ಕರ್ನಾಟಕ( karanataka ) ದಲ್ಲಿ ಹಿಂದೂ ಸಮಾಜ ಮೇಲೆದ್ದರೆ ಮುಸ್ಲಿಂ ಗೂಂಡಾಗಳು ಉಳಿಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಮತ್ತು ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ( basavaraj bommai ) ಅವರನ್ನು ಭೇಟಿಯಾಗಿ ಶಿವಮೊಗ್ಗದ ಬೆಳವಣಿಗೆಗಳನ್ನು ವಿವರಿಸಿದ ನಂತರ ಮಾತನಾಡಿದ ಅವರು, ನಾನು ಎಲ್ಲ ಮುಸ್ಲಿಮರು ಗೂಂಡಾಗಳು ಎಂದು ಹೇಳುವುದಿಲ್ಲ. ಆದರೆ ಯಾರೋ ನಾಲ್ಕೈದು ದುಷ್ಕರ್ಮಿಗಳು ಮಾಡುತ್ತಿರುವ ಕೆಲಸವನ್ನು ಸಮಾಜ ಖಂಡಿಸಬೇಕಿತ್ತು. ಆ ಕೆಲಸವನ್ನು ಮುಸ್ಲಿಂ ಸಮಾಜದ ಪ್ರಮುಖರು ಮಾಡಬೇಕು ಎಂದು ಆಗ್ರಹಿಸಿದರು.
ಬಿಜೆಪಿಯ ಅಮೃತಮಹೋತ್ಸವ ಕಾರ್ಯಕ್ರಮ ಕೂಡ ಯಶಸ್ವಿಯಾಗಿದೆ. ಎಲ್ಲಾ ಕಾರ್ಯಕ್ರಮವನ್ನು ಮುಗಿಸಿ ಎಲ್ಲರೂ ಕೂಡ ಮನೆಗೆ ಹೋದ್ವಿ. ಅಷ್ಟರೊಳಗೆ ಕೆಲ ಕಿಡಿಗೇಡಿಗಳು ಸಾರ್ವಕರ್ ಪೋಟೋ ತೆಗೆದುಹಾಕಿದ್ರು. ಎಸ್ ಡಿಪಿಐ ಕಾರ್ಯಕರ್ತ ಸಾರ್ವಕರ್ ಫೋಟೋ ತೆಗೆದುಹಾಕಿದ್ರುಇದರಿಂದ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತವರಣ ಶುರುವಾಯ್ತು. ಈ ಮಧ್ಯೆ ಗಾಂಧಿಬಜಾರ್ ನಲ್ಲಿ ಪ್ರೇಮಸಿಂಗ್ ಹಾಗೂ ಶರವಣ ಹೋಗ್ತಿರುವ ಸಂದರ್ಭದಲ್ಲಿ ೬ ಜನ ಮುಸ್ಲಾಂನ ಗುಂಡಾಗಳು ಪ್ರೇಮ್ ಸಿಂಗ್ ಚಾಕು ಹಾಕಿದ್ದಾರೆ. ಹೊಟ್ಟೆಗೆ ಬಿದ್ದಿರೋದ್ರಿಂದ ನರನಾಡಿಗಳು ಕಟ್ ಆಗಿವೆ. ಬದುಕುಳಿಯೋದು ಕಷ್ಟ ಎನ್ನಲಾಗ್ತಿದೆ. ಪೊಲೀಸರು ಬಹಳ ಶ್ರಮಹಾಕಿ ಹುಡುಕುಹಾಕುವ ಸಂದರ್ಭದಲ್ಲಿ ಫೈರಿಂಗ್ ಒಬ್ಬನ ಕಾಲಿಗೆ ಮಾಡಿದ್ದಾರೆ. ಇದು ಕಾನೂನು ಸುವ್ಯವಸ್ಥೆಯ ವೈಪಲ್ಯ ಅಲ್ಲ. ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ವೈಫಲ್ಯ ಆಗಿಲ್ಲ. ಪದೇಪದೇ ಈತರದ ಘಟನೆ ಆಗ್ತಿದ್ರೂ ವೈಫಲ್ಯ ಆಗಿಲ್ಲ. ಸರ್ಕಾರ ಎಲ್ಲ ಕಠಿಣ ಕ್ರಮ ತಗೋತಿದೆ ಎಂದು ಸರ್ಕಾರದ ಪರ ಈಶ್ವರಪ್ಪ ಬ್ಯಾಟಿಂಗ್ ಮಾಡಿದ್ದಾರೆ.
ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್ ಬೆಂಬಲ ಇದೆ. ಪ್ರೇಮ್ ಸಿಂಗ್ ದೇವರ ದಯೆಯಿಂದ ಇನ್ನೂ ಬದುಕಿದಾನೆ. ಆಸ್ಪತ್ರೆಯಲ್ಲಿ ಪ್ರೇಮ್ ಸಿಂಗ್ ( prem sing ) ಇದ್ದಾನೆ. ಈ ಗಲಭೆ ಹಿಂದೆ ಕಾಂಗ್ರೆಸ್ ನವ್ರು ಇದ್ದಾರೆ. ಗಲಭೆ ಬಗ್ಗೆ ಕಾಂಗ್ರೆಸ್ ನವ್ರು ಖಂಡಿಸ್ತಿಲ್ಲ. ಹಿಂದೂಗಳ ಗಣಪತಿ ಉತ್ಸವದ ಅಡ್ಡ ಬಂದ್ರೆ ಸರಿ ಇರಲ್ಲ. ನೀವು ನಿಮ್ ಹಬ್ಬ ಮಾಡಲ್ವ? ನಾವು ಬೆಂಬಲ ಕೊಡಲ್ವಾ? ನಮ್ಮ ಹಬ್ಬದ ತಂಟೆಗೆ ಬರಬೇಡಿ. ಇದನ್ನೂ ಓದಿ : – ಶಿವಮೊಗ್ಗದಲ್ಲಿ ಹಿಂಸಾಚಾರ – ಕುವೆಂಪು ವಿವಿಗೆ ರಜೆ ಘೋಷಣೆ – ಪರೀಕ್ಷೆಗಳು ಮುಂದೂಡಿಕೆ
ಸರ್ಕಾರ ನಡೀತಿಲ್ಲ ಮ್ಯಾನೇಜ್ ಮಾಡ್ತಿದೀವಿ ಅನ್ನೋ ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರ
ಮಾಧುಸ್ವಾಮಿ ( maadhu swamy ) ಹೇಳಿದ್ದು ತಪ್ಪು. ಅವರು ಯಾಕೆ ಹಾಗೆ ಹೇಳಿದ್ರೋ ಗೊತ್ತಿಲ್ಲ. ಅವರು ಹಾಗೆ ಯಾವ ಸಂದರ್ಭದಲ್ಲಿ ಹೇಳಿದ್ರೋ ಗೊತ್ತಿಲ್ಲ. ಅವರ ಜತೆ ನಾನು ವೈಯಕ್ತಿಕವಾಗಿ ಮಾತಾಡ್ತೀನಿ. ಅವರ ಹೇಳಿಕೆಯನ್ನು ನಾನು ಖಂಡಿಸ್ತೀನಿ ಎಂದು ಹೇಳಿದ್ರು.
ಜಾಹೀರಾತಿನಲ್ಲಿ ನೆಹರೂ ಭಾವಚಿತ್ರ ಮಿಸ್ಸಿಂಗ್ ವಿಚಾರ
ದೇಶ ವಿಭಜನೆ ಮಾಡಿದ್ದು ನೆಹರು. ಡಿಕೆಶಿ, ಸಿದ್ದರಾಮಯ್ಯ ಗೆ ಸರ್ದಾರ್ ಪಟೇಲ್, ಭಗತ್ ಸಿಂಗ್ ಬೇಕಿಲ್ಲ. ದೇಶ ತುಂಡು ಮಾಡಿದವ್ರು ಅವರಿಗೆ ಬೇಕು. ಹಿಂದಿನ ಕಾಂಗ್ರೆಸ್ ನಿಂದ ಸ್ವಾತಂತ್ರ್ಯ ಬಂತು. ಆ ಹಿಂದಿನ ಕಾಂಗ್ರೆಸ್ ಗೆ ಈಗಿನವ್ರು ಜಾತಿ ಲೇಪನ ಹಚ್ಚಿದ್ದಾರೆ. ಕುರುಬರಿಗೆ, ಒಕ್ಕಲಿಗರಿಗೆ ಜಾತಿ ಲೇಪನ ಹಚ್ಚಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ರು.
ಇದನ್ನೂ ಓದಿ : – ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು- ಪೊಲೀಸರಿಗೂ ಚಾಕು ಇರಿಯಲು ಮುಂದಾದ ಕಿಡಿಗೇಡಿ