ರಾಜ್ಯಸಭೆ ಚುನಾವಣೆಯಲ್ಲಿ(Rajyasabha election) ಬಿಜೆಪಿ (Bjp), ಕಾಂಗ್ರೆಸ್(Congress) ಹಾಗೂ ಜೆಡಿಎಸ್(Jds) ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ನಡುವೆ ಜೆಡಿಎಸ್ ನಾಯಕರು ಇಂದು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಅವರನ್ನು ಭೇಟಿ ಮಾಡಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ವಿಧಾನಪರಿಷತ್ ಸದಸ್ಯರಾದ ಟಿ.ಎ ಶರವಣ(Sharavana) ಹಾಗೂ ಬಿಎಂ ಫಾರೂಕ್ ಕೆಲ (Farook kela) ಹೊತ್ತು ಮಾತುಕತೆ ನಡೆಸಿದರು. ರಾಜ್ಯಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.ಸಿದ್ದರಾಮಯ್ಯ ಭೇಟಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶರವಣ ನಮ್ಮ ಪಕ್ಷದ ವರಿಷ್ಠರಾದ ದೇವೇಗೌಡರು(Devegowda) ಮತ್ತು ಕುಮಾರಸ್ವಾಮಿ(kumaraswamy) ಆದೇಶದ ಮೇರೆಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಬಂದಿದ್ದೇವೆ. ದೇವೇಗೌಡರ ಸೂಚನೆ ಮೇರೆಗೆ ನಾವು ಬಂದಿದ್ದೇವೆ. ಇದನ್ನೂ ಓದಿ : – ಕಾಂಗ್ರೆಸ್ ನಾಯಕ, ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ಗೆ ಗುಡ್ ಬೈ
ಕುಮಾರಸ್ವಾಮಿ ಅವರಿಗೂ ವಿಚಾರ ತಿಳಿಸುತ್ತೇವೆ. ನಾವೆಲ್ಲಾ ಸೆಕ್ಯುಲರ್ ಸಿದ್ದಾಂತದಲ್ಲಿ ನಂಬಿಕೆ ಇಟ್ಟವರು. ಇವತ್ತಿನ ಪರಿಸ್ಥಿತಿಯಲ್ಲಿ ಇಬ್ಬರೂ ಜೊತೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ನಾವಿಬ್ಬರೂ ಒಂದಾಗದೇ ಇದ್ದರೆ ಬಿಜೆಪಿ ತುಂಬಾ ಸುಲಭವಾಗಿ ಮೂರನೇ ಅಭ್ಯರ್ಥಿ ಯನ್ನು ಗೆಲ್ಲಿಸಿಕೊಂಡು ಬರ್ತಾರೆ. ಹಾಗಾಗಬಾರದು ಅಂತಾ ಮಾತಾಡಿದ್ದೇವೆ. ಶುಕ್ರವಾರ ನಾಮ ಪತ್ರ ವಾಪಸ್ ಪಡೆಯಲು ಕೊನೆ ದಿನ. ಆ ಹಿನ್ನಲೆಯಲ್ಲಿ ನಾವು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇವೆ ಎಂದು ತಿಳಿಸಿದ್ರು. ಇದನ್ನೂ ಓದಿ : – ಯಾರನ್ನಾದ್ರೂ ಗಡಿಪಾರು ಮಾಡಿ ನಾವು ಚಂದ ನೋಡಲಿಕ್ಕೆ ಆಗಲ್ಲ – ಆರಗ ಜ್ಞಾನೇಂದ್ರ