ಮಧುಗಿರಿ ( MADHUGIRI )ವಿಧಾನಸಭಾ ಕ್ಷೇತ್ರದ ಕೊಡಿಗೇನಹಳ್ಳಿಯಲ್ಲಿ ಮನೆಯ ಸಂಪ್ನಲ್ಲಿ ಮುಳುಗಿದ್ದ 4 ವರ್ಷದ ಬಾಲಕ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ವಿಳಂಬದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಸರಕಾರವೇ ಈ ಸಾವಿಗೆ ನೇರ ಕಾರಣ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ( H.D KUMARASWAMY ) ಸರಣಿ ಟ್ವೀಟ್ ಮಾಡುವ ಮೂಕಲ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಆರೋಗ್ಯ ಇಲಾಖೆ ಅದೆಷ್ಟು ಹದಗೆಟ್ಟು ಹೋಗಿದೆ, ಯಾವ ಮಟ್ಟಕ್ಕೆ ಅವ್ಯವಸ್ಥೆಯಿಂದ ಕೂಡಿದೆ ಎನ್ನುವುದಕ್ಕೆ ಮಧುಗಿರಿ ವಿಧಾನಸಭೆ ಕ್ಷೇತ್ರದ ಕೊಡಿಗೇನಹಳ್ಳಿಯಲ್ಲಿ ನಡೆದ 4 ವರ್ಷದ ಬಾಲಕನ ದುರಂತ ಮರಣವೇ ಸಾಕ್ಷಿ. 1/7#ಅನಾರೋಗ್ಯ_ಇಲಾಖೆ pic.twitter.com/yTpqsvKwSc
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 2, 2022
ರಾಜ್ಯದಲ್ಲಿ ಆರೋಗ್ಯ ಇಲಾಖೆ ಅದೆಷ್ಟು ಹದಗೆಟ್ಟು ಹೋಗಿದೆ, ಯಾವ ಮಟ್ಟಕ್ಕೆ ಅವ್ಯವಸ್ಥೆಯಿಂದ ಕೂಡಿದೆ ಎನ್ನುವುದಕ್ಕೆ ಮಧುಗಿರಿ ವಿಧಾನಸಭೆ ಕ್ಷೇತ್ರದ ಕೊಡಿಗೇನಹಳ್ಳಿಯಲ್ಲಿ ನಡೆದ 4 ವರ್ಷದ ಬಾಲಕನ ದುರಂತ ಮರಣವೇ ಸಾಕ್ಷಿ.
ಅಲ್ಲಿನ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರಿದ್ದರೂ ಕರ್ತವ್ಯದಲ್ಲಿ ಇರಲಿಲ್ಲ. ಆಂಬ್ಯುಲೆನ್ಸ್ ಇದ್ದರೂ ಚಾಲಕನಿರಲಿಲ್ಲ.ಗ್ರಾಮೀಣ ಪ್ರದೇಶದ ಆರೋಗ್ಯ ಅವ್ಯವಸ್ಥೆಯ ಕ್ರೂರ ದರ್ಶನ ಇದು. ಆರೋಗ್ಯ ಇಲಾಖೆಯ ಅದಕ್ಷತೆಗೆ ಹಿಡಿದ ಕನ್ನಡಿ ಇದು. ಕೇವಲ ಒಂದೇ ವಾರದಲ್ಲಿ ಇಂಥ 2 ಸಾವುಗಳು ಅಲ್ಲೇ ಆಗಿರುವುದು ರಾಜ್ಯ ಬಿಜೆಪಿ ಸರಕಾರ ತಲೆ ತಗ್ಗಿಸುವ ಸಂಗತಿ.2/7
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 2, 2022
ಅಲ್ಲಿನ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರಿದ್ದರೂ ಕರ್ತವ್ಯದಲ್ಲಿ ಇರಲಿಲ್ಲ. ಆಂಬ್ಯುಲೆನ್ಸ್ ಇದ್ದರೂ ಚಾಲಕನಿರಲಿಲ್ಲ.ಗ್ರಾಮೀಣ ಪ್ರದೇಶದ ಆರೋಗ್ಯ ಅವ್ಯವಸ್ಥೆಯ ಕ್ರೂರ ದರ್ಶನ ಇದು. ಆರೋಗ್ಯ ಇಲಾಖೆಯ ಅದಕ್ಷತೆಗೆ ಹಿಡಿದ ಕನ್ನಡಿ ಇದು. ಕೇವಲ ಒಂದೇ ವಾರದಲ್ಲಿ ಇಂಥ 2 ಸಾವುಗಳು ಅಲ್ಲೇ ಆಗಿರುವುದು ರಾಜ್ಯ ಬಿಜೆಪಿ ( BJP ) ಸರಕಾರ ತಲೆ ತಗ್ಗಿಸುವ ಸಂಗತಿ.
ನೀರಿಗೆ ಬಿದ್ದ ಕಂದನನ್ನು ಬದುಕಿಸಿಕೊಳ್ಳಲು ಆಸ್ಪತ್ರೆಗೆ ಓಡಿಬಂದ ಪೋಷಕರಿಗೆ, ಅಲ್ಲಿ ವೈದ್ಯರೇ ಇಲ್ಲದಿದ್ದು ಕಂಡು ಎಷ್ಟು ಆಘಾತ ಆಗಿರಬಹುದು ಎಂಬುದನ್ನು ನಾನು ಊಹಿಸಬಲ್ಲೆ. ಜೀವಬಿಟ್ಟ ಕಂದನನ್ನು ಎತ್ತಿಕೊಂಡು ಓಡುತ್ತಿದ್ದ ಆ ತಾಯಿ ತಂದೆಯನ್ನು ಕಂಡು ನನಗಾದ ನೋವು ಅಷ್ಟಿಷ್ಟಲ್ಲ.3/7
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 2, 2022
ನೀರಿಗೆ ಬಿದ್ದ ಕಂದನನ್ನು ಬದುಕಿಸಿಕೊಳ್ಳಲು ಆಸ್ಪತ್ರೆಗೆ ಓಡಿಬಂದ ಪೋಷಕರಿಗೆ, ಅಲ್ಲಿ ವೈದ್ಯರೇ ಇಲ್ಲದಿದ್ದು ಕಂಡು ಎಷ್ಟು ಆಘಾತ ಆಗಿರಬಹುದು ಎಂಬುದನ್ನು ನಾನು ಊಹಿಸಬಲ್ಲೆ. ಜೀವಬಿಟ್ಟ ಕಂದನನ್ನು ಎತ್ತಿಕೊಂಡು ಓಡುತ್ತಿದ್ದ ಆ ತಾಯಿ ತಂದೆಯನ್ನು ಕಂಡು ನನಗಾದ ನೋವು ಅಷ್ಟಿಷ್ಟಲ್ಲ.
ನನ್ನ ನೇತೃತ್ವದ ಪಂಚರತ್ನ ರಥಯಾತ್ರೆ ಮಧುಗಿರಿ ಕ್ಷೇತ್ರದ ಕೊಡಿಗೇನಹಳ್ಳಿಗೆ ಬಂದಾಗ ನಾನು ಈ ದುರಂತವನ್ನು ಕಣ್ಣಾರೆ ಕಂಡೆ. ರಾಜ್ಯದ ಆರೋಗ್ಯ ವ್ಯವಸ್ಥೆಗೆ ಬಡಿದ ಅನಾರೋಗ್ಯದ ಸಾಕ್ಷಾತ್ಕಾರ ನನಗಾಯಿತು. ರೋಗಗ್ರಸ್ತ ಬಿಜೆಪಿ ಆಡಳಿತದಲ್ಲಿ ಆಸ್ಪತ್ರೆಗಳು ಸಾವಿನ ಕೂಪಗಳೇ ಆಗಿವೆ.4/7
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 2, 2022
ನನ್ನ ನೇತೃತ್ವದ ಪಂಚರತ್ನ ರಥಯಾತ್ರೆ ಮಧುಗಿರಿ ಕ್ಷೇತ್ರದ ಕೊಡಿಗೇನಹಳ್ಳಿಗೆ ಬಂದಾಗ ನಾನು ಈ ದುರಂತವನ್ನು ಕಣ್ಣಾರೆ ಕಂಡೆ. ರಾಜ್ಯದ ಆರೋಗ್ಯ ವ್ಯವಸ್ಥೆಗೆ ಬಡಿದ ಅನಾರೋಗ್ಯದ ಸಾಕ್ಷಾತ್ಕಾರ ನನಗಾಯಿತು. ರೋಗಗ್ರಸ್ತ ಬಿಜೆಪಿ ಆಡಳಿತದಲ್ಲಿ ಆಸ್ಪತ್ರೆಗಳು ಸಾವಿನ ಕೂಪಗಳೇ ಆಗಿವೆ. ಇದನ್ನೂ ಓದಿ : – ಚನ್ನಪಟ್ಟಣದ ಹಿರಿಯ ಜೆಡಿಎಸ್ ಮುಖಂಡ ಸಿಂ.ಲಿಂ.ನಾಗರಾಜು ವಿಧಿವಶ – ಸಂತಾಪ ಸೂಚಿಸಿದ ಹೆಚ್ಡಿಕೆ
ಆ ಕಂದನ ಸಾವಿಗೆ ನ್ಯಾಯ ಬೇಕಿದೆ. ಸರಕಾರವೇ ಈ ಸಾವಿಗೆ ನೇರ ಕಾರಣ, ಆರೋಗ್ಯ ಸಚಿವರೇ ಹೊಣೆ. ಆತ್ಮಸಾಕ್ಷಿ ಎನ್ನುವುದಿದ್ದರೆ ಅವರು ತಕ್ಷಣ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ @BSBommai ಅವರಿಗೆ ನೈತಿಕತೆ ಎನ್ನುವುದಿದ್ದರೆ ಆರೋಗ್ಯ ಸಚಿವರನ್ನು ಕೂಡಲೇ ಸಂಪಟದಿಂದ ಕಿತ್ತೊಗೆಯಬೇಕು.5/7
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 2, 2022
ಆ ಕಂದನ ಸಾವಿಗೆ ನ್ಯಾಯ ಬೇಕಿದೆ. ಸರಕಾರವೇ ಈ ಸಾವಿಗೆ ನೇರ ಕಾರಣ, ಆರೋಗ್ಯ ಸಚಿವರೇ ಹೊಣೆ. ಆತ್ಮಸಾಕ್ಷಿ ಎನ್ನುವುದಿದ್ದರೆ ಅವರು ತಕ್ಷಣ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ @BSBommai ಅವರಿಗೆ ನೈತಿಕತೆ ಎನ್ನುವುದಿದ್ದರೆ ಆರೋಗ್ಯ ಸಚಿವರನ್ನು ಕೂಡಲೇ ಸಂಪುಟದಿಂದ ಕಿತ್ತೊಗೆಯಬೇಕು.
ಅಲ್ಲದೆ; ಕರ್ತವ್ಯಕ್ಕೆ ಹಾಜರಾಗದ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಅಮಾನತು ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಡಿಎಚ್ ಓ ಅವರ ಜತೆ ಸ್ಥಳದಿಂದಲೇ ಮಾತನಾಡಿದೆ.6/6
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 2, 2022
ಅಲ್ಲದೆ; ಕರ್ತವ್ಯಕ್ಕೆ ಹಾಜರಾಗದ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಅಮಾನತು ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಡಿಎಚ್ ಓ ಅವರ ಜತೆ ಸ್ಥಳದಿಂದಲೇ ಮಾತನಾಡಿದೆ.
ನೊಂದ ಕುಟುಂಬಕ್ಕೆ ಸರಕಾರ ಕೂಡಲೇ ಪರಿಹಾರ ನೀಡಬೇಕು. ಮುಂದೆ ಎಲ್ಲಿಯೂ ಇಂಥ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ದುರ್ಮರಣ ಹೊಂದಿದ ಆ ಮಗುವಿನ ಆತ್ಮಕ್ಕೆ ಚಿರಶಾಂತಿ ಸಿಗಲಿ.7/7#ಅನಾರೋಗ್ಯ_ಇಲಾಖೆ
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 2, 2022
ನೊಂದ ಕುಟುಂಬಕ್ಕೆ ಸರಕಾರ ಕೂಡಲೇ ಪರಿಹಾರ ನೀಡಬೇಕು. ಮುಂದೆ ಎಲ್ಲಿಯೂ ಇಂಥ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ದುರ್ಮರಣ ಹೊಂದಿದ ಆ ಮಗುವಿನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ : – ಚಿಕಿತ್ಸೆ ವಿಳಂಬದಿಂದ ಬಾಲಕ ಸಾವು – ಮೃತದೇಹವನ್ನು ಜೆಡಿಎಸ್ ಸಮಾವೇಶಕ್ಕೆ ಹೊತ್ತುತಂದ ಪೋಷಕರು