ಬಿಜೆಪಿ ಗೆ ಚೆನ್ನಾಗಿ ಗೊತ್ತಿದೆ ಜೆಡಿಎಸ್ ಮುಂದಿನ ದಿನ ಅಧಿಕಾರಕ್ಕೆ ಬರುತ್ತೆ ಅಂತ ಬಿಜೆಪಿಯ ಬಿ ಟೀಮ್ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರೇ. ನಾವು ಕನ್ನಡಕ್ಕೆ ಕೈ ಇಟ್ಟಿತೀವಿ. ಆದ್ರೆ ನೀವು ಉತ್ತರ ಪ್ರದೇಶಕ್ಕೆ ಕೈ ಇಟ್ಟಿದೀರಾ ಎಂದು ಡಿಕೆಶಿ ಹಾಗೂ ಸಿದ್ದರಾಮಯ್ಯ ವಿರುದ್ದ ಸಿಎಂ ಇಬ್ರಾಹಿಂ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಬಿ ಟೀಮ್ ಬಿ ಟೀಮ್ ಅಂತ ಇದ್ದ ಸಿದ್ದರಾಮಯ್ಯ ಗೆ ಈಗ ಉಸಿರು ಇಲ್ಲ. ಕೂಡಲೇ ನಿಮ್ಮ ನಾಯಕ ಸಿದ್ದರಾಮಯ್ಯ ನನ್ನು ಅಧಿಕಾರ ದಿಂದ ಕೈ ಬಿಡಿ. ರಾಹುಲ್ ಗಾಂಧಿ ಅವರೇ ನಿಮಗೆ ತಾಕತ್ತು ಇದ್ರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನನ್ನು ಕೆಳಗೆ ಇಳಿಸಿ. ಇವತ್ತು ಕುಪೇಂದ್ರ ರೆಡ್ಡಿ ನ ಸೋಲಿಸಿದ್ದೀರಾ. 19 ನೇ ತಾರೀಕಿಗೆ ಮೈಸೂರಿನಲ್ಲಿ ಇನ್ನು ಹಲವು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಗೆ ಸೇರ್ಪಡೆ ಆಗ್ತಾರೆ. ಗುಬ್ಬಿ ಶಾಸಕ ಮತ್ತು ಕೋಲಾರ ಶಾಸಕರ ಬಗ್ಗೆ ನಾವೇನು ತಲೆ ಕೆಡಿಸಿಕೊಳ್ಳೋದಿಲ್ಲ. ಕೇವಲ ಅಧಿಕಾರಕ್ಕೆ ನಾವು ರಾಜಕೀಯಕ್ಕೆ ಬಂದಿಲ್ಲ. ಬೊಮ್ಮಾಯಿ ಅತ್ರ ದುಡ್ಡು ಸಿಗ್ತಾ ಇಲ್ಲ. ಅದಿಕ್ಕೇ ಏರ್ಪೋರ್ಟ್ ಅಲ್ಲಿ ಸಿದ್ದರಾಮಯ್ಯ ಯಡಿಯೂರಪ್ಪ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ.
ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಈ ಹಿಂದೆ ಡೀಲ್ ಮಾಡ್ಕೊಂಡಿದ್ರು. ಆದ್ರೆ ಈಗ ಬೊಮ್ಮಾಯಿ ಸರ್ಕಾರದಲ್ಲಿ ಇಬ್ಬರಿಗೂ ಹಣ ಸಿಕ್ತಿಲ್ಲ ಅಂತ ಏರ್ಪೋರ್ಟ್ ಅಲ್ಲಿ ಚರ್ಚೆ ಮಾಡಿದ್ದೀರಾ. 12 ಜನರನ್ನು ಸಿದ್ದರಾಮಯ್ಯ ಮುಂಬೈಗೆ ಕಳಿಸಿ ಮಂಚದ ಮೇಲೆ ಮಲಗಿಸಿ ವೀಡಿಯೋ ಮಾಡ್ಸಿ ಯಡಿಯೂರಪ್ಪನ ಸಿಎಂ ಮಾಡಿದ್ರಿ. ಸಿದ್ದರಾಮಯ್ಯ ಯಡಿಯೂರಪ್ಪ ನ ಜೊತೆಗೆ ಈಗಲೂ ಡೀಲ್ ಮಾಡ್ಕೊಂಡ್ರಲ್ಲ ಏರ್ ಪೋರ್ಟ್ ನಲ್ಲಿ . ಸಿಟಿ ರವಿ ಅದಕ್ಕೆ ಕಾಂಗ್ರೆಸ್ ಆಫೀಸಿಗೆ ಹೋಗಿ ಅಭಿನಂದನೆ ಸಲ್ಲಿಸಿದ್ದು. ಒಬ್ಬರ ಹತ್ರ ತಾಳಿ ಕಟ್ಟಿಸಿಕೊಳ್ಳೋದು ಇನ್ನೊಬ್ಬರ ಹತ್ತಿರ ಬಾನ ಮಾಡ್ತೀರಲ್ಲ. ನಾಚಿಕೆಗಟ್ಟವರು ನೀವು ಮಾನಗೆಟ್ಟವರು ನೀವು ಎಂದು ಸಿದ್ದರಾಮಯ್ಯ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ರು.
ಇದನ್ನೂ ಓದಿ : – ಯೋಗದಲ್ಲೂ ರಾಜಕಾರಣ – ಪ್ರತಾಪ್ ಸಿಂಹ, ರಾಮದಾಸ್ ನಡುವೆ ಪೈಪೋಟಿ