545 ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅಕ್ರಮ ವಿಚಾರದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಅವರನ್ನ ಹಿಡಿಯದೆ ಬಿಟ್ರೆ ಅದು ವೈಫಲ್ಯ. ನಾನೇ ಅದನ್ನ ಸಿಐಡಿಗೆ ಕೊಟ್ಟಿದ್ದು. ಎಲ್ಲಿದ್ರೂ ಅರೆಸ್ಟ್ ಮಾಡ್ತಾರೆ.
ಅವರು ನಿನ್ನೆ ಕೋರ್ಟ್ ಗೆ ಹೋಗಿದ್ರು, ಬೇಲ್ ಸಿಕ್ಕಿಲ್ಲ ಎನ್ನುವ ಮಾಹಿತಿ ಇದೆ. ಅವರಿಗೊಂದು ಇವರಿಗೊಂದು ಇಲ್ಲ, ನಮ್ಮ ಆಡಳಿತದಲ್ಲಿ ಕಾನೂನು ಎಲ್ಲರಿಗೂ ಒಂದೇ. ಎಲ್ಲರನ್ನು ಅರೆಸ್ಟ್ ಮಾಡ್ತೇವೆ ಎಂದು ಹೇಳಿದ್ದಾರೆ.
ಇದನ್ನು ಓದಿ :– ಉರ್ದು ಶಾಲೆ ಮುಚ್ಚುವ ಚಿಂತನೆ ಇಲ್ಲ – ಬಿ.ಸಿ ನಾಗೇಶ್
ಹುಬ್ಬಳ್ಳಿ ಗಲಭೆ ವಿಚಾರ
ಕೆ ಜಿ ಹಳ್ಳಿ, ಡಿ ಜೆ ಹಳ್ಳಿ ಹಾಗೂ ಹುಬ್ಬಳ್ಳಿ ಗಲಭೆಗೆ ಸಾಮ್ಯತೆ ಇದೆ. ಪೋಲಿಸರು ಸ್ವಲ್ಪ ವಿಕ್ ಆಗಿದ್ರೆ ಹುಬ್ಬಳ್ಳಿ ಹತ್ತಿ ಉರಿಯುತ್ತಿತ್ತು. ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಸಾಕಷ್ಟು ವಿಚಾರಣೆ ಆಗ್ಬೇಕು, ಇದರ ಹಿಂದೆ ಇರುವ ದೇಶದ್ರೋಹಿ ಸಂಘಟನೆಗಳು ಹೊರಬರ್ಬೇಕು. ತಪ್ಪಿತಸ್ಥರು ಅಲ್ಲದೇ ಇರುವವರನ್ನ ಬಂಧನ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಪೋಲೀಸರು ಸರಿ ದಾರಿಯಲ್ಲಿ ಹೋಗ್ತಾ ಇದ್ದಾರೆ.
ಇದು ಕಾಂಗ್ರೆಸ್ ಸರ್ಕಾರ ಅಲ್ಲ, ಅವ್ರನ್ನ ಹಿಡಿ, ಇವ್ರನ್ನ ಬಿಡಿ ಎನ್ನುವುದಕ್ಕೆ. ಅಬ್ಬಯ್ಯ ನವ್ರ ಓಟ್ ಬ್ಯಾಂಕ್ ರಾಜಕಾರಣಕ್ಕಿಂತ ರಾಜ್ಯದ ನೆಮ್ಮದಿ ಮುಖ್ಯ. ಇದು ಕಣ್ಣು ಒರೆಸುವ ತಂತ್ರ ಅಲ್ಲ. ನಮಗೆ ದೇಶದ ನೆಮ್ಮದಿ ಮೊದಲು, ದೇಶದ ಏಕತೆ ಮೊದಲು. ಯಾವ ಸಂಘಟನೆಯನ್ನ ರದ್ದು ಮಾಡ್ಬೇಕು ಎನ್ನುವುದು ಕೇಂದ್ರ ಸರ್ಕಾರದ ನಿರ್ಧಾರವಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಕಷ್ಟು ಜನರ ಕೇಸ್ ಗಳನ್ನ ವಾಪಸ್ ತೆಗದುಕೊಂಡ್ರು. ಅದರ ಪರಿಣಾಮವನ್ನ ನಾವು ಅನುಭವಿಸುತ್ತಿದ್ದೇವೆ. ಕೆ ಜಿ ಹಳ್ಳಿ ಡಿ ಜೆ ಹಳ್ಳಿಯಲ್ಲಿ ಎಷ್ಟು ಜನರನ್ನ ಅರೆಸ್ಟ್ ಮಾಡಿದ್ದೇವೆ. ಇದು ಕಾಂಗ್ರೆಸ್ ಸರ್ಕಾರ ಇದಿದ್ರೆ ಆಗ್ತಿತ್ತಾ ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ :– ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ – ಪರೀಕ್ಷೆ ಬರೆಯಲು ಸಜ್ಜಾದ ವಿದ್ಯಾರ್ಥಿಗಳು