ಆರ್ಥಿಕ, ರಾಜಕೀಯ ಸಂಕಷ್ಟದ ಬಾಣಲೆಯಲ್ಲಿ ಬೇಯುತ್ತಿರುವ ಪಾಕಿಸ್ತಾನ(PAKISTAN) ದಲ್ಲಿ ಇದೀಗ ಗಂಭೀರ ಕಾನೂನು ಸುವ್ಯಸಸ್ಥೆಯ ಸಮಸ್ಯೆ ಎದುರಾಗಿದೆ. ಅತ್ಯಾಚಾರ (RAPE) ಹಾಗೂ ಹೆಣ್ಮಕ್ಕಳ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ತುರ್ತು ಪರಿಸ್ಥಿತಿ (EMERGENCY) ಹೇರಲಾಗಿದೆ.
ಪಂಜಾಬ್ (PUNJAB) ಪ್ರಾಂತ್ಯದಲ್ಲಿ ಸರಣಿ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತುರ್ತು ಪರಿಸ್ಥಿತಿ ಹೇರಿ ಅಲ್ಲಿನ ಸರ್ಕಾರ ಆದೇಶಿಸಿದೆ. ಅನಿವಾರ್ಯವಾಗಿ ತುರ್ತು ಪರಿಸ್ಥಿತಿ ಘೋಷಣೆ ಮಾಡಬೇಕಾಗಿ ಬಂದಿದೆ’ ಎಂದು ಪಂಜಾಬ್ ಪ್ರಾಂತ್ಯದ ಗೃಹ ಸಚಿವ ಆಟ್ಟಾ ತರಾರ್ ಹೇಳಿದ್ದಾರೆ. ಪಂಜಾಬ್ ಪ್ರಾಂತ್ಯದಲ್ಲಿ ದಿನನಿತ್ಯ ಐದರಿಂದ ಆರು ಲೈಂಗಿಕ ಕಿರುಕುಳದ ಪ್ರಕರಣಗಳು ದಾಖಲಾಗುತ್ತಿದೆ. ಈ ಪ್ರಕರಣಗಳನ್ನು ನಿಯಂತ್ರಣ ತರುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಅವುಗಳ ನಿಯಂತ್ರಣಕ್ಕೆ ತುರ್ತು ಪರಿಸ್ಥಿತಿ ಹೇರುವ ಅನಿವಾರ್ಯತೆಗೆ ಸಿಲುಕಿದೆ ಎಂದು ಪಾಕಿಸ್ತಾನದ ಪ್ರತ್ರಿಕೆ ವರದಿ ಮಾಡಿದೆ.
ಇದನ್ನೂ ಓದಿ : – ಅಗ್ನಿಪಥ್ ಯೋಜನೆ ಯುವಕರಿಗೆ ಮಾಡಿದ ಅವಮಾನ – ಅಖಿಲೇಶ್ ಯಾದವ್