ನಾಯಿ ಮರಿ ಹೇಳಿಕೆಗೆ ನೀವು ತಪ್ಪು ತಿಳ್ಕೊಂಡಿದ್ದೀರಿ. ಹಳ್ಳಿ ಭಾಷೆಯಲ್ಲಿ ನಾನು ಮಾತಾಡಿದ್ದೇನೆ. ಹಳ್ಳಿ ಭಾಷೆಯಲ್ಲಿ ಹೆದರೋರಿಗೆ ನಾಯಿ ಮರಿ ತರಹ ಬೆಕ್ಕಿನ ಮರಿ ತರ ಇರ್ತೀವಿ ಅಂತೀವಿ ಎಂದು ಹುಬ್ಬಳ್ಳಿ (huballi) ಯ ವಿಮಾನ ನಿಲ್ದಾಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(siddaramaih) ಹೇಳಿದ್ದಾರೆ.
ಮುಖ್ಯಮಂತ್ರಿಗಳಿಗೆ ಅಗೌರವ ಮಾಡಬೇಕು ಅನ್ನೋ ಉದ್ದೇಶ ಇಲ್ಲ. ಪ್ರಧಾನ ಮಂತ್ರಿ ಬಳಿ ಮುಖ್ಯಮಂತ್ರಿ ಧೈರ್ಯವಾಗಿ ಇರಬೇಕು ಅನ್ನೋ ಅರ್ಥದಲ್ಲಿ ಹೇಳಿದ್ದೇನೆ. ಯಡಿಯೂರಪ್ಪನವರಿಗೆ ರಾಜಾಹುಲಿ ಅನ್ನೋದು ಅವಮಾನನಾ.? ನನಗೆ ಟಗರು, ಹೌದು ಹುಲಿಯಾ ಅನ್ನೋದು ಅವಮಾನನಾ..? ಪ್ರಾಣಿ,ಪಕ್ಷಿಗಳಿಗೆ ಮರಗಳಿಗೆ ಹೋಲಿಕೆ ಮಾಡೋದು ಸಹಜ. ರಾಜ್ಯದ ಹಿತದೃಷ್ಟಿಯಿಂದ ನಾನು ಹೇಳಿರೋದು. ಇದನ್ನು ಓದಿ :- ಯೋಗೇಶ್ವರ್ ಗೆ ನಾನು ಬಿಜೆಪಿಗೆ ಬರಬೇಕೆಂಬ ಆಸೆ ಇದೆ – ಸುಮಲತಾ ಅಂಬರೀಶ್
ವಿಧಾನಸೌಧಕ್ಕೆ ಹಣ ತಗೊಂಡು ಬಂದಿದ್ದಾರೆ ಅಂದ್ರೆ ಏನು ಅರ್ಥ ?. ಮಂತ್ರಿಗಳಿಗೆ ಇಲ್ಲ ಮುಖ್ಯಮಂತ್ರಿಗಳಿಗೆ ಕೊಡೋಕೆ ತಂದಿರಬಹುದು. ಇದು ನಿಜ ಇರಬಹುದು ಸುಳ್ಳು ಇರಬಹುದು. ಇಂಜಿನಿಯರ್ ಯಾಕೆ ವಿಧಾನಸೌಧಕ್ಕೆ ದುಡ್ಡು ತಗೊಂಡು ಬರ್ತಾನೆ..? ಒಂದು ಟ್ರಾನ್ಸಫರ್ ಇರಬೇಕು. ಇಲ್ಲ ಲಂಚ ಕೊಡೋಕೆ ಬಂದಿರಬೇಕು ಹಾಗೆ ಸಂಶಯ ಪಡಬಹುದು. ಈ ಬಗ್ಗೆ ವಿಚಾರಣೆ ಮಾಡಲಿ ಸತ್ಯ ಗೊತ್ತಾಗುತ್ತೆ. ರಾಮಮಂದಿರ ( rama mandira ) ಕಟ್ಟಿರೋದಕ್ಕೆ ನಮ್ಮ ವಿರೋಧ ಇಲ್ಲ. ಅದನ್ನು ರಾಜಕೀಯವಾಗಿ ಬಳಸಿಕೊಳ್ಳೋದಕ್ಕೆ ನಮ್ಮ ವಿರೋಧ. ನಾವು ಹಳ್ಳಿಗಳಲ್ಲಿ ರಾಮಮಂದಿರ ಆಂಜನೇಯ ಗುಡಿ ಕಟ್ಟಿಲ್ವಾ ? ಕೋಮುವಾದ ಮಾಡೋ ಪಾರ್ಟಿ ಜನರನ್ನ ಆಳೋಕೆ ಯೋಗ್ಯ ಅಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಯೋಗ್ಯ ಅಲ್ಲ ಎಂದು ಬಿಜೆಪಿ ವಿರಿದ್ದ ಕಿಡಿಕಾರಿದ್ರು.
ಇದನ್ನು ಓದಿ :- ಮೈಸೂರು ಹೆದ್ದಾರಿಯಲ್ಲಿ ಬೈಕ್. ಆಟೋಗಳಿಗೆ ಪ್ರವೇಶವಿಲ್ಲ – ಪ್ರತಾಪ್ ಸಿಂಹ