ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Imran Khan) ಮತ್ತೊಮ್ಮೆ ಭಾರತವನ್ನು ಹೊಗಳಿದ್ದಾರೆ.ಭಾರತದ ವಿದೇಶಾಂಗ ನೀತಿಗಳು ಹೇಗಿವೆ ಎಂದರೆ ಯಾವುದೇ ದೇಶಗಳು ಭಾರತದ ವಿರುದ್ಧ ಮಾತನಾಡಲು ಧೈರ್ಯ ಮಾಡಲ್ಲ.
ಭಾರತದ ವಿರುದ್ಧ ಪಿತೂರಿ ನಡೆಸುವ ಧೈರ್ಯ ಯಾವ ಮಹಾಶಕ್ತಿಗೂ ಇಲ್ಲ. ಇದೇ ರೀತಿ ನಮ್ಮ ವಿದೇಶಾಂಗ ನೀತಿ ಮುಕ್ತವಾಗಿರಬೇಕು ಎಂದು ಹೇಳಿದ್ದಾರೆ. ತಮ್ಮ ವಿರುದ್ಧದ ಅವಿಶ್ವಾಸಮತಯಾಚನೆಗೆ ಇಮ್ರಾನ್ ಖಾನ್ ಮತ್ತೊಮ್ಮೆ ಅಮೆರಿಕದ ಹೆಸರನ್ನು ತೆಗೆದುಕೊಂಡು ಪಿತೂರಿ ನಡೆಸಿದೆ ಎಂದು ಆರೋಪಿಸಿದ್ದಾರೆ. ರಹಸ್ಯ ಸಂಹಿತೆಯ ಕಾರಣ, ಪಿತೂರಿ ಪತ್ರವನ್ನು ಸಾರ್ವಜನಿಕರ ಮುಂದೆ ಇಡಲು ಸಾಧ್ಯವಿಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಇದನ್ನು ಓದಿ : –ಚೀನಾಗೆ ಎಚ್ಚರಿಕೆ ನೀಡಿದ ದೊಡ್ಡಣ್ಣ – ಉಕ್ರೇನ್ ಗೆ 500 ಜನರೇಟರ್ ನೀಡಿದ ಯುಕೆ
ಇಮ್ರಾನ್ ಖಾನ್ ರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ. ನಿಮ್ಮ ಪ್ರಧಾನಿ ಬದುಕಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಯಾರೋ 22 ಕೋಟಿ ಜನರಿಗೆ ಆದೇಶ ನೀಡುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಅಮೆರಿಕದ ರಾಜತಾಂತ್ರಿಕರು ನಮ್ಮ ಜನರನ್ನು ಭೇಟಿಯಾಗುತ್ತಿದ್ದರು ಎಂದು ಇಮ್ರಾನ್ ಖಾನ್ ಗಂಭೀರ ಆರೋಪ ಮಾಡಿದ್ದಾರೆ. ನನ್ನ ರಷ್ಯಾ ಪ್ರವಾಸವೇ ಇದಕ್ಕೆ ಕಾರಣ ಎಂದು ಅಮೆರಿಕಕ್ಕೆ ತಿರುಗೇಟು ನೀಡಿದ್ದಾರೆ.
ಇದನ್ನು ಓದಿ : – ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ಗೆ 31 ವರ್ಷ ಜೈಲು ಶಿಕ್ಷೆ..!