ತುಮಕೂರು (Tumakuru) ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಹಾಗೂ ಇಬ್ಬರು ಮಕ್ಕಳು ಸಾವು ಪ್ರಕರಣ ಸಂಬಂಧಿಸಿದಂತೆ ಜಿಲ್ಲಾಸ್ಪತ್ರೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ (Araga jnanendra) ನೀಡಿ ಪರಿಶೀಲನೆ ನಡೆಸಿದರು.
ಆರಗ ಜ್ಞಾನೇಂದ್ರ ಜೊತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್, ಸಿಇಓ ವಿದ್ಯಾಕುಮಾರಿ, ಶಾಸಕ ಜ್ಯೋತಿ ಗಣೇಶ್, ಎಸ್ ಪಿ ರಾಹುಲ್ ಕುಮಾರ್ ಸಾಥ್ ನೀಡಿದ್ದಾರೆ. ಜಿಲ್ಲಾಸ್ಪತ್ರೆಯ ಅಧಿಕಾರಿಗಳು, ವೈದ್ಯರು ಹಾಗೂ ಸಿಬ್ಬಂದಿ ಜೊತೆ ಗೃಹ ಸಚಿವರು ಸಭೆ ನಡೆಸಿದ್ರು. ಇದೇ ವೇಳೆ ಬಾಣಂತಿ ಸಾವಿನ ಬಗ್ಗೆ ಸ್ಟಾಫ್ ಜೊತೆ ಚರ್ಚೆ ನಡೆಸಿದ್ದೇನೆ. ಬಂದಂತಹ ರೋಗಿಗಳಿಗೆ ಪ್ರೀತಿಯಿಂದ ಹಾಗೂ ಉಚಿತವಾಗಿ ಚಿಕಿತ್ಸೆ ಕೊಟ್ರೆ ಮಾತ್ರ ಅದು ಸರ್ಕಾರಿ ಆಸ್ಪತ್ರೆ ಆಗುತ್ತೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಇಲ್ಲಾಂದ್ರೆ ಅದು ನರ್ಸಿಂಗ್ ಹೊಂ ಆಗುತ್ತೆ. ಸರಿಯಾಗಿ ಕೆಲಸ ಮಾಡುವಂತೆ ವೈದ್ಯರಿಗೆ ಎಚ್ಚರಿಕೆ ಕೊಟ್ಟಿದ್ದೇನೆ. ಔಷಧಿಗೆ ಚೀಟಿಯನ್ನ ಹೊರಗಡೆ ಬರೆದುಕೊಡಬಾರದು. ಆಸ್ಪತ್ರೆ ಒಳಗಡೆಯೇ ಔಷಧಿ ಕೊಡ್ಬೇಕು. ಅದರ ಬಗ್ಗೆಯೂ ಎಚ್ಚರಿಕೆ ಕೊಟ್ಟಿದ್ದೇನೆ. ಬಾಣಂತಿ ಮತ್ತು ಶಿಶು, ಸಾವು ಪ್ರಕರಣ ಉನ್ನತ ಮಟ್ಟದ ತನಿಖೆ ನಡಿತಿದೆ. ತನಿಖೆ ವರದಿ ಆಧರಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.ಆಸ್ಪತ್ರೆಯಲ್ಲಿ ಹಲವಾರು ಕೊರತೆಗಳಿವೆ ಅವುಗಳನ್ನ ಸರಿದೂಗಿಸುವ ಕೆಲಸ ಮಾಡ್ತೇವೆ ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ಹಿಂದೂ ಅಶ್ಲೀಲ ಪದ ಹೇಳಿಕೆ ವಿಚಾರ
ಕಾಂಗ್ರೆಸೇ ಒಂದು ಅಶ್ಲೀಲ, ಹಿಂದೂ ಪದ ಅಶ್ಲೀಲವಲ್ಲ.ಇಷ್ಟು ದಿನ ಕಾಂಗ್ರೆಸ್ಸಿಗರು ಹಿಂದೂಗಳನ್ನ ಅವಮಾನ ಮಾಡಿಕೊಂಡು ಅಲ್ಪಸಂಖ್ಯಾತರ ಮತ ಪಡೆದುಕೊಂಡು ಅಧಿಕಾರದ ಕುರ್ಚಿ ಮೇಲೆ ಕುಳಿತಿದ್ರು. ಈಗ ಇಡೀ ರಾಜ್ಯ ಮತ್ತು ದೇಶದ ಜನಕ್ಕೆ ಗೊತ್ತಾಗಿದೆ ಎಂದು ಹೇಳಿದ್ರು. ಹಾಗಾಗಿ ಜನ ಕಾಂಗ್ರೆಸ್ ತಿರಸ್ಕರಿಸಿದ್ದಾರೆ. ಈಗಾಗಲೇ ಹಿಂದೂಗಳಿಗೆ ಅವಮಾನ ಮಾಡಿದ್ದಕ್ಕೆ ಬೆಲೆ ತೆತ್ತಿದ್ದಾರೆ. ಮುಂದೆಯೂ ಬೆಲೆ ತರುತ್ತಾರೆ. ಇನ್ನು 5 ತಿಂಗಳಲ್ಲಿ ಚುನಾವಣೆ ಇದೆ, ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಈ ತರ ವಿವಾದ ಸೃಷ್ಟಿಸುತ್ತಿದೆ. ಡಿ.ಕೆ ಶಿವಕುಮಾರ್ ಗೆ ತಾಕತ್ ಇದ್ರೆ ಇವತ್ತು ಸತೀಶ್ ಜಾರಕಿಹೊಳಿ (Satish jarakiholi) ಯನ್ನ ಪಕ್ಷದಿಂದ ಹೊರಗೆಹಾಕಲಿ ಎಂದು ಕಿಡಿ ಕಾರಿದ್ರು. ಇದನ್ನೂ ಓದಿ : – ಸತೀಶ್ ಜಾರಕಿಹೊಳಿ ವಿರುದ್ದ ಬೆಂಗಳೂರು ಸೇರಿ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ವ್ಯಾಪಕ ಪ್ರತಿಭಟನೆ
ಮಗು ಚಿವುಟುವುದು, ತೊಟ್ಟಿಲು ತೂಗುವುದು ಎರಡು ಕೆಲಸವನ್ನ ಡಿ.ಕೆ ಶಿವಕುಮಾರ್ (DK. shivakumar) ಮಾಡಬಾರದು. ಹಿಂದೂ,ಮುಸ್ಲಿಂ ಇಬ್ರನ್ನೂ ಒಟ್ಟಿಗೆ ಸೇರಿಸಿ ಮುಂದೆ ಹೋಗುವುದಕ್ಕೆ ಇವರು ಬಿಡ್ತಿಲ್ಲ. ಪ್ರತ್ಯೇಕವಾಗಿ ಇಡುವಂತಹ ವಿಶೇಷ ಪ್ರಯತ್ನ ಈ ದೇಶದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದ್ರು.ಈ ಹಿಂದೆ ನೂಪುರ್ ಶರ್ಮಾ ಅವರನ್ನು ಬಿಜೆಪಿ ಪಕ್ಷದಿಂದ ಅಮಾನತು ಮಾಡಿತ್ತು. ಅದೇ ರೀತಿ ಸತೀಶ್ ಜಾರಕಿಹೊಳಿ ಮೇಲೆ ಕ್ರಮ ಕೈಗೊಳ್ಳುವ ಧೈರ್ಯ ಕಾಂಗ್ರೆಸ್ ತೊರಲಿ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ : – ಸುಪ್ರೀಂ ಕೋರ್ಟ್ ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ DY ಚಂದ್ರಚೂಡ್ ಪ್ರಮಾಣವಚನ ಸ್ವೀಕಾರ