ನಾನು ಯಾವುದೇ ಇಕ್ಕಟ್ಟಿನ ಪರಿಸ್ಥಿತಿಯಲ್ಲಿಲ್ಲ. ಬಹಳ ಮುಕ್ತವಾಗಿದ್ದೇನೆ ಎಂದು ಹುಬ್ಬಳ್ಳಿಯಲ್ಲಿ (Hubballi) ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (Hd.Kumaraswamy) ಹೇಳಿದ್ದಾರೆ .
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪಶ್ಚಿಮ, ವಾಯವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ಬಂದಿದ್ದೇನೆ. ಇಂದು ಮತ್ತು ನಾಳೆ ಈ ಭಾಗದ ಶಿಕ್ಷಕರಿಗೆ ಮನವಿ ಸಲ್ಲಿಸಲು ಬಂದಿದ್ದೇನೆ. ಬಿಜೆಪಿ ಅಭ್ಯರ್ಥಿ 48 ಸಾವಿರ ಶಿಕ್ಷಕರನ್ನ ನೇಮಕ ಮಾಡಿಕೊಂಡಿದ್ದೆನೆಂದು ಪ್ರಚಾರ ಮಾಡುತ್ತಿದ್ದಾರೆ. ಶಿಕ್ಷಕರನ್ನ ನೇಮಕಾತಿ ಮಾಡಿಕೊಂಡಿದ್ದು ಅವರಲ್ಲ, ನಾನು ಎಂದು ಬಸವರಾಜ ಹೊರಟ್ಟಿ (Basavaraj horatti) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ . ಹೊಸ ಪಿಂಚಣಿ ವಿಚಾರವಾಗಿ ಈಗ ಮಾತನಾಡುತ್ತಿದ್ದಾರೆ. ಸಭಾಪತಿ ಇದ್ದಾಗ ಸರ್ಕಾರದ ಮೇಲೆ ಒತ್ತಡ ಹಾಕಿ ಮಾಡಬಹುದಿತ್ತಲ್ಲ. ಬಿಜೆಪಿ ಅಭ್ಯರ್ಥಿ ಮತ್ತೇಕೆ ಮಾಡಲಿಲ್ಲ. ಸೋನಿಯಾ ಗಾಂಧಿ (Soniya gandhi) , ಕೈ ನಾಯಕರ ಜತೆ ಮಾತುಕತೆ ಮಾಡಿದ್ದೇನೆ ಅಂತ ಒದಂತಿ ಇದೆ. ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಯಾರ ಜೊತೆಯೂ ಮಾತನಾಡಿಲ್ಲ. ಈ ಜಂಜಾಟಗಳಿಂದ ದೂರವಿರಬೇಕು ಅಂತ ಸಿಂಗಪೂರ್ ಗೆ ಹೋಗಿದ್ದೆ.ಅನೇಕ ವಿಶ್ಲೇಷಣೆ ಕೇಳಿದ್ದೇನೆ; ಜೆಡಿಎಸ್ ಪಕ್ಷವನ್ನ ಅವಮಾನಿಸಿದ್ದಾರೆ. ನಮ್ಮಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿದ್ದೇವೆ. 32 ನಮ್ಮ ಮತಗಳಿವೆ, ಒಂದಿಬ್ಬರಿಗೆ ಅಸಮಾಧಾನ ಇದೆ .ಆದರೆ, 32 ಮತಗಳೂ JDS ಪಕ್ಷಕ್ಕೇ ಬರುತ್ವೆ ಅನ್ನೊ ನಂಬಿಕೆ ಇದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ .
ಇದನ್ನೂ ಓದಿ : – ಅಡ್ಡದಾರಿ ಹಿಡಿದು ಪೊಲೀಸರ ಅತಿಥಿಯಾದ ನಿರ್ಮಾಪಕ