ಲಿ ಸೋತೆ. ಮೊಳಕಾಲ್ಮೂರಿನಲ್ಲಿ 45 ಲಕ್ಷ ಮತಗಳಿಂದೆ ಜಯಗಳಿಸಿದೆ. ನನ್ನ ಮೂವತ್ತು ವರ್ಷಗಳ ರಾಜಕೀಯ ಅನುಭವದಲ್ಲಿ ಇಂತ ಅವಕಾಶ ರಾಜ್ಯದಲ್ಲಿ ಯಾರಿಗೂ ಸಿಕ್ಕಿಲ್ಲ.
ನಾನು ಎಲ್ಲಿ ಸ್ಪರ್ಧೆ ಮಾಡಬೇಕೆಂದು ಪಕ್ಷ ಬಯಸಿ ತೀರ್ಮಾನ ಮಾಡಿದರೆ ನಾನು ಅದಕ್ಕೆ ಬದ್ದ. ಎಸ್ಟಿ ಮೀಸಲಾತಿ ಹೋರಾಟ ಆರಂಭ ಮಾಡಿದ್ದು ನಾವು. ಈಗಾಗಲೇ ವಾಲ್ಮೀಕಿ ಜಯಂತಿಗೆ ರಜೆ ಸೇರಿದಂತೆ ಪ್ರತ್ಯೇಕ ಪರಿಶಿಷ್ಟ ಕಲ್ಯಾಣ ಇಲಾಖೆ ಅದಕ್ಕೊಬ್ಬ ಸಚಿವರನ್ನು ಸರ್ಕಾರ ನೇಮಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನಾನು ಈ ಸರಕಾರದ ಅವಧಿಯಲ್ಲಿ 7.5 ಮೀಸಲಾತಿಯನ್ನ ಕೊಡುತ್ತೇವೆ ಎಂದು ತಿಳಿಸಿದ್ರು.
ಇದನ್ನು ಓದಿ :- ಮುಸಲ್ಮಾನರನ್ನು ತೃಪ್ತಿ ಪಡಿಸುವ ಯತ್ನ ಒಳ್ಳೆಯದಲ್ಲ – ಕೆ.ಎಸ್ ಈಶ್ವರಪ್ಪ