ಸಿಎಂ ಕೊಟ್ಟ ಮಾತು ತಪ್ಪಿದ್ರೆ ನಾನು ಏಕಾಂಗಿಯಾಗಿ ಹೋರಾಟ ಮಾಡ್ತೇನೆ – ಜಯ ಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ( PACHAMASALI )  2ಎ ಮೀಸಲಾತಿ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಗದಗ ( GADAGA ) ದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ( Jaya Mrityunjaya ) ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.

ಪಂಚಮಸಾಲಿ ( PACHAMASALI )  2ಎ ಮೀಸಲಾತಿ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಗದಗ ( GADAGA ) ದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ( Jaya Mrityunjaya ) ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ. 20 ಲಕ್ಷಕ್ಕಿಂತ ಹೆಚ್ಚು ಪಂಚಮಸಾಲಿಗಳ ಶಕ್ತಿ ಪ್ರದರ್ಶನವನ್ನ ಸುವರ್ಣ ಸೌಧದ ಎದುರುಗಡೆ ನಾವೆಲ್ಲ ಮಾಡಿದ್ದೇವೆ.

Study on Panchamasali reservation far from complete | Deccan Herald

ಕರ್ನಾಟಕ ಇತಿಹಾಸದಲ್ಲಿ ಹೊಸ ದಾಖಲೆ ನಾವು ನಿರ್ಮಾಣ ಮಾಡಿದ್ದೇವೆ. ಸರ್ಕಾರ ನಮ್ಮ ಹೋರಾಟಕ್ಕೆ ಮಣಿದು ಮಾರ್ಗ ಮಧ್ಯ ಪಂಚಮಸಾಲಿ ಸಮುದಾಯದ ನಾಯಕರನ್ನ ಮುಖ್ಯಮಂತ್ರಿ ಕರೆಸಿ ಮಾತುಕತೆ ಮಾಡಿದ್ದಾರೆ. ಜನ ಅಂದು ಎಲ್ಲ ರೀತಿಯಿಂದ ತಯಾರಾಗಿ ಬಂದಿದ್ರು. ಮೀಸಲಾತಿ ( RISVERVESTION ) ಕೊಟ್ರೆ ಸನ್ಮಾನ, ಕೊಡದಿದ್ರೆ ವಿಧಾನಸೌಧ ಮುತ್ತಿಗೆಗೆ ತಯಾರಾಗಿದ್ರು. ಈ ಸೂಕ್ಷ್ಮತೆ ಅರ್ಥ ಮಾಡಿಕೊಂಡಂತಹ ಮುಖ್ಯಮಂತ್ರಿಗಳು ಸಚಿವ ಸಿ.ಸಿ ಪಾಟೀಲ್ ಮುಖಾಂತರ ಸಂಧಾನ ನಡೆಸಿದ್ರು. ಎಲ್ಲರನ್ನೂ ಕರೆಸಿ ಮುಕ್ತವಾಗಿ ಮಾತುಕತೆ ಮಾಡಿ ಮತ್ತೊಮ್ಮೆ 1 ವಾರಗಳ ಕಾಲ ಕಾಲಾವಕಾಶವನ್ನ ಕೇಳಿದ್ದಾರೆ. ಡಿ.29 ಸಚಿವ ಸಂಪುಟ ಸಭೆಯಲ್ಲಿ ಪಂಚಮಸಲಾಲಿ ಸಮಾಜಕ್ಕೆ ಮೀಸಲಾತಿಯನ್ನ ಖಂಡಿತ ಕೊಟ್ಟೇ ಕೊಡ್ತೇನೆ ಅಂತಾ ಮುಖ್ಯಮಂತ್ರಿ ಮಾತು ಕೊಟ್ಟಿದ್ದಾರೆ. ಇದನ್ನು ಓದಿ : – 2023ಕ್ಕೆ 6 ರಿಂದ 8 ತಿಂಗಳು ಬಂದ್ ಆಗಲಿದೆ ತಿರುಪತಿ ದೇವಾಲಯ…!

After Pai's outburst, CM Bommai assures extensive road repair works in Bengaluru soon | Deccan Herald

ಮುತ್ತಿಗೆ ಹಾಕೋದು ಬೇಡ ಎಂದು ಯತ್ನಾಳ್ , ಕಾಶಪ್ಪನವರ್ ಶಿವಶಂಕರ, ಅರವಿಂದ ಬೆಲ್ಲದ್ ವಿನಯ್ ಕುಲಕರ್ಣಿ ಮನವಿ ಮಾಡಿಕೊಂಡ್ರು. ಹಾಗಾಗಿ ವಿಧಾನಸೌಧ ಮುತ್ತಿಗೆ ಹಾಕೋದು ಬಿಟ್ಟು ಮುಖ್ಯಮಂತ್ರಿ ಮಾತು ಕೊಟ್ಟಂತೆ 29 ನೇ ತಾರೀಕಿನ ವರೆಗೆ ನಾವು ಕಾಯುತ್ತೇವೆ. 29 ನೇ ತಾರೀಕು ಸಿಎಂ ಕೊಟ್ಟ ಮಾತು ತಪ್ಪಿದ್ರೆ ನಾನು ಏಕಾಂಗಿಯಾಗಿ ಹೋರಾಟ ಮಾಡಬೇಕು ಅಂತಾ ತೀರ್ಮಾನಿಸಿದ್ದೇನೆ ಎಂದು ಸರಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನು ಓದಿ : – ಕೊಪ್ಪಳದ ಗಂಗಾವತಿಯಲ್ಲಿ ತಾರಕಕ್ಕೇರಿದ ಕೈ ನಾಯಕರ ತಿಕ್ಕಾಟ…!

 

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!