ಕೊಪ್ಪಳ (Koppala) ದ ಜನಾರ್ಧನ ರೆಡ್ಡಿ (Janrdhan reddy) ಗಂಗಾವತಿ ಮನೆಯ ಗೃಹ ಪ್ರವೇಶ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿ ಪತ್ನಿ ಅರುಣಾಲಕ್ಷ್ಮೀ (Aruna lakshmi) ಯಿಂದ ಹೋಮ- ಹವನ ನಡೆದಿದೆ. ಪುರೋಹಿತರು ನಿನ್ನೆ ರಾತ್ರಿಯಿಂದಲೇ ವಾಸ್ತು ಪೂಜೆ ಸೇರಿ ವಿವಿಧ ಪೂಜೆ ಮಾಡಿದ್ದಾರೆ. ಮೂರು ಮನೆಯಲ್ಲಿ ರಾತ್ರಿಯಿಂದ ವಿಶೇಷ ಪೂಜೆ ನಡೆದಿದೆ.
ಕೊಪ್ಪಳದ ಗಂಗಾವತಿ (Gangavathi) ಯಲ್ಲಿ ಮನೆ ಖರೀದಿ ಮಾಡಿ ರೆಡ್ಡಿ ಗೃಹ ಪ್ರವೇಶ (House warming) ಮಾಡಿದ್ದಾರೆ. ಇಂದು ಬೆಳಗ್ಗೆ 5 ಗಂಟೆಯಿಂದ ರುದ್ರಾಭಿಷೇಕ ಮತ್ತು ಗೋ ಪೂಜೆ ನಡೆದಿದೆ. ಕೇವಲ ಕುಟುಂಬ ಸದಸ್ಯರು ಮಾತ್ರ ಗೃಹ ಪ್ರವೇಶದಲ್ಲಿ ಭಾಗಿಯಾಗಿದ್ದಾರೆ. ಮಾಜಿ ಸಚಿವ ಜನಾರ್ಧನ ರೆಡ್ಡಿ ರಾಜಕೀಯ ರೀ ಎಂಟ್ರಿಗೆ ಗೃಹ ಪ್ರವೇಶ ಸಾಕ್ಷಿಯಾಗಲಿದೆ. ರೆಡ್ಡಿ ದೆಹಲಿ ಪ್ರವಾಸ ಹಿನ್ನೆಲೆ ಪತ್ನಿ ಅರುಣಾಲಕ್ಷ್ಮೀ ಅವರಿಂದ ಗೃಹ ಪ್ರವೇಶ ನಡೆದಿದೆ.
ರೆಡ್ಡಿ ರಾಜಕಾರಣಕ್ಕೆ ಗೃಹ ಪ್ರವೇಶ ಮುನ್ನುಡಿ ಆಗಲಿದೆ. ಗಂಗಾವತಿಯಿಂದಲೇ ರಾಜ್ಯ ರಾಜಕಾರಣಕ್ಕೆ ರೆಡ್ಡಿ ರೀ ಎಂಟ್ರಿ ಕೊಡಲಿದ್ದಾರೆ. ಇಂದು ದೆಹಲಿಯಲ್ಲಿ ರೆಡ್ಡಿ ಹೊಸ ಪಕ್ಷ ಘೋಷಣೆ ಮಾಡುವ ಸಾಧ್ಯತೆಯಿದೆ. ರಾಜ್ಯ ಬಿಜೆಪಿ ಪಾಳೆಯದಲ್ಲಿ ತಳಮಳ ಸೃಷ್ಟಿಯಾಗಿದೆ. ಇದನ್ನು ಓದಿ : – ಕೊನೆಗೂ ಚಿತ್ರದುರ್ಗದ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಿಸಿ ಸರ್ಕಾರ ಆದೇಶ
ಇದೇ ವೇಳೆ ಜನಾರ್ಧನ ರೆಡ್ಡಿ ಅವರು ಜನರ ಮಧ್ಯೆ ಇರಬೇಕು ಅಂತ ನಿರ್ಧಾರ ಮಾಡಿದ್ದಾರೆ ಎಂದು ಜನಾರ್ಧನ ರೆಡ್ಡಿ ಪತ್ನಿ ಅರುಣಾಲಕ್ಷ್ಮೀ ಹೇಳಿದ್ದಾರೆ. ರಾಜಕೀಯದ ಬಗ್ಗೆ ಮುಂದಿನ ವಾರ ಅವರೇ ಎಲ್ಲವನ್ನ ಮಾತನಾಡ್ತಾರೆ. ದೇವಾನು ದೇವತೆಗಳಿಗೆ ವನವಾಸ ತಪ್ಪಿದ್ದಿಲ್ಲ. ಕಳೆದ 12 ವರ್ಷದಿಂದ ರೆಡ್ಡಿಯವರು ಕಷ್ಟ ಅನುಭವಿಸಿದ್ದಾರೆ. ಇವಾಗ ಜನಸೇವೆಗೆ ಮರಳೋಕೆ ನಿರ್ಧರಿಸಿದ್ದಾರೆ. ಬೆಂಗಳೂರಿನಲ್ಲಿ ಮನೆ ಮಾಡಿದ್ರೆ ದೂರ ಆಗ್ತಿತ್ತು. ಹೀಗಾಗಿ ಗಂಗಾವತಿಯಲ್ಲಿ ಮನೆ ಮಾಡಿದ್ದೇವೆ ಎಂದು ಅರುಣಾಲಕ್ಷ್ಮೀ ತಿಳಿಸಿದ್ದಾರೆ.
ಇದನ್ನು ಓದಿ : – ಬೆಂಗಳೂರಿನಲ್ಲಿ ಇಂದು ಕೂಡ ವರುಣನ ಅಬ್ಬರ ….!