ಪೋಲೆಂಡ್ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಜೋ ಬಿಡೆನ್ (Joe Biden) ಉಕ್ರೇನ್ (Ukraine)
ವಿದೇಶಾಂಗ ಮತ್ತು ರಕ್ಷಣಾ ಸಚಿವರನ್ನು ಭೇಟಿ ಮಾಡಿದ್ದಾರೆ.
ಪೋಲೆಂಡ್ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಜೋ ಬಿಡೆನ್ (Joe Biden) ಉಕ್ರೇನ್ (Ukraine)
ವಿದೇಶಾಂಗ ಮತ್ತು ರಕ್ಷಣಾ ಸಚಿವರನ್ನು ಭೇಟಿ ಮಾಡಿದ್ದಾರೆ. ರಷ್ಯಾ ದಾಳಿ ಬಳಿಕ ಕೀವ್ನ ಉನ್ನತ ಅಧಿಕಾರಿಗಳೊಂದಿಗೆ ಮೊದಲ ಬಾರಿಗೆ ಜೋ ಬಿಡೆನ್ ಮಾತುಕತೆ ನಡೆಸಿದ್ದಾರೆ. ಉಕ್ರೇನ್ ಮೇಲೆ ರಷ್ಯಾ (RUSSIA) ದ ಆಕ್ರಮಣವನ್ನು “ಮುಕ್ತ ಜಗತ್ತು” ವಿರೋಧಿಸುತ್ತದೆ ಎಂದು ಜೋ ಬಿಡೆನ್ ಹೇಳಿದ್ದಾರೆ. ವ್ಲಾಡಿಮಿರ್ ಪುಟಿನ್ (Vladimir Putin ) ಅವರನ್ನು ತಡೆಯುವ ಅಗತ್ಯತೆಯ ಬಗ್ಗೆಯೂ ಪ್ರತಿಪಾದಿಸಿದ್ದಾರೆ. ರಷ್ಯಾದ ಆಕ್ರಮಣ ಪ್ರಾರಂಭವಾದ 31 ದಿನಗಳಲ್ಲಿ ಉಕ್ರೇನ್‌ನಲ್ಲಿನ 136 ಮಕ್ಕಳನ್ನು ರಷ್ಯಾ ಕೊಂದಿದೆ ಎಂದು ಉಕ್ರೇನ್‌ನ ಪ್ರಾಸಿಕ್ಯೂಟರ್ ಜನರಲ್ ಕಚೇರಿ ಟೆಲಿಗ್ರಾಮ್ ಅಪ್ಲಿಕೇಶನ್‌ನಲ್ಲಿನ ಸಂದೇಶದಲ್ಲಿ ತಿಳಿಸಿದೆ.
ಕಳೆದ ವಾರ ಮಾರಿಪೋಲ್ ಥಿಯೇಟರ್‌ನಲ್ಲಿ ಆಶ್ರಯವಾಗಿ ಬಳಸಲಾಗುತ್ತಿರುವ ರಷ್ಯಾದ ವೈಮಾನಿಕ ದಾಳಿಯಲ್ಲಿ ಸುಮಾರು 300 ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ. ಬಿಡೆನ್ ಅವರ ಯುರೋಪ್ ಭೇಟಿಯು ಸಂಪೂರ್ಣವಾಗಿ ರಷ್ಯಾ- ಉಕ್ರೇನ್ ಯುದ್ಧದ ಮೇಲೆ ಕೇಂದ್ರೀಕೃತವಾಗಿದೆ. ಬಿಡೆನ್ ಯುರೋಪ್ ಭೇಟಿ ಈ ಸಂದರ್ಭದಲ್ಲಿ ತುಂಬಾ ಮಹತ್ವ ಪಡೆದುಕೊಂಡಿದೆ. ಉಕ್ರೇನ್ ಮೇಲೆ ದಾಳಿ ಮುಂದುವರಿಸಿರುವ ರಷ್ಯಾಗೆ ಅಮೆರಿಕ ಮಾಸ್ಟರ್ ಸ್ಟ್ರೋಕ್ ನೀಡಿದೆ. ರಷ್ಯಾದ ತೈಲ ಆಮದುಗಳ ಮೇಲೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಈಗಾಗಲೇ ನಿರ್ಬಂಧ ಘೋಷಿಸಿದ್ದಾರೆ.