ಬಿಜೆಪಿ (BJP) ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಸಿ.ಟಿ ರವಿ (C.T RAVI) ವ್ಯಾಖ್ಯಾನ ಮಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಆರೋಪ ಮಾಡುವವರು ಅಧಾರ ಕೊಡಬೇಕು. ಆರೋಪ ಮಾಡುವವರು ಸಂವಿಧಾನಿಕ ಸಂಸ್ಥೆಗಳ ಮೇಲೆ ಭರವಸೆ ಇಟ್ಟಿರಬೇಕು.
ಆಧಾರವನ್ನ ಕೊಟ್ಟು ಆರೋಪ ಮಾಡಿದ್ರೆ ನಂಬಬಹುದು . ಜನರಲ್ ಆಗಿ ಜನ ಮಾತನಾಡುತ್ತಾರೆ. ಕಾಲಕೆಟ್ಟು ಹೋಗಿದೆ. ಹಿಂದೆಲ್ಲ ಹೀಗಿರಲಿಲ್ಲ..ಈಗ ಎಲ್ಲರೂ ಕಳ್ಳರು . ಸಾರ್ವತ್ರಿಕವಾಗಿ ಎಲ್ಲರೂ ಕಳ್ಳರು ಎಂದು ಹೇಳಲಾಗುವುದಿಲ್ಲ. ಈ ವ್ಯವಸ್ಥೆಯಲ್ಲಿ ಎಲ್ಲರೂ ಕಳ್ಳರಲ್ಲ. ಹಾಗಂತ ಎಲ್ಲರೂ ಒಳ್ಳೆಯವರು ಅಲ್ಲ. ಆಧಾರ ಕೊಟ್ಟು ಆರೋಪ ಮಾಡಿದ್ರೆ ನಂಬಬಹುದು ಉದ್ದೇಶಪೂರ್ವಕವಾಗಿ ಮಾಡಿದ್ರೆ ನಂಬಲು ಕಷ್ಟ ಎಂದು ಹೇಳಿದ್ರು.
ಇದನ್ನು ಓದಿ :- ಕರ್ನಾಟಕದ ಸೇನಾಧಿಕಾರಿ ಕ್ಯಾ. ಟಿ.ಆರ್.ರಾಕೇಶ್ ಗೆ ಶೌರ್ಯ ಚಕ್ರ ಪ್ರಶಸ್ತಿ