ರಾಷ್ಟ್ರೀಯ ಪಕ್ಷಗಳ ಬಗ್ಗೆ ನಾನು ಮಾತನಾಡುವುದಿಲ್ಲ – ನಿಖಿಲ್ ಕುಮಾರಸ್ವಾಮಿ

ಡಿ.16ಕ್ಕೆ ಹೆಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬ ಹಿನ್ನೆಲೆ ರಾಮನಗರದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀನಿವಾಸ ಕಲ್ಯಾಣ ಮಹೋತ್ಸವ ವೇದಿಕೆಯನ್ನು ವೀಕ್ಷಣೆ ಮಾಡಲು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇಂದು ರಾಮನಗರಕ್ಕೆ ಆಗಮಿಸಿದ್ದಾರೆ.

ಡಿ.16ಕ್ಕೆ ಹೆಚ್.ಡಿ.ಕುಮಾರಸ್ವಾಮಿ (HD.Kumarswamy) ಹುಟ್ಟುಹಬ್ಬ ಹಿನ್ನೆಲೆ ರಾಮನಗರ (Ramnagara) ದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಶ್ರೀನಿವಾಸ ಕಲ್ಯಾಣ ಮಹೋತ್ಸವ ವೇದಿಕೆಯನ್ನು ವೀಕ್ಷಣೆ ಮಾಡಲು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil kumarswamy) ಇಂದು ರಾಮನಗರಕ್ಕೆ ಆಗಮಿಸಿದ್ದಾರೆ.

Image

ವೀಕ್ಷಣೆ ಮಾಡಿ ನಂತರ ಮಾಡಿ ಮಾತನಾಡಿದ ಅವರು, ರಾಮನಗರದಲ್ಲಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮೂಲ ದೇವರ ವಿಗ್ರಹವನ್ನು 11 ಕಲಾತಂಡಗಳೊಂದಿಗೆ ರಾಮನಗರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಇದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಪಕ್ಷಾತೀತವಾಗಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಎಲ್ಲಾ ಪಕ್ಷದ ಕಾರ್ಯಕರ್ತರನ್ನು ಆಹ್ವಾನಿಸುತ್ತೇವೆ. ಅತಿ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಚನ್ನಮ್ಮ ದೇವೇಗೌಡ್ರು ಕುಮಾರಣ್ಣ, ಹೊರತಾಗಿ ಬೇರಾರು ವೇದಿಕೆಯಲ್ಲಿ ಇರೋದಿಲ್ಲ. ಇದು ಧಾರ್ಮಿಕ ಕಾರ್ಯಕ್ರಮ ೆಂದು ತಿಳಿಸಿದ್ರು.

Image

ಪಂಚರತ್ನ ರಥಯಾತ್ರೆ ಕಾರ್ಯಕ್ರಮ ವಿಚಾರ
ಪಂಚರತ್ನ ಶಿಕ್ಷಣ ಆರೋಗ್ಯ ರೈತಪರ ಕಾರ್ಯಕ್ರಮ. ಯುವಕ ಯುವತಿ ಉದ್ಯೋಗ ಸೃಷ್ಠಿ ವಸತಿ ಯೋಜನೆ ಉದ್ದೇಶದಿಂದ ನಡೆಸಲಾಗುತ್ತಿದೆ. ಪಂಚರತ್ನ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ . ತಡರಾತ್ರಿ 3 ಗಂಟೆ ಆದರೂ ಜನತೆ ನಿರೀಕ್ಷೆ ಮೀರಿ ಸ್ವಾಗತಿಸುತ್ತಿದ್ದಾರೆ . ರಾಷ್ಟ್ರೀಯ ಪಕ್ಷಗಳ ಬಗ್ಗೆ ನಾನು ಮಾತನಾಡೋಲ್ಲ. ಪಂಚರತ್ನ ಯೋಜನೆ ಸಂಪೂರ್ಣಕ್ಕಾಗಿ ಜನತೆ ಸ್ಪಂದಿಸುತ್ತಿದ್ದಾರೆ.
ಮಳೆ (Rain) ಹಿನ್ನೆಲೆ ಕೆಲವೆಡೆ ರದ್ದುಗೊಳಿಸಲಾಗಿದೆ. 15ರಿಂದ ಮಾಗಡಿ, ರಾಮನಗರ ಕನಕಪುರ, ಚನ್ನಪಟ್ಟಣ  (Channapatna)  ನಂತರ ಮಂಡ್ಯ ಪ್ರವೇಶಸಲಿದೆ. ತಿರುಪತಿ ತಿಮ್ಮಪ್ಪ ನಮಗೆ ಶಕ್ತಿ ನೀಡಿದ್ದು ಐತಿಹಾಸಿಕ ಕಾರ್ಯಕ್ರಮದ ಮೂಲಕ ಮುನ್ನಡೆಯುತ್ತೇವೆ. ಕುಮಾರಣ್ಣ ಹೋರಾಟಕ್ಕೆ ಕೈ ಜೋಡೊಸುವ ಅನಿವಾರ್ಯತೆ ಇದೆ.
ಜನತೆ ನಿರೀಕ್ಷೆಗೆ ತಕ್ಕಂತೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ರು. ಇದನ್ನು ಓದಿ : –  ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಬಲವರ್ಧನೆ..! ವಲಸೆ ಬಂದ ನಾಯಕರು

Image

ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರ
ಮುಂದೆ ಪಕ್ಷ ಏನು ತೀರ್ಮಾನ ಮಾಡ್ತಾರೋ ಅದಕ್ಕ ನಾನು ಬದ್ದ. ನಾನು ಪಕ್ಷ ಸಂಘಟನೆ (Party organization) ಗೆ ಮೊದಲು ಆಧ್ಯತೆ ನೀಡ್ತೇವೆ. ಒತ್ತಡದಲ್ಲಿ ಸರ್ಕಾರ ನಡೆಸಿದ ಕುಮಾರಸ್ವಾಮಿ ಅವರ ಆಡಳಿತ ವೈಖರಿ ಕಣ್ಣ ಮುಂದಿದೆ. ಅದಕ್ಕಾಗಿ ಸ್ವತಂತ್ರ ಸರ್ಕಾರ ರಚನೆಯಾದ್ರೆ ಎಲ್ಲವೂ ಸಕಾರಗೊಳಿಸಲು ಸಾಧ್ಯವಾಗುತ್ತೆ.ದೇವರನ್ನ ನಮ್ಮ ಕುಟುಂಬ ತುಂಬಾ ನಂಬುತ್ತೇವೆ. ಎಲ್ಲಾ ಧರ್ಮದ ಮೇಲೆ ಪ್ರೀತಿ ಗೌರವ ಇದೆ. ವಿಶೇಷವಾಗಿ ರಾಜ್ಯದ ಅಭಿವೃದ್ಧಿಗೆ ಹಾಗೂ ಜನತೆಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಪೂಜೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ರು.

ಇದನ್ನು ಓದಿ : –  ಪಕ್ಷ ಯಾವುದೇ ಸವಾಲು ನೀಡಿದರೂ ನಿಭಾಯಿಸುತ್ತೇನೆ – ಬಿ.ವೈ ವಿಜಯೇಂದ್ರ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!