ಮಾಧುಸ್ವಾಮಿ ( maadhuswamy ) ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ( SIDDARAMAIAH ) ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮಾಧುಸ್ವಾಮಿ ಒಬ್ಬ ಹಿರಿಯ ಸಚಿವರು. ಬೊಮ್ಮಾಯಿ ಸರ್ಕಾರದಲ್ಲಿ ಅವರು ಕಾನೂನು ಸಚಿವರು. ನಮ್ಮ ಸರ್ಕಾರದಲ್ಲಿ ಆಡಳಿತ ನಡೆಯುತ್ತಿಲ್ಲ. ಸರ್ಕಾರವನ್ನ ತಳ್ಳಿಕೊಂಡು ಹೋಗ್ತಿದ್ದೇವೆ ಅಂದಿದ್ದಾರೆ. ಸಚಿವರಾಗಿ ಮಾಧುಸ್ವಾಮಿ ಈ ಹೇಳಿಕೆ ಕೊಟ್ಟಿದ್ದಾರೆ. ಈ ಸತ್ಯ ಮುಚ್ಚಲು ಬೊಮ್ಮಾಯಿ ಮುಂದಾಗಿದ್ದಾರೆ. ಕೆಲವು ಸಚಿವರನ್ನ ಎತ್ತಿ ಕಟ್ಟಿದ್ದಾರೆ. ಮುನಿರತ್ನ ಮಾಧುಸ್ವಾಮಿ ರಾಜೀನಾಮೆ ಕೇಳಿದ್ದಾರೆ. ಸೋಮಶೇಖರ್ ನಮ್ಮಲ್ಲಿ ಅಂತದ್ದೇನಿಲ್ಲ ಅಂತಿದ್ದಾರೆ.
ಬೊಮ್ಮಾಯಿ ಈ ಸರ್ಕಾರ ಸರಿಯಾಗಿ ನಡೆಸ್ತಿದ್ದಾರಾ.. ? ರಾಜ್ಯದಲ್ಲಿ ಸರ್ಕಾರ ಇದ್ಯಾ..? ರಾಜ್ಯದ ಜನ ಚುನಾವಣೆ ಯಾವಾಗ ಬರುತ್ತೆ ಅಂತ ಕಾಯ್ತಿದ್ದಾರೆ. ಪ್ರವೀಣ್ ( PRAVEEN ) ಹತ್ಯೆಯಾದಾಗ ಅವರ ಕಾರ್ಯಕರ್ತರೇ ಬೊಮ್ಮಾಯಿ ವಿರುದ್ಧ ಗಲಾಟೆ ಮಾಡಿದ್ದಾರೆ. ಕಟೀಲ್, ಸುನೀಲ್ ಕುಮಾರ್ ಮೇಲೆ ಗಲಾಟೆ ಮಾಡಿದ್ದಾರೆ. ಅವರನ್ನೆಲ್ಲ ಇವರು ಉಪಯೋಗಿಸಿಕೊಳ್ತಿದ್ದಾರೆ. ಇಷ್ಟೊಂದು ಭ್ರಷ್ಟಾಚಾರ ರಾಜ್ಯದಲ್ಲಿ ಇತ್ತಾ..? ಎಂದು ಪ್ರಶ್ನೆ ಮಾಡಿದ್ದಾರೆ. ಇದರ ಬಗ್ಗೆ ಸಭೆಯಲ್ಲಿ ನಾವು ಚರ್ಚೆ ಮಾಡಿದ್ದೇವೆ. ಯುವಕರು,ಮಹಿಳೆಯರಿಗೆ ನ್ಯಾಯ ಸಿಕ್ಕಲ್ಲ. ಈ ಸರ್ಕಾರವನ್ನು ಬೇಗ ಕಿತ್ತು ಹಾಕ್ಬೇಕು. ಅದಕ್ಕೆ ಏನೇನು ಕಾರ್ಯಕ್ರಮ ಮಾಡ್ಬೇಕು ಎಂದು ಅದರ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ರು.
ಇದನ್ನೂ ಓದಿ : – ವಿಧಾನಸಭೆ ಚುನಾವಣೆ ತಯಾರಿಗೆ ಅಖಾಡಕ್ಕಿಳಿದ ಕಾಂಗ್ರೆಸ್