ಸಕ್ಕರೆ ನಾಡು ಮಂಡ್ಯ ( MANDYA) ದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಯಲ್ಲಿ ಶತಾಯಗತಾಯ 4-5 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಬೇಕೆಂದು ಮಾಸ್ಟರ್ ಪ್ಲಾನ್ ಮಾಡುತ್ತಾ ಇದೆ. ಹೀಗಾಗಿ ಸಚಿವ ಗೋಪಾಲಯ್ಯಗೆ ಕೊಕ್ ನೀಡಿ ಆರ್.ಅಶೋಕ್ ( R.ASHOK ) ಹೆಗಲಿಗೆ ಬಿಜೆಪಿ ನಾಯಕರು ಉಸ್ತುವಾರಿ ಜವಾಬ್ದಾರಿ ನೀಡಿದ್ದಾರೆ. ಇದೀಗ ಬಿಜೆಪಿ (BJP) ನಾಯಕರ ಈ ನಿರ್ಧಾರ ಮಂಡ್ಯ ಬಿಜೆಪಿಯಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ.
ಮಂಡ್ಯದಲ್ಲಿ ಗೋ ಬ್ಯಾಕ್ ಅಶೋಕ್ ಎಂದು ಬಿಜೆಪಿ ಕಾರ್ಯಕರ್ತರು ಗೊಡೆಬರಹ ಅಂಟಿಸುತ್ತಿದ್ದಾರೆ. ಕಳೆದ ಕೆಆರ್ ಪೇಟೆ ಉಪಚುನಾವಣೆಯಲ್ಲಿ ನಾರಾಯಣಗೌಡ ಗೆಲುವಿನ ಮೂಲಕ ಬಿಜೆಪಿ ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಅಕೌಂಟ್ ಓಪನ್ ಮಾಡಿದೆ. ಇದೀಗ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕನಿಷ್ಠ ನಾಲ್ಕೈದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಬಿಜೆಪಿ ನಾಯಕರು ಸ್ಟಾಟರ್ಜಿ ಮಾಡ್ತಾ ಇದ್ದಾರೆ.ಇದನ್ನು ಓದಿ :- ಮೋದಿ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ – ಬಿ.ಕೆ ಹರಿಪ್ರಸಾದ್
ಆ ಸ್ಟಾಟರ್ಜಿಯ ಒಂದು ಭಾಗ ಎಂಬಂತೆ ಸಚಿವ ಗೋಪಾಲಯ್ಯ ಅವರಿಗೆ ಕೊಕ್ ನೀಡಿ ಆರ್.ಅಶೋಕ್ ಅವರಿಗೆ ಮಂಡ್ಯ ಉಸ್ತುವಾರಿಯನ್ನು ನೀಡಲಾಗಿದೆ. ಅಶೋಕ್ ಅವರಿಗೆ ಉಸ್ತುವಾರಿ ಜವಾಬ್ದಾರಿ ನೀಡಿರುವ ಕಾರಣ ಮಂಡ್ಯ ಬಿಜೆಪಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಅಶೋಕ್ ಅವರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ, ಅವರಿಂದ ಮಂಡ್ಯದಲ್ಲಿ ಬಿಜೆಪಿ ಕಟ್ಟಲು ಸಾಧ್ಯವಿಲ್ಲ. ಹೀಗಾಗಿ ಫೇಸ್ ಬುಕ್ ಹಾಗೂ ರಸ್ತೆಯ ಗೋಡೆಯ ಮೇಲೆ ಅಶೋಕ್ ಗೋ ಬ್ಯಾಕ್, ಬಾಯ್ಕಟ್ ಎಂಬ ಪೋಸ್ಟರ್ ಗಳನ್ನು ಅಂಟಿಸಲಾಗಿದೆ.
ಇದನ್ನು ಓದಿ :- ಆಧಾರ ಕೊಟ್ಟು ಆರೋಪ ಮಾಡಿದ್ರೆ ನಂಬಬಹುದು – ಸಿ.ಟಿ ರವಿ