ಪ್ರತ್ಯೇಕ ಉತ್ತರ ಕರ್ನಾಟಕ (Uttar karnataka) ರಾಜ್ಯ ಆದರೆ ವಿಜಯನಗರ (Vijayanagara) ಜಿಲ್ಲೆ ರಾಜಧಾನಿಯಾಗುವ ಸಾಧ್ಯತೆ ಇದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ (Anand singh) ಅಚ್ಚರಿಯ ಹೇಳಿಕೆ ನೀಡಿದ್ದಾರೆ. ವಿಜಯನಗರ ಹೊರವಲಯದ ಭಟ್ರಳ್ಳಿ ಆಂಜನೇಯ ದೇಗುಲ (Anjaneya temple) ದ ಬಳಿ ಗುರುವಾರ ಬಿಜೆಪಿ ಕಚೇರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲಾ ಕೇಂದ್ರದಲ್ಲಿ ಅರ್ಧ ಎಕರೆ ಪ್ರದೇಶದಲ್ಲಿ ಜಿಲ್ಲಾ ಕಚೇರಿ ಕಾಮಗಾರಿ ಆರಂಭವಾಗಿದೆ.
ವಿಜಯನಗರ ಸಾಮ್ರಾಜ್ಯ ನೆಲದ ಗುಣವೇ ವಿಶೇಷವಾಗಿದೆ. ಆದ್ದರಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ನೂತನ ವಿಜಯನಗರ ಜಿಲ್ಲೆ ರಾಜಧಾನಿಯಾಗುವ ಸಾಧ್ಯತೆಯಿದೆ ಎಂದು ಹೇಳಿದರು. ವಿಜಯನಗರವನ್ನು ಕರ್ನಾಟಕದ 31ನೇ ಜಿಲ್ಲೆಯಾಗಿಸಿದ ಕೀರ್ತಿ ಸಚಿವ ಆನಂದ್ ಸಿಂಗ್ಗೆ ಸಲ್ಲುತ್ತದೆ. ಈ ಹಿನ್ನೆಲೆ ಅವರು ನೀಡಿರುವ ಹೇಳಿಕೆ ಮಹತ್ವ ಪಡೆದಿದೆ.
ಇದನ್ನು ಓದಿ : – ಮಂಗಳೂರಿನಲ್ಲಿ ಕುಕ್ಕರ್ ಬ್ಲ್ಯಾಸ್ಟ್ ಮೂಲಕ ಬಿಜೆಪಿ ವೋಟರ್ ಲಿಸ್ಟ್ ಹಗರಣವನ್ನು ಡೈವರ್ಟ್ ಮಾಡಿದೆ- ಡಿಕೆಶಿ ಗಂಭೀರ ಆರೋಪ