ಕಾಂಗ್ರೆಸ್ (Congress) ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ (G.Parameshwar) ಪ್ರತಿಕ್ರಿಯೆ ನೀಡಿದ್ದಾರೆ. ನಾನು 8 ವರ್ಷ ಕೆಪಿಸಿಸಿ ಅಧ್ಯಕ್ಷ ಆಗಿದ್ದೆ. 224 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳಿದ್ದಾರೆ. ಅದರಲ್ಲಿ ಯಾರು ಅಂತ ತೀರ್ಮಾನ ಆಗ್ಬೇಕು ಎಂದು ಹೇಳಿದ್ದಾರೆ. ತುಮಕೂರು (Tumakuru) ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉದ್ಯಮಿ ಅಟಿಕಾ ಬಾಬು ಸ್ಪ(Attica babu) ರ್ಧೆ ವಿಚಾರ ಕುರಿತಂತೆ ಈ ಬಗ್ಗೆ ನನಗೆ ಗೊತ್ತಿಲ್ಲ.
ನಾವು ಯಾರ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಮಾತಾನಾಡಬಾರದು. ಕೆಲ ದಿನಗಳ ಹಿಂದೆ ನನ್ನ ಮನೆಗೆ ಅಟಿಕಾ ಬಾಬು ಬಂದಿದ್ರು. ನಾನು ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡ್ತಿನಿ ಅಂದ್ರು. ನೋಡಪ್ಪ ನಮ್ಮ ಹೈಕಮಾಂಡ್ ಇದೆ, ತೀರ್ಮಾನ ಮಾಡುತ್ತೆ ಅಂತ ಹೇಳಿದ್ದೀನಿ ಎಂದು ಸ್ಪಷ್ಟಪಡಿಸಿದ್ರು. ಇಲ್ಲಿ ಎಲ್ಲರನ್ನೂ ಒಟ್ಟಿಗೆ ತಗೊಂಡು ಹೋಗುವ ಪಾರ್ಟಿ ಕಾಂಗ್ರೆಸ್. ಪಕ್ಷದಲ್ಲಿ ದುಡಿದವರಿಗೆ ಮಾನ್ಯತೆ ಇದೆ. ಇನ್ನು ಕೆಲವರು ಪ್ರೀತಿ ವಿಶ್ವಾಸ ಗೆದ್ದಿರ್ತಾರೆ. ಅಂತವರು ನಮ್ಮ ಪಕ್ಷಕ್ಕೆ ಬರೋದೆ ಒಂದು ತರ ನಮಗೆ ಹೆಮ್ಮೆ. ಹೀಗಾಗಿ ಅಂತವರಿಗೆ ಪಕ್ಷದಿಂದ ಟಿಕೇಟ್ ಕೊಡ್ತೀವಿ ಎಂದು ಹೇಳಿದ್ರು.
ಈಗಾಗಲೇ ನಮ್ಮ ಪಕ್ಷದಿಂದ ಒಂದು ಸ್ಯಾಂಪಲ್ ಸರ್ವೆ ನಡೆದಿದೆ.ಆ ಸರ್ವೆಯಲ್ಲಿ ಬಂದ ಫಲಿತಾಂಶದಿಂದ ಕೆಲ ಬದಲಾವಣೆ ನಿರ್ಧಾರ ಮಾಡಲು ತೀರ್ಮಾನ ಮಾಡಿದ್ದೇವೆ. ನಾವು ಈ ಬಾರಿ ಗೆಲ್ಲಲೇ ಬೇಕು ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಜೆಡಿಎಸ್ ಕಾದುಕುಳಿತಿದೆ ಎಂಬ ವಿಚಾರ ಕುರಿತಂತೆ ಪ್ರತಿಕ್ರಿಯಿಸಿ ಜೆಡಿಎಸ್ (JDS) ನವರು 224 ಕ್ಷೇತ್ರಕ್ಕೆ ಅಭ್ಯರ್ಥಿ ಹಾಕ್ತಾರೆ ಅನ್ನೋದು ನನಗೆ ಗೊತ್ತಿಲ್ಲ. ಬಿಜೆಪಿಯವರು ಕೆಲ ಅತೃಪ್ತರಿಗೆ ಟಿಕೆಟ್ ಕೊಟ್ಟರೆ ಕೊಡ್ಬಹುದು. ನಮ್ಮಲ್ಲಿ ಜಾಸ್ತಿ ಹೊಸ ಮುಖಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಈಗಾಗಲೇ 110 ಮಹಿಳೆಯರು ಅರ್ಜಿ ಹಾಕಿದ್ದಾರೆ. ಕೆಲ ಮಾನದಂಡಗಳ ಮೇಲೆ ಟಿಕೆಟ್ ಹಂಚಿಕೆ ಆಗುತ್ತೆ ಎಂದು ತಿಳಿಸಿದ್ರು. ಇದನ್ನುಓದಿ :- ಕಾಂಗ್ರೆಸ್ ನ ಬಸ್ ಯಾತ್ರೆ ಮಧ್ಯದಲ್ಲೇ ಪಂಚರ್ ಆಗುತ್ತೆ – ಯಡಿಯೂರಪ್ಪ
ನನ್ನನ್ನ ಯಾರು ಸೈಡ್ ಲೈನ್ ಮಾಡಿಲ್ಲ..ಕಾಂಗ್ರೆಸ್ ಪಕ್ಷದಲ್ಲಿ ಪರಮೇಶ್ವರ್ ಅವರನ್ನ ಸೈಡ್ ಲೈನ್ ಮಾಡಿರೋ ವಿಚಾರ ಕುರಿತಂತೆ ಪ್ರತಿಕ್ರಿಯಿಸಿ ನನ್ನನ್ನ ಯಾರು ಸೈಡ್ ಲೈನ್ ಮಾಡಿಲ್ಲ. ಹಾಗೆ ಮಾಡಿದ್ರೆ, ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಡ್ತಿದ್ರಾ..? ಎಂದು ಪ್ರಶ್ನಿಸಿದ್ದಾರೆ. ಪ್ರಜಾ ಧ್ವನಿ ಯಾತ್ರೆ (Prajadhwani yatre) ಗೆ ಎರಡು ಟೀಂ ಮಾಡಿದ್ದಾರೆ. ಒಂದು ಕಡೆ ಸಿದ್ದರಾಮಯ್ಯ, ಮತ್ತೊಂದು ಡಿಕೆಶಿ ಹೋಗ್ತಾರೆ. ಮೈಸೂರು ಭಾಗಕ್ಕೆ ಡಿಕೆಶಿ ಹೋಗ್ತಾರೆ. ನಾನು ಆ ಕಡೆನೇ ಹೋಗ್ತಿನಿ. ನಾನು ನಿನ್ನೆ ಕೋಲಾರಕ್ಕೆ ಹೋಗಿದ್ದೆ ಎಂದು ತಿಳಿಸಿದ್ರು.
ಇದನ್ನುಓದಿ :- ಇವತ್ತಿಂದ ಈಕೆ ನನ್ನ ಅರ್ಧಾಂಗಿ –ಮಹಿಳೆಗೆ ಮದುವೆ ಅಭಯಕೊಟ್ಟ ದೈವನರ್ತಕ..!