ನಾಮಪತ್ರ ಸಲ್ಲಿಕೆ ಮುನ್ನ ರಾಯರ ಆಶೀರ್ವಾದ ಪಡೆದಿದ್ದೇನೆ. ಮಲ್ಲೇಶ್ವರದಲ್ಲಿರುವ ಈ ದೇಗುಲಕ್ಕೂ ನನಗೂ 40 ವರ್ಷಗಳ ಸಂಬಂಧ ಇದೆ ಎಂದು ಬಿಜೆಪಿ ರಾಜ್ಯಸಭಾ ಅಭ್ಯರ್ಥಿ ನಟ ಜಗ್ಗೇಶ್ ಜಗ್ಗೇಶ್ ( Jaggesh) ಹೇಳಿದ್ರು.
ರಾಜ್ಯಸಭೆಯಲ್ಲೂ ರಾಜ್ಯದ ಜನರ ಮೆಚ್ಚುವ ರೀತಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ರು. ಮದುವೆಗೂ ಮುಂಚಿನಿಂದಲೂ ರಾಯರನ್ನ ನಂಬಿದ್ದೇನೆ. ನಾನು ರಾಯರ ಬಳಿ ಏನನ್ನೂ ಬೇಡಲ್ಲ. ಎಲ್ಲವನ್ನೂ ಶ್ರೀ ರಾಘವೇಂದ್ರ ಶ್ರೀಗಳೇ ನನಗೆ ದಯಪಾಲಿಸಿದ್ದಾರೆ. ಇದನ್ನೂ ಓದಿ : – RS ELECTION – ರಾಜ್ಯಸಭೆ ಚುನಾವಣೆ – ನಿರ್ಮಲಾ ಸೀತಾರಾಮನ್ , ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಕೆ
ನನ್ನ ಬದುಕಿನಲ್ಲಿ ಏನೇ ನಡೀಬೇಕಿದ್ರು ಇದೇ ಜಾಗಕ್ಕೆ ನಾನು ಬರ್ತೇನೆ. ನಾನು ನನ್ನ ಹೆಂಡ್ತಿ ಪ್ರೀತಿ ಮಾಡಿ ಮದುವೆ ಆಗೋಕು ಮುನ್ನ ಇದೇ ಜಾಗಕ್ಕೆ ಬಂದಿದ್ವಿ. ನನ್ನ ಚಿಕ್ಕ ಮಗ ಹುಟ್ಟಿದಾಗಲೂ ನಮಗೆ ತಿನ್ನೋಕೆ ಹಿಟ್ಟು ಇರಲಿಲ್ಲ . ಎಲ್ಲದ್ದಕ್ಕಿಂತ ಶ್ರೇಷ್ಠವಾದದ್ದು ಭಕ್ತಿ. ಇದು ನನಗೆ ಮೊದಲ ಸ್ವರ್ಗ. ನಾನು ಮಾಡ್ತಿರೋ ಕೆಲಸವನ್ನು ಅವರಿಗೆ ಸಮರ್ಪಣೆ ಮಾಡಿದ್ದೇನೆ.
ಎಷ್ಟು ಸಾಧ್ಯವೋ ನಾನು ಮರ್ಯಾದಸ್ಥನ ರೀತಿ ಬದುಕಿದ್ದೇನೆ. ಭಗವಂತ ಕೊಟ್ಟ ಪ್ರಸಾದ ಸ್ವೀಕಾರ ಮಾಡಿ ಬದುಕಿದ್ದೇನೆ. ನಿಮ್ಮೆಲ್ಲರ ಪ್ರೀತಿ, ರಾಯರ ಆಶೀರ್ವಾದಿಂದ ಯಾವುದೋ ಒಂದು ಸ್ಥಾನ ನನಗೆ ಸಿಕ್ಕಿದೆ. ನಿಮ್ಮ ಮನಸ್ಸಿಗೆ ಚ್ಯುತಿ, ನೋವು ಆಗದ ತರ ನಡೆದುಕೊಳ್ತೇನೆ ಎಂದು ಹೇಳಿದ್ರು.
ಇದನ್ನೂ ಓದಿ : – Rajya Sabha Election- ಕಾಂಗ್ರೆಸ್ ಅಭ್ಯರ್ಥಿಯಾಗಿ ಜೈ ರಾಂ ರಮೇಶ್ ,ಮನ್ಸೂರ್ ಆಲಿ ಖಾನ್ ನಾಮಪತ್ರ ಸಲ್ಲಿಕೆ