ಬಿಜೆಪಿ ( BJP ) ಯಲ್ಲಿದ್ದರೂ ಅಕ್ಷರಶಃ ವಿರೋಧ ಪಕ್ಷದ ನಾಯಕನಾಗಿರೋ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ( H. VISHWANATH ) ಸದ್ದಿಲ್ಲದೆ ಮರಳಿ ಕಾಂಗ್ರೆಸ್ ( CONGRESS ) ಗೂಡಿಗೆ ಸೇರುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ.
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ( MALLIKARJUN KHARGE ) ಅವರನ್ನು ವಿಶ್ವನಾಥ್ ಭೇಟಿಯಾಗಿದ್ದರು. ಈಗ ವಿಪಕ್ಷ ನಾಯಕ ಸಿದ್ದರಾಮ್ಯರನ್ನ ಅವರ ಸರ್ಕಾರಿ ನಿವಾಸದಲ್ಲಿ ವಿಶ್ವನಾಥ್ ಭೇಟಿಯಾಗಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ : – ಕ್ರಿಶ್ಚಿಯನ್ ಸಮುದಾಯದ ಮತ ಸೆಳೆಯಲು ಮುಂದಾದ್ರಾ ರೆಡ್ಡಿ..?
ಇದೇ ವೇಳೆ ಮಾತನಾಡಿದ ಹೆಚ್ ವಿಶ್ವನಾಥ್ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಲು ಬಂದಿದ್ದೆ. ಸಿದ್ದರಾಮಯ್ಯ ನಾನು ಬಹಳ ವರ್ಷ ಒಟ್ಟಿಗೆ ರಾಜಕಾರಣದಲ್ಲಿ ಇದ್ದವರು. ಬೇಗ ಚೇತರಿಸಿಕೊಳ್ಳಿ ಅಂತ ಹಾರೈಸಿ ಹೊರಟಿದ್ದೇನೆ. ದೆಹಲಿಗೆ ಹೋಗಿದ್ದಾಗ ಖರ್ಗೆಯವರು ಹೆಡ್ ಕ್ವಾಟ್ರಸ್ ನಲ್ಲಿದ್ದಾರೆ ಅಂತ ಗೊತ್ತಾಯ್ತು. ಅಭಿಮಾನದಿಂದ ನಾನು ಖರ್ಗೆಯವರನ್ನು ಅಭಿನಂದನೆ ಹೇಳಲು ಭೇಟಿಯಾಗಿದ್ದೆ. ಸಿದ್ದರಾಮಯ್ಯ ( SIDDARAMAIAH ) ನಾವು ಕಾಂಗ್ರೆಸ್ ನಲ್ಲಿ ಒಟ್ಟಿಗೆ ಕೆಲಸ ಮಾಡಿದವ್ರು. ಸಿದ್ದರಾಮಯ್ಯ ನಮ್ಮ ಮೈಸೂರು ಭಾಗದ ನಾಯಕರು. ಆರೋಗ್ಯ ಸರಿ ಇಲ್ಲದಿದ್ದಾಗ ಯಾರೇ ಆಗಲಿ ಭೇಟಿ ಮಾಡಿ ವಿಚಾರಿಸೋದು ರಾಜಕೀಯ ಸಹಿಷ್ಣುತೆ ಎಂದು ಸಮರ್ಥಿಸಿಕೊಂಡ್ರು.
ಕಾಂಗ್ರೆಸ್ ಸೇರ್ಪಡೆಯಾಗ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್ ರಾಜಕೀಯ ನಿಂತ ನೀರಲ್ಲ. ಆದರೆ ರಾಜಕೀಯದ ಬಗ್ಗೆ ಚರ್ಚೆ ಮಾಡಿಲ್ಲ. ನಿನ್ನೆ ಖರ್ಗೆಯವರನ್ನೂ ನಾನು ಭೇಟಿ ಮಾಡಿದ್ದೆ. ನಾನು ಕಾಂಗ್ರೆಸ್ ಪಕ್ಷದಲ್ಲೇ ಬೆಳೆದು ಬಂದವನು. ಅವರ ಜೊತೆ ಉತ್ತಮ ಒಡನಾಟವಿದೆ ಎಂದು ಹೇಳಿದ್ರು.
ಇದನ್ನೂ ಓದಿ : – ಕ್ರಿಶ್ಚಿಯನ್ ಸಮುದಾಯದ ಮತ ಸೆಳೆಯಲು ಮುಂದಾದ್ರಾ ರೆಡ್ಡಿ..?