ಸಿಎಂ ಬೊಮ್ಮಾಯಿಯವರೇ ನಿಮ್ಮ ಬಳಿ ಬಟ್ಟೆ, ಶೂ ಕೊಡಲು ಸಾಧ್ಯವಾಗದೇ ಇದ್ದರೆ ಹೇಳಿ ಕಾಂಗ್ರೆಸ್ ಪಕ್ಷದಿಂದ ರಾಜ್ಯದ ಎಲ್ಲಾ ಕಡೆ ಭಿಕ್ಷೆ ಬೇಡಿ ಬಟ್ಟೆ ಕೊಡ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( d.k shivkumar) ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಶಿಕ್ಷಣ ಸಚಿವ ಬಿ ಸಿ ನಾಗೇಶ್ (b.c nagesh) ಹೇಳಿಕೆ ಸರಿಯಾದುದಲ್ಲ. ಇದು ಅಗೌರವದ ಹೇಳಿಕೆ. ಮಾನವೀಯತೆಗೆ ಮಾಡಿದ ಅವಮಾನ ಎಂದು ಗುಡುಗಿದ್ದಾರೆ.
ಮಾನ್ಯ ಸಿಎಂ ಬೊಮ್ಮಾಯಿ(basavarj bommai) ಅವರೇ ನಿಮ್ಮ ಬಳಿ ಬಟ್ಟೆ, ಶೂ ಕೊಡಲು ಸಾಧ್ಯವಾಗದೇ ಇದ್ದರೆ ಹೇಳಿ ಕಾಂಗ್ರೆಸ್ ಪಕ್ಷದಿಂದ ರಾಜ್ಯದ ಎಲ್ಲಾ ಕಡೆ ಭಿಕ್ಷೆ ಬೇಡಿ ಬಟ್ಟೆ ಕೊಡ್ತೇವೆ. ಸಿ ಎಸ್ ಆರ್ ಫಂಡ್ ಬಳಕೆ ಮಾಡ್ತೇವೆ. ರಾಜ್ಯದ ಎಲ್ಲಾ ಸಂಸ್ಥೆಗಳಿಗೂ ಮನವಿ ಮಾಡ್ತೇನೆ. ಸಹಾಯ ಮಾಡಿ ಅಂತ ಮನವಿ ಮಾಡ್ತೇನೆ. ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಬಟ್ಟೆಗಳನ್ನು ಕೊಡಿಸಲು, ಒಳ್ಳೆಯ ಶಾಲೆಯಲ್ಲಿ ಓದಿಸಲು ದುಡಿಯುತ್ತಾರೆ. ಹೀಗಾಗಿ ಸರ್ಕಾರವೂ ಸಹ ಶೂ, ಬಟ್ಟೆಗಳನ್ನು ಕೊಡುವ ಕಾರ್ಯಕ್ರಮ ಮಾಡಿದೆ. ಆದರೆ ಶಿಕ್ಷಣ ಸಚಿವರು ಇದಕ್ಕೆ ವಿರುದ್ಧ ಹೇಳಿಕೆ ನೀಡಿದ್ದಾರೆ. ಇವರ್ಯಾಕೆ ಬಟ್ಟೆಗಳನ್ನು ಹಾಕ್ತಾರೆ..? ಇವರು ಬನಿಯನ್, ಚಡ್ಡಿ ಹಾಕಿಕೊಂಡು ವಿಧಾನಸೌಧಕ್ಕೆ ಬರಲಿ. ಇದನ್ನೂ ಓದಿ : – ಮಳೆಯಿಂದ ಹಾನಿಗೊಳಗಾಗಿರುವ ಜಿಲ್ಲೆಗಳ ಜಿಲ್ಲಾಧಿಕಾರಿ, ಸಿಇಒ ಗಳ ಜೊತೆ ಸಿಎಂ ಬೊಮ್ಮಾಯಿ ಸಭೆ
ನೊಂದ ಮಕ್ಕಳ, ಪೋಷಕರ ಗೌರವ ಕಾಪಾಡಲು ಕಾಂಗ್ರೆಸ್ (congress) ಬದ್ಧವಾಗಿದೆ. ಇದು ರಾಜ್ಯದ ಎಲ್ಲಾ ಮಕ್ಕಳ ಸ್ವಾಭಿಮಾನದ ವಿಚಾರ. ನಮ್ಮಮಕ್ಕಳ ಬದುಕಿನ ವಿಚಾರ. ನೀವು ಮಕ್ಕಳನ್ನು ಅಗೌರವದಿಂದ ಕಾಣ್ತಾ ಇದ್ದೀರಾ. ನಮ್ಮ ಸರ್ಕಾರ ಮೊದಲಿನಿಂದಲೂ ಶಾಲಾ ಮಕ್ಕಳಿಗೆ ಬಟ್ಟೆ, ಶೂ, ಶಾಕ್ಸ್ ಕೊಡ್ತಾ ಬಂದಿದೆ. ಕಾಂಗ್ರೆಸ್ ನಿಂದ ಒಂದು ಕಾರ್ಯಕ್ರಮ ಹಾಕಿಕೊಳ್ಳುತ್ತೇವೆ. ಎಲ್ಲಾ ತಾಲ್ಲೂಕು ಜಿಲ್ಲೆಯಲ್ಲಿ ಭಿಕ್ಷೆ ಎತ್ತಿ, ಮಕ್ಕಳಿಗೆ ಬಟ್ಟೆಗಳನ್ನು ಕೊಡ್ತೇವೆ. ಕಾರ್ಯಕರ್ತರಿಗೆ ನಾವು ಹೇಳ್ತೇನೆ. ಎಲ್ಲಾ ಮಕ್ಕಳಿಗೆ ಬಟ್ಟೆಗಳನ್ನು ಕೊಡಲು, ಶೂ, ಶಾಕ್ಸ್ ಕೊಡಲು ಹೇಳ್ತೇನೆ ಎಂದು ಬಿಜೆಪಿ ಸರಕಾರದ ವಿರುದ್ದ ಕಿಡಿಕಾರಿದ್ರು.
ಇದೇ ವೇಳೆ ಸಿದ್ದರಾಮೋತ್ಸವಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಡಿಕೆ ಶಿವಕುಮಾರ್ ಯೂ ಟರ್ನ್ ಹೊಡೆದಿದ್ದಾರೆ. ಸಿದ್ದರಾಮೋತ್ಸವ ಪಕ್ಷದ ವೇದಿಕೆಯಲ್ಲೇ ನಡೆಯುತ್ತಿರುವ ಕಾರ್ಯಕ್ರಮ ಎಂದು ಡಿಕೆಶಿ ಘೋಷಣೆ ಮಾಡಿದ್ದಾರೆ.
ಪಕ್ಷದ ಒಳಗಡೆ ನಡೆಯುತ್ತಿರುವ ಮುಸುಕಿನ ಗುದ್ದಾಟದ ಮಧ್ಯೆ ಡಿಕೆಶಿಯನ್ನು ಸಿದ್ದರಾಮಯ್ಯ ಬೆಳಗಿನ ಉಪಹಾರಕ್ಕೆ ಆಹ್ವಾನಿಸಿದ್ದರು. ಈ ಮೂಲಕ ಸಿದ್ದರಾಮೋತ್ಸವವನ್ನು ಪಕ್ಷದ ಸಮಾವೇಶವಾಗಿ ಬಿಂಬಿಸಲು ಹೊರಟ ಡಿಕೆಶಿಯನ್ನ ವಿಶ್ವಾಸದ ದಾಳದ ಮೂಲಕ ಕಟ್ಟಿ ಹಾಕಲು ಸಿದ್ದರಾಮಯ್ಯ ಪ್ರಯತ್ನ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಶಿವಾನಂದ ಸರ್ಕಲ್ ಬಳಿಯಿರುವ ಸಿದ್ದು ನಿವಾಸದಲ್ಲಿ ಡಿಕೆಶಿ ಬೆಳಗಿನ ಉಪಹಾರ ಸವಿದ್ರು.
ಇದನ್ನೂ ಓದಿ : – ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ -KRS ಭರ್ತಿಗೆ ಐದು ಅಡಿ ಮಾತ್ರ ಬಾಕಿ