ಮೈಸೂರು (Mysuru) ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ಚಿರತೆ (Cheetah) ದಾಳಿಗೆ 11 ವರ್ಷದ ಬಾಲಕ ಬಲಿಯಾಗಿರುವ ಘಟನೆಗೆ ಸಂಬಂಧಿಸಿದಂತೆ ಮೃತ ಬಾಲಕನ ತಾತ ಅಪ್ಪಯ್ಯಗೌಡ ಅರಣ್ಯ ಸಂರಕ್ಷಣಧಿಕಾರಿ ಮಾಲತಿ ಪ್ರಿಯ (Malathi priya) ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇಂತಹ ಪ್ರಕರಣ ನಡೆದರೆ ನಿನ್ನನ್ನು ಕೊಲೆ ಮಾಡುತ್ತೇನೆ. ಚಿರತೆ ಓಡಾಡುತ್ತಿದೆ ಎಂದು ಎರಡು ಬಾರಿ ದೂರು ಕೊಟ್ಟಿದ್ದೇನೆ.
ದೂರು ಕೊಟ್ಟರು ಕ್ರಮ ತೆಗೆದುಕೊಂಡಿಲ್ಲ. ತಾಲೂಕಿನಲ್ಲಿ ಇಂತಹದೇ ಇನ್ನೊಂದು ಪ್ರಕರಣ ನಡೆದರೆ ನಿನ್ನನ್ನೇ ಕೊಲೆ ಮಾಡುತ್ತೇನೆ. ಇದಷ್ಟೆ ಅಲ್ಲದೆ ಸಂಸದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧವು ಅಕ್ರೋಶ ಹೊರಹಾಕಿದ್ದಾರೆ. ನಾಲ್ವರನ್ನು ಬಲಿ ಪಡೆದರೂ ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ (Somshekar) ಹಾಗೂ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಭೇಟಿ ನೀಡಿಲ್ಲ. ಇವರು ಬರಲು ಇನ್ನೆಷ್ಟು ಜನರ ಬಲಿ ಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದನ್ನು ಓದಿ :- ಸಿದ್ದರಾಮಯ್ಯನ ಟೀಕೆ ಟಿಪ್ಪಣಿ ಗಳಿಗೆ ಕಿವಿಗೊಡುವ ಅಗತ್ಯವಿಲ್ಲ – ಸಿ.ಸಿ ಪಾಟೀಲ್