75ನೇ ಸ್ವಾತಂತ್ರ್ಯ ದಿನಾಚರಣೆಯನ್ನು (Azadi Ka Amrit Mahotsav) ದೇಶಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಹರ್ ಘರ್ ತಿರಂಗಾ (Har Ghar Tiranga) ಎಂಬ ಅಭಿಯಾನದಡಿಯಲ್ಲಿ ಪ್ರತಿ ಮನೆಯ ಮೇಲೂ ರಾಷ್ಟ್ರಧ್ವಜ ಹಾರಿಸುವಂತೆ ಪ್ರಧಾನಿ ಮೋದಿ (Prime Minister Modi) ಕರೆ ನೀಡಿದ್ದಾರೆ.
ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೇಂದ್ರ ಸಂಸ್ಕೃತಿ ಇಲಾಖೆಯು ವಿಸ್ತೃತ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಹಿನ್ನಲೆಯಲ್ಲಿ ಇತ್ತೀಚೆಗಷ್ಟೇ ಇದಕ್ಕೆ ಸಂಬಂಧಿಸಿದ ಹಾಡೊಂದು ಬಿಡುಗಡೆಯಾಗಿದೆ. ಹರ್ ಘರ್ ತಿರಂಗಾ ಎಂಬ ಶೀರ್ಷಿಕೆಯ ಈ ಹಾಡನ್ನು ಬಿಡುಗಡೆ ಮಾಡಲಾಗಿದ್ದು, ಈ ಹಾಡಿನಲ್ಲಿ ಪ್ರಧಾನಿ ಮೋದಿ ಜೊತೆಗೆ ಸಿನಿಮಾ ನಟರಾದ ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್, ಪ್ರಭಾಸ್, ಅಜಯ್ ದೇವಗನ್ (AJAY DEVAGAN), ಕೀರ್ತಿ ಸುರೇಶ್, ಅನುಷ್ಕಾ ಶರ್ಮಾ, ಕ್ರೀಡಾಪಟುಗಳಾದ ಕಪಿಲ್ ದೇವ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (K.L RAHUL) ಹಾರ್ದಿಕ್ ಪಾಂಡ್ಯ, ಪಿವಿ ಸಿಂಧು (P.V. SINDHU), ಇನ್ನೂ ಅನೇಕರು ಕಾಣಿಸಿಕೊಂಡಿದ್ದಾರೆ. ಈ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಭಾರತದ ಎಲ್ಲಾ ಭಾಗಗಳನ್ನು ಒಂದುಗೂಡಿಸಲು ಈ ಹಾಡನ್ನು ರಚಿಸಲಾಗಿದೆ. ಇದನ್ನು ಓದಿ : – ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿ- ಮಿಲಿಟರಿ ಕಸರತ್ತು ಆರಂಭಿಸಿದ ಚೀನಾ, ಆಸಿಯಾನ್ ಎಚ್ಚರಿಕೆ
ಹರ್ ಘರ್ ತಿರಂಗಾ ಹಾಡಿನಲ್ಲಿ ಕನ್ನಡ ಕಲರವ
ಕೇಂದ್ರ ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿರುವ ಈ ಹಾಡಿನಲ್ಲಿ ಕೆಲವು ಖ್ಯಾತ ಕ್ರಿಕೆಟಿಗರು ತಮ್ಮ ಮಾತೃಭಾಷೆಯಲ್ಲಿ ಬರುವ ಸಾಲುಗಳಿಗೆ ಧನಿಗೂಡಿಸಿದ್ದಾರೆ. ಅವರಲ್ಲಿ ಕನ್ನಡಿಗ ಕೆಎಲ್ ರಾಹುಲ್ ಕೂಡ ಸೇರಿದ್ದು, ಕನ್ನಡದಲ್ಲಿ ಬರುವ ಮನೆ ಮನೆಗೂ ತಿರಂಗ ಎಂಬ ಸಾಲುಗಳಿಗೆ ಧನಿಗೂಡಿಸಿ ಜೀವತುಂಬಿದ್ದಾರೆ.
ಇದನ್ನು ಓದಿ : – ಬಿಜೆಪಿ ಭದ್ರಕೋಟೆ, ಇಂದಿರಾಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ ಚಿಕ್ಕಮಗಳೂರಿನಿಂದ ಸ್ಪರ್ಧಿಸಲು ಸಿದ್ದರಾಮಯ್ಯಗೆ ಒತ್ತಾಯ